ಟ್ರಂಪ್ ಮಹಾಭಿಯೋಗಕ್ಕೆ 46 ನಗರಗಳಲ್ಲಿ ಪ್ರತಿಭಟನೆ
Team Udayavani, Jul 4, 2017, 3:45 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿ ಇನ್ನೂ ಒಂದು ವರ್ಷವೂ ಕಳೆದಿಲ್ಲ. ಅಷ್ಟರಲ್ಲೇ ಅವರ ಮಹಾಭಿಯೋಗಕ್ಕೆ ಒತ್ತಾಯಿಸಿ ಅಮೆರಿಕದಾದ್ಯಂತ ಪ್ರತಿಭಟನಾ ರ್ಯಾಲಿಗಳು ನಡೆಯತೊಡಗಿವೆ. ಇಲ್ಲಿನ 46 ನಗರಗಳಲ್ಲಿ, ಭಾನುವಾರ ಭಾರೀ ಪ್ರತಿಭಟನೆಗಳು ನಡೆದಿದ್ದು, ಜನರು ಮಹಾಭಿಯೋಗಕ್ಕೆ ಅಮೆರಿಕ ಸಂಸತ್ತನ್ನು ಆಗ್ರಹಿಸಿದ್ದಾರೆ.
“ರೈಟ್ಸ್ ಆಕ್ಟಿವಿಸ್ಟ್ಸ್’ ಹೆಸರಿನ ಅಡಿಯಲ್ಲಿ ಈ ಪ್ರತಿಭಟನೆ ನಡೆದಿದ್ದು, ಟ್ರಂಪ್ ಅವರ ವಲಸೆ ನೀತಿ, ಅವರ ಉದ್ಯಮ ಒಪ್ಪಂದಗಳು, ಅಧ್ಯ ಕ್ಷೀಯ ಚುನಾವಣೆ ವೇಳೆ ಟ್ರಂಪ್ ಪರವಾಗಿ ರಷ್ಯಾ ಮಧ್ಯ ಪ್ರವೇಶಿಸಿರುವ ಸಾಧ್ಯತೆಗಳ ವಿರುದ್ಧ ಪ್ರತಿಭಟನೆ ನಡೆದಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಮೊದಲನೇ ದಿನದಿಂದಲೇ ಸಂವಿಧಾನವನ್ನು ಉಲ್ಲಂ ಸುತ್ತಲೇ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು, ಲಾಸ್ ಏಂಜಲೀಸ್ ಒಂದರಲ್ಲೇ ಪ್ರತಿಭಟನೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಇದೇ ವೇಳೆ ಟ್ರಂಪ್ ಅವರಿಗೆ ಸೇರಿದ, ನ್ಯೂಯಾರ್ಕ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್ ಎದುರೂ ಪ್ರತಿಭಟನೆ ನಡೆದಿದೆ. ಅಟ್ಲಾಂಟಾ, ಆಸ್ಟಿನ್, ಷಿಕಾಗೋ, ನ್ಯೂ ಓರಾÉನ್ಸ್‌ನಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ.
ಅಧ್ಯಕ್ಷ ಮಾನಸಿಕ ಅಸ್ವಸ್ಥರೇ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾನಸಿಕ ಅಸ್ವಸ್ಥರಾ ಗಿದ್ದು, ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಒತ್ತಾಯಗಳು ಕೇಳಿಬರತೊಡಗಿವೆ. ಈ ಕುರಿತು ಸಂಸದ ಜೇಮಿ ರಸ್ಕಿನ್ ವಿಧೇಯಕವೊಂದನ್ನು ಮಂಡಿಸಿದ್ದು, ಇದಕ್ಕೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನ ಕನಿಷ್ಠ 25 ಮಂದಿ ಡೆಮಾಕ್ರಾಟ್‌ಗಳ ಬೆಂಬಲ ದೊರೆತಿದೆ. ಮನಶಾÏಸ್ತ್ರಜ್ಞರು, ಇತರೆ ವೈದ್ಯರನ್ನು ಒಳಗೊಂಡ 11 ಮಂದಿಯ ಸಮಿತಿಯನ್ನು ರಚಿಸಿ, ಟ್ರಂಪ್ ಅವರ ಮಾನಸಿಕ ಸ್ಥಿತಿ ಸರಿಯಿದೆಯೇ, ಇಲ್ಲವೇ ಎಂಬುದನ್ನು ದೃಢಪಡಿಸಬೇಕು ಎಂದು ವಿಧೇಯಕದಲ್ಲಿ ಆಗ್ರಹಿಸಲಾಗಿದೆ. ಅಧ್ಯಕ್ಷೀಯ ಅಸಮರ್ಥತೆ ಇದ್ದಾಗ ಅಧ್ಯಕ್ಷರನ್ನು ಕಿತ್ತುಹಾಕುವಂಥ ನಿಯಮವು ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯಲ್ಲಿದೆ.
1967ರಲ್ಲಿ ಅಂದಿನ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಹತ್ಯೆ ನಡೆದಾಗ ಸಂವಿಧಾನಕ್ಕೆ ಇಂತಹುದೊಂದು ತಿದ್ದುಪಡಿಯನ್ನು ತರಲಾಗಿತ್ತು. ಇದೀಗ ಟ್ರಂಪ್ ಅವರ ವಿವಾದಾತ್ಮಕ ನೀತಿಗಳು, ಮಾಧ್ಯಮಗಳ ವಿರುದ್ಧ ಅವರು ನಡೆದುಕೊಳ್ಳುತ್ತಿರುವ ರೀತಿ ಮತ್ತಿತರ ಅಂಶಗಳನ್ನು ಮುಂದಿಟ್ಟುಕೊಂಡು ಅವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕುವ ಯತ್ನ ಆರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.