ಆಮೆ ಮೊಟ್ಟೆ ತೋರಿಸಿದ್ರೆ 5,000 ಬಹುಮಾನ
Team Udayavani, Jul 4, 2017, 3:45 AM IST
ಥಾಣೆ: ಸಮುದ್ರದ ಆಮೆಗಳು ಎಲ್ಲೆಲ್ಲಿ ಮೊಟ್ಟೆ ಇಟ್ಟಿವೆ ಎಂಬುದನ್ನು ಹುಡುಕಿಕೊಟ್ರೆ, ಅಂಥವರಿಗೆ 5 ಸಾವಿರ ರೂ.ಗಳ ಬಹುಮಾನ!
ಇದೇನು ಆಮೆಗಳೂ ಯಾವುದೋ ಅಪರಾಧ ಮಾಡಿ ತಲೆಮರೆಸಿಕೊಂಡಿವೆಯೇ ಎಂದು ಯೋಚಿಸುತ್ತಿದ್ದೀರಾ? ಖಂಡಿತಾ ಇಲ್ಲ. ಸಮುದ್ರದ ಆಮೆಗಳ ಸಂತತಿಯನ್ನು ಹೆಚ್ಚಿಸುವ ಮತ್ತು ಸಂರಕ್ಷಿಸುವ ಸಲುವಾಗಿ ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆ ಜಂಟಿಯಾಗಿ ಈ ಬಹುಮಾನ ಘೋಷಿಸಿದೆ. ಯಾರು ಮೊಟ್ಟೆ ಹುಡುಕಿಕೊಡುತ್ತಾರೋ ಅವರಿಗೆ 5 ಸಾವಿರ ರೂ. ಬಹುಮಾನ ನೀಡಲಾಗುವುದು ಮಾತ್ರವಲ್ಲ, ಆ ವ್ಯಕ್ತಿಗೆ “ಕಸವ್ ಪುರಸ್ಕಾರ್’ ನೀಡಿ ಗೌರವಿಸಲಾಗುವುದು ಎಂದೂ ಹೇಳಿವೆ.
ಸಮುದ್ರದ ಆಮೆಗಳು ಮಹಾರಾಷ್ಟ್ರದ ಕಡಲ ಬದಿಗೆ ಬಂದು ಮೊಟ್ಟೆಯಿಡುತ್ತವೆ. ಸ್ಥಳೀಯ ಮೀನುಗಾರರಿಗೆ ಈ ಆಮೆಗಳ ಬಗ್ಗೆ ಹೆಚ್ಚಿನ ಮಾಹಿತಿಯಿದೆ. ಆದರೆ, ಕಳೆದ 8-10 ವರ್ಷಗಳಿಂದ ಆ ಪ್ರದೇಶದಲ್ಲಿ ಒಂದೇ ಒಂದು ಮೊಟ್ಟೆಯೂ ನಮಗೆ ಕಾಣಸಿಕ್ಕಿಲ್ಲ. ಅದಕ್ಕಿಂತ ಮೊದಲು ಭಾರೀ ಸಂಖ್ಯೆಯ ಮೊಟ್ಟೆಗಳು ಸಿಗುತ್ತಿದ್ದವು. ಅದಕ್ಕಾಗಿ ಈ ಬಾರಿ ಬಹುಮಾನ ಘೋಷಿಸಿದ್ದೇವೆ ಎಂದು ದಹಾನು ವಿಭಾಗೀಯ ಅರಣ್ಯಾಧಿಕಾರಿ ನಾನಾಸಾಹೇಬ್ ಲಡಾRಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.