GST ಉತ್ತರಾಯಣ: ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ
Team Udayavani, Jul 4, 2017, 3:45 AM IST
ವ್ಯಾಪಾರಿಗಳು, ಗ್ರಾಹಕರು ಎಷ್ಟು ರೂ. ಮೊತ್ತದ ಖರೀದಿವರೆಗೆ ಬಿಲ್ ಪಡೆಯದೇ ವ್ಯವಹರಿಸಬಹುದು?
ರಾಧಾಕೃಷ್ಣ, ಪ್ರಾವಿಷನ್ ಸ್ಟೋರ್, ಹಾಸನ ಯಾವುದೇ ವ್ಯಾಪಾರದ ವಹಿವಾಟಿನ ವಾರ್ಷಿಕ ಮೊತ್ತ 20 ಲಕ್ಷ ರೂ. ಒಳಗಿದ್ದರೆ ಜಿಎಸ್‌ಟಿ ಅಡಿ ನೋಂದಣಿ ಅಗತ್ಯವಿಲ್ಲ. ಸ್ವಇಚ್ಛೆಯಿಂದ ಬಯಸಿದರೆ ನೋಂದಣಿ ಮಾಡಿಕೊಳ್ಳಬಹುದು. 200 ರೂ.ವರೆಗಿನ ಖರೀದಿಗೆ ಕಡ್ಡಾಯವಾಗಿ ಬಿಲ್ ಹಾಕುವಂತಿಲ್ಲ. ಚಿಲ್ಲರೆ ವ್ಯಾಪಾರದಲ್ಲಿ 200 ರೂ. ಮೀರಿದರೆ ಕಡ್ಡಾಯವಾಗಿ ಬಿಲ್ ಮಾಡಬೇಕು.ಇದು ವ್ಯಾಪಾರಿಗೂ ಅನ್ವಯವಾಗಲಿದ್ದು, ವ್ಯಾಪಾರಿ ಕೂಡ ಡೀಲರ್‌ಗೆ ಗ್ರಾಹಕರಾಗಿರುವುದರಿಂದ ಅವರು ಸಹ 200 ರೂ.ಗಿಂತ ಹೆಚ್ಚಿನ ಮೊತ್ತದ ಖರೀದಿಗೆ ಬಿಲ್ ಪಡೆಯುವುದು ಕಡ್ಡಾಯವಾಗಲಿದೆ.
ಕ್ರೆಡಿಟ್ ಕಾರ್ಡ್ ಬಳಸಿದರೆ ಎರಡು ಬಾರಿ ತೆರಿಗೆ ಕಡಿತವಾಗಲಿದ್ದು, ಬಳಕೆದಾರರಿಗೆ ಹೊರೆಯಾಗುತ್ತದೆ ಎಂಬ ಮಾತಿದೆಯೆಲ್ಲಾ?
ಸುಜಿತ್, ಖಾಸಗಿ ಕಂಪನಿ ಉದ್ಯೋಗಿ, ಬೆಂಗಳೂರು ಇದು ಸಂಪೂರ್ಣ ಸುಳ್ಳು. ಜಿಎಸ್‌ಟಿ ಜಾರಿ ಬಳಿಕ
ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸಿದರೆ ಎರಡು ಬಾರಿ ತೆರಿಗೆ ಕಡಿತವಾಗಲಿದೆ ಎಂಬ ಮಾತು ಸತ್ಯಕ್ಕೆ ದೂರವಾದುದು. ಹೊಸ ವ್ಯವಸ್ಥೆಯ ಯಾವ ಹಂತದಲ್ಲೂ ಎರಡು ಬಾರಿ ತೆರಿಗೆ ಕಡಿತಗೊಳಿಸಲು ಅವಕಾಶವಿಲ್ಲ. ಬ್ಯಾಂಕ್‌ನ ನಿಯಮಾವಳಿಯಂತೆ ನಿರ್ದಿಷ್ಟ ವ್ಯವಹಾರಕ್ಕೆ ನಿಗದಿತ ಪ್ರಮಾಣದ ತೆರಿಗೆ ಯಷ್ಟೇ ಕಡಿತವಾಗಲಿದೆ. ಈ ಬಗ್ಗೆ ಗೊಂದಲ ಬೇಡ .
– ಬಿ.ವಿ.ಮುರಳಿಕೃಷ್ಣ ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.