“ಮನುಷ್ಯನ ಹುಟ್ಟು ಒಂದು ಕಡೆ, ಬದುಕು ಮತ್ತೂಂದು ಕಡೆ’
Team Udayavani, Jul 4, 2017, 9:13 AM IST
ಕನಕಪುರ: ಮನುಷ್ಯನ ಹುಟ್ಟು ಒಂದು ಕಡೆಯಾದರೆ ಬದುಕು ಮತ್ತೂಂದು ಕಡೆಯಾಗುತ್ತದೆ. ಇದು ಪ್ರಕೃತಿ ನಿಯಮ ಎಂದು ಆರ್‌ಇಎಸ್ ಸಂಸ್ಥೆಯ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಹೇಳಿದರು.
ನಗರದ ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಮೇಜರ್ ಮುನಿರಾಜಪ್ಪ, ಡಾ.ಪುಟ್ಟಸ್ವಾಮಿ ಹಾಗೂ ಪ್ರೊ.ಜೋಗಯ್ಯ ವಯೋ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸನ್ಮಾನಿಸಿ ಮಾತನಾಡಿದರು. ರೂರಲ್ ಪದವಿ ಕಾಲೇಜಿನಲ್ಲಿ ಕಳೆದ 33 ವರ್ಷಗಳಿಂದ ಮುನಿರಾಜಪ್ಪ, ಪುಟ್ಟಸ್ವಾಮಿ, ಜೋಗಯ್ಯನವರು ತಮ್ಮ ವೃತ್ತಿ ಬದುಕನ್ನು ಆರಂಭಿಸಿ
ವಯೋನಿವೃತ್ತಿ ಹೊಂದಿದ್ದಾರೆ. ಅವರ ನಿವೃತ್ತಿ ಜೀವನ ಶುಭಕರವಾಗಿರಲಿ ಎಂದು ಹಾರೈಸಿದರು. ಸಂಸ್ಥೆಯ ಸಿ.ರಮೇಶ್ ಮಾತನಾಡಿ, ಸರ್ಕಾರದ ವಯೋ ನಿವೃತ್ತಿ ಜೀವನ ಮುಗಿದರೂ ಸಂಸ್ಥೆಗೆ ಅವರ ಸಲಹೆ ಮಾರ್ಗದರ್ಶನಗಳು ಅವಶ್ಯ ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಡಾ.ಮೇ ಜರ್ ಮನಿರಾಜಪ್ಪ ಮಾತನಾಡಿ, ವೃತ್ತಿಜೀವನದಲ್ಲಿ ಸಹೋದ್ಯೋಗಿಗಳು ಅತ್ಯಂತ ಸಹಕಾರ ನೀಡಿದ್ದಾರೆ. ಪ್ರಾಧ್ಯಾಪಕರು ಸೇರಿದಂತೆ ಆಡಳಿತ ಮಂಡಳಿ ಸಹಕಾರದಿಂದ 4 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತೆಂದು ಸ್ಮರಿಸಿದರು. ಡಾ.ಪುಟ್ಟಸ್ವಾಮಿ, ಪ್ರೊ. ಜೋಗಯ್ಯ
ತಮ್ಮ ವೃತ್ತಿಜೀವನ ಬದುಕಿನ ಆರಂಭದಿಂದ ಅಂತ್ಯದ ವರೆಗೆ ನೆನಪುಗಳನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರೊ. ಜೋಗಯ್ಯ ನನ್ನ ವೃತ್ತಿಜೀವನ ಕೊನೆಯ ಸಂಬಳವಾದ 51 ಸಾವಿರ ರೂ. ದೇಣಿಗೆಯಾಗಿ ನೀಡುತ್ತಿದ್ದೇನೆ. ಆಡಳಿತ ಮಂಡಳಿ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.