ದೇಶದಲ್ಲಿ ಕಾಡುತ್ತಿದೆ ಅಭದ್ರತೆ: ನಿಡುಮಾಮಿಡಿ ಶ್ರೀ
Team Udayavani, Jul 4, 2017, 10:51 AM IST
ಹೊಸಪೇಟೆ: ಹಿಂದೂತ್ವ ಹಾಗೂ ಗೋವು ರಾಜಕಾರಣದಿಂದ ದೇಶದಲ್ಲಿ ಅಭದ್ರತೆ ಕಾಡುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು, ಭಿನ್ನಾಭಿಪ್ರಾಯ ಬದಿಗಿಟ್ಟು, ಒಗ್ಗೂಡಬೇಕಿದೆ. ಇಲ್ಲವಾದಲ್ಲಿ ದೇಶಕ್ಕೆ ಬಹು ದೊಡ್ಡ ಕಂಟಕ ಎದು ರಾಗ ಲಿದೆ ಎಂದು ಬೆಂಗಳೂರು ನಿಡುಮಾಮಿಡಿ ಸಂಸ್ಥಾನಮಠದ ವೀರ ಭದ್ರಚೆನ್ನ ಮಲ್ಲ ಸ್ವಾಮೀಜಿ ಹೇಳಿದರು.
ಪಟ್ಟಣದ ಅಂಬೇಡ್ಕರ ಭವನದಲ್ಲಿ 70ನೇ ಸ್ವಾತಂತ್ರ್ಯೋತ್ಸ ವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಹಾರದ ಹಕ್ಕು ವಿಷಯ ಕುರಿತು ಅವರು ಮಾತನಾಡಿದರು. ವಿಶ್ವದಲ್ಲಿಯೇ ಅತಿ ಹೆಚ್ಚು ಗೋಮಾಂಸ ರಪು ಆಗುತ್ತಿರುವ ದೇಶಗಳಲ್ಲಿ ಭಾರತಕ್ಕೆ ಮೊದಲನೇ ಸ್ಥಾನದಲ್ಲಿದೆ. ಗೋಮಾಂಸ ಸೇವನೆ ಹಿಂದೂ ಧರ್ಮಕ್ಕೆ ವಿರೋಧ ಎಂಬ ಹಿಂದೂ ಧರ್ಮದ ಸಿದ್ಧಾಂತ ಕರು ಹಾಗೂ ಹಿಂಬಾಲಕರು, ಗೋಮಾಂಸ ರಫ್ತುನ್ನು ಏಕೆ ತಡೆಯಬಾರದು ಎಂದು ಪ್ರಶ್ನಿಸಿದರು. ಗೋಮಾಂಸ ರಫ್ತು ಮಾಡುವ ದಂಧೆ ಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿ ಯನ್ ಹಾಗೂ ದಲಿ ತ ನಾಗಲಿ ಇಲ್ಲ. ಶೇ.95ರಷ್ಟು ಮೇಲ್ವ ರ್ಗದ ಜನರೇ ಗೋಮಾಂಸ ರಫ್ತುನಲ್ಲಿ ತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಾಮಾಣಿಕರಾದರೇ ಕೂಡಲೇ ಗೋಮಾಂಸ ರಫ್ತಾಗುವುದನ್ನು ತಡೆಯಲಿ ಎಂದು
ಹೇಳಿದರು. ಹಿಂದೂತ್ವದ ರಾಜಕೀಯ ಭಾಗವಾಗಿ ಗೋವು ರಾಜಕಾರಣ ನಡೆಯುತ್ತಿದೆ. ಬಲವಂತವಾಗಿ ಹಿಂದೂತ್ವದ ರಾಜಕೀಯ ಭಾಗವಾಗಿ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯನ್ನು ದೇಶದ ಮೇಲೆ ಹೇರಲು ಅಣಿಯಾಗಿರುವುದು ದೇಶದ ಬಹು ದೊಡ್ಡ ಕಂಟಕ ವಾ ಗಿದೆ. ಇದನ್ನು ವಿಫಲಗೊಳಿಸಲು ರಾಜಕೀಯ ಪಕ್ಷಗಳು, ಒಗ್ಗೂ ಡ ಬೇಕು ಎಂದರು. ಮಾಜಿ ಶಾಸಕ ಶ್ರೀರಾಮರೆಡ್ಡಿ ವಿಷಯ ಮಂಡಿ ಸಿ ಮಾತ ನಾ ಡಿ ದರು. ಡಿಎಚ್‌ಎಸ್ ಸಂಚಾಲಕ ಎಂ.ಜಂಬಯ್ಯ ನಾಯಕ, ಯುಬಸವರಾಜ, ಗೋಪಾಲ ಕೃಷ್ಣ ಅರಳಿ ಹಳ್ಳಿ, ಜಿ.ತಿಪ್ಪಣ್ಣ, ಡಾ| ಮಲ್ಲಿಕಾರ್ಜುನ ಮಾನ್ಪಡೆ ವೇದಿಕೆ ಮೇಲಿದ್ದರು.
ಕಾಂಗ್ರೆಸ್ ಪಕ್ಷ ಕುದಿಯುವ ನೀರು, ಪ್ರಾದೇಶಿಕ ಪಕ್ಷ ಗಳುನಿಂತ ನೀರು, ಕಮ್ಯೂ ನಿಷ್ಟ್ ಪಕ್ಷ ಗಳು, ಪಾತಾಳ ಗಂಗೆ, ಬಿಜೆಪಿ ಪಕ್ಷ ಬೆಂಕಿ ಇದ್ದಂತೆ, ಇದನ್ನು ನಂದಿ ಸಲು ಎಲ್ಲಾ ಬಗೆಯ ನೀರು ಬೇಕು. ಬಚ್ಚಲು ನೀರು, ಶುದ್ಧ ನೀರು ಹಾಗೂ ಕುದಿಯುವ ನೀರಿನಿಂದ ಈ ಬೆಂಕಿ ನಂದಿ ಸಬೇಕು. ಇಲ್ಲ ವಾದಲ್ಲಿ ಮುಂದಿನ ದಿನ ದಲ್ಲಿ ದೇಶ ಹೊತ್ತಿ ಉರಿಯಲಿದೆ.
ವೀರಭದ್ರ ಚೆನ್ನಮಲ್ಲಸ್ವಾಮಿಜಿ, ನಿಡುಮಾಮಿಡಿ ಸಂಸ್ಥಾನ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.