ಮದ್ಯದ ಅಮಲಿನಲ್ಲಿ ತಾಯಿಯನ್ನೆ ಕೊಲೆಗೈದ ಮಗ
Team Udayavani, Jul 4, 2017, 11:50 AM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಮಗನೊಬ್ಬ ತನ್ನ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೈಯಪ್ಪನಹಳ್ಳಿಯ ಬಂಡೆನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸರಸ್ವತಿ(45) ಕೊಲೆಯಾದವರು. ಆರೋಪಿ ಪ್ರಭಾಕರ್(25)ನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕನಾಗಿರುವ ಪ್ರಭಾಕರ್ ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ನಂತರ ತಾಯಿ ಸರಸ್ವತಿ ಜತೆ ಜಗಳ ತೆಗೆದು ಅಲ್ಲೇ ಇದ್ದ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ.
ಬಂಡೆನಗರದ ಮನೆಯಲ್ಲಿ ತಂದೆ-ತಾಯಿಯೊಂದಿಗೆ ವಾಸವಿದ್ದ ಪ್ರಭಾಕರ್ ಆಟೋ ಓಡಿಸುತ್ತಿದ.ª ನಿತ್ಯ ಕುಡಿದು ಬರುತ್ತಿದ್ದ ಆತ ತಾಯಿಯೊಂದಿಗೆ ಜಗಳ ತೆಗೆಯುತ್ತಿದ್ದ. ಅದೇ ರೀತಿ ಭಾನುವಾರವೂ ಜಗಳ ತೆಗೆದಿದ್ದ. ವಿಕೋಪಕ್ಕೆ ಹೋದ ಜಗಳ ಕೊನೆಗೆ ಸರಸ್ವತಿ ಅವರ ಕೊಲೆಯಲ್ಲಿ ಅಂತ್ಯಗೊಂಡಿದೆ.
ಶವದ ಜತೆ ಇದ್ದ ಆರೋಪಿ: ಮದ್ಯದ ಅಮಲಿನಲ್ಲಿ ತಾಯಿಯನ್ನೆ ಕೊಲೈಗೈದ ಆರೋಪಿ ಪ್ರಭಾಕರ್ ಬೆಳಗ್ಗೆ 8 ಗಂಟೆವರೆಗೆ ತಾಯಿ ಶವದ ಪಕ್ಕದಲ್ಲಿಯೇ ನಿದ್ರಿಸಿದ್ದ. ಬೆಳಗ್ಗೆ ಮನೆಗೆ ಬಂದ ಸರಸ್ವತಿ ಅವರ ಪತಿ ನಟರಾಜ್ ಬಹಳಷ್ಟು ಬಾರಿ ಬಾಗಿಲು ಬಡಿದ್ದಾರೆ. ಆದರೆ, ಒಳಗಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ನಟರಾಜ್ ಅಕ್ಕ-ಪಕ್ಕದವರನ್ನು ವಿಚಾರಿಸಿದಾಗ ರಾತ್ರಿ ಮನೆಯಲ್ಲಿ ಗಲಾಟೆ ನಡೆದಿದ್ದನ್ನು ವಿವರಿಸಿದ್ದಾರೆ.
ನಂತರ ಬಾಗಿಲು ಒಡೆದು ನೋಡಿದಾಗ ತಾಯಿ ಶವದ ಸಮೀಪದಲ್ಲಿಯೇ ಪ್ರಭಾಕರ್ ಮಲಗಿದ್ದ. ಬಳಿಕ ಆತನನ್ನು ಎಚ್ಚರಗೊಳಿಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಆರೋಪಿ ಪ್ರಭಾಕರನನ್ನು ಬಂಧಿಸಿದ್ದಾರೆ. ಪ್ರಕರಣ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.