ಬಡ ತಾಯಂದಿರ ಕಣ್ಣೀರೊರೆಸಲು ಉಜ್ವಲ ಯೋಜನೆ
Team Udayavani, Jul 4, 2017, 11:57 AM IST
ಚಿಕ್ಕಮಗಳೂರು: ದೇಶದಲ್ಲಿ ಕಡುಬಡತನದಲ್ಲಿರುವ ಕುಟುಂಬಗಳ ತಾಯಂದಿರ ಕಣ್ಣೀರು ಒರೆಸುವ ಉದ್ದೇಶದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೆ ತರಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಚಂದ್ರೇಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಜ್ವಲ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು. ಕಟ್ಟಿಗೆ ಒಲೆ ಮುಂದೆ ಕಣ್ಣೀರು ಹಾಕುತ್ತಿದ್ದ ತಾಯಂದಿರ ಕಷ್ಟ ಅರಿತಿದ್ದ ಪ್ರಧಾನಿ ಮೋದಿ ಅವರು ಉಳ್ಳವರು ಸಬ್ಸಿಡಿ ಬಿಟ್ಟರೆ ಅದರಿಂದ ಬಡವರಿಗೆ ಗ್ಯಾಸ್ ಕೊಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ದೇಶದಲ್ಲಿ 1.5 ಕೋಟಿ ಜನ ಶ್ರೀಮಂತರು ಗ್ಯಾಸ್ ಸಬ್ಸಿಡಿ ಬಿಟ್ಟಿದ್ದಾರೆ. ದೇಶದಲ್ಲಿರುವ 10 ಕೋಟಿ ಕಡುಬಡವರಿಗೆ ಗ್ಯಾಸ್ ಕೊಡಲು ಇದರಿಂದ ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ 34 ಲಕ್ಷ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದು, ಜಿಲ್ಲೆಯಲ್ಲಿ 4 ಸಾವಿರ ಮಂದಿ ಸದ್ಯಕ್ಕೆ ಗ್ಯಾಸ್ ಸಂಪರ್ಕ ಪಡೆಯಲಿದ್ದಾರೆ. ಇನ್ನೂ 36 ಸಾವಿರ ಜನರಿಗೆ ಉಚಿತ ಗ್ಯಾಸ್ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆಯಲು ಯಾರಿಗೂ ಹಣ ಕೊಡಬೇಕಾಗಿಲ್ಲ. ಹಣ ಕೇಳಿದರೆ ನಮಗೆ ಅಥವಾ ಸಂಬಂಧಿಸಿದ ಇಲಾಖೆಗೆ ತಿಳಿಸಿ. ಗ್ಯಾಸ್ ಪಡೆದ ನಂತರ ಸಂರಕ್ಷಣೆ ದೃಷ್ಟಿಯಿಂದ ಫಲಾನುಭವಿಗಳಿಗೆ ಎಚ್‌ಪಿ
ಕಂಪನಿಯಿಂದಲೇ ತರಬೇತಿ ನೀಡಲಿದ್ದಾರೆ. ಒಂದು ವೇಳೆ ಅವಘಡ ನಡೆದಲ್ಲಿ ಜೀವವಿಮೆ ಕೂಡ ಸಿಗಲಿದೆ ಎಂದು
ಹೇಳಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಮೋದಿ ಸರ್ಕಾರ ಬಡವರ ಕಲ್ಯಾಣದ ಕೆಲಸ ಮಾಡುತ್ತಿದೆ. ಕುರಿ ಕೋಳಿ
ಕೊಟ್ಟು ಮೂಗಿಗೆ ತುಪ್ಪ ಸವರುವವರು ಮಾಡಿದಂತಹ ಯೋಜನೆ ಇದಲ್ಲ. ಬಡವರು ಸ್ವಾವಲಂಬಿಗಳಾಗಬೇಕು
ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಇದೇ ರೀತಿ ಜನಧನ್ ಯೋಜನೆ ತಂದು 24 ಕೋಟಿ ಜನರು
ಖಾತೆ ಹೊಂದುವಂತೆ ಮಾಡಲಾಯಿತು. ಮುದ್ರಾದಲ್ಲಿ ಜಿಲ್ಲೆಯ 9 ಸಾವಿರಕ್ಕೂ ಅಧಿಕ ಮಂದಿ ನಿರುದ್ಯೋಗಿಗಳು
ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಿದ್ದಾರೆ, ದಲಿತರಿಗಾಗಿ ಸ್ಟಾಂಡ್ ಅಪ್, ಯುವತಿಯರಿಗಾಗಿ ಸ್ಟಾರ್ಟ್
ಅಪ್ ಯೋಜನೆಗಳ ಮೂಲಕ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ ಎಂದು ಹೇಳಿದರು.
ಎಚ್‌ಪಿ ಕಂಪನಿಯ ವ್ಯವಸ್ಥಾಪಕ ನವೀನ್ ಮಾತನಾಡಿ, ಉಜ್ವಲ ಯೋಜನೆಯಲ್ಲಿ ಉಚಿತವಾಗಿ ಗ್ಯಾಸ್ ಸಂಪರ್ಕ
ಮಾತ್ರ ನೀಡಲಾಗುತ್ತಿದೆ. ಗ್ಯಾಸ್ ಮತ್ತು ¤ ಒಲೆ ಬೇಕಾದವರು ಅರ್ಜಿಯಲ್ಲಿ ನಮೂದು ಮಾಡಿದರೆ ಅದನ್ನೂ ನೀಡಲಿದ್ದು
ಆ ಹಣವನ್ನು ಸರ್ಕಾರದ ಸಬ್ಸಿಡಿಯಲ್ಲಿ 2 ವರ್ಷಗಳ ಕಾಲ ಕಂಪನಿ ಭರಿಸಿಕೊಳ್ಳಲಿದೆ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ, ಜಿಪಂ ಸದಸ್ಯರಾದ ಸೋಮಶೇಖರ್, ಜಸಂತಾ ಅನಿಲ್‌ಕುಮಾರ್, ರವೀಂದ್ರ, ನಗರಸಭೆ ಉಪಾಧ್ಯಕ್ಷ ರವೀಂದ್ರ ಪ್ರಭು, ತಾಪಂ ಉಪಾಧ್ಯಕ್ಷ ಸುರೇಶ್, ಗ್ಯಾಸ್ ವಿತರಕರ ಸಂಘದ ಅಧ್ಯಕ್ಷ ಚಂದ್ರಣ್ಣ, ನಾಗೇಂದ್ರರಾವ್ ತೆರದಾಳ್ ಮತ್ತಿತರರು ಹಾಜರಿದ್ದರು. ಸಾಂಕೇತಿಕವಾಗಿ ಕೆಲವರಿಗೆ ಉಜ್ವಲ ಸೌಲಭ್ಯ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.