ರಾಜೀವ್ ನಗರ ಬಡಾವಣೆ ನಿವೇಶನ ವಂಚಿತರ ಪ್ರತಿಭಟನೆ
Team Udayavani, Jul 4, 2017, 12:41 PM IST
ಮೈಸೂರು: ರಾಜೀವ್ ನಗರ ಬಡಾವಣೆ ನಿರ್ಮಿಸಿ ನಿವೇಶನ ನೀಡುವುದಾಗಿ ಹಣ ಕಟ್ಟಿಸಿಕೊಂಡು ಐದು ವರ್ಷವಾದರೂ ನಿವೇಶನವನ್ನೂ ನೀಡದೆ, ಹಣವನ್ನೂ ನೀಡದ ಹೋಮ್ ಡೆವಲಪರ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ನಿವೇಶನ ವಂಚಿತರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಹೋಮ್ ಡೆವಲಪರ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸೈಯದ್ ನಿಜಾಂಆಲೀ ನಿವೇಶನ ನೀಡುವುದಾಗಿ ನಂಬಿಸಿ ನಗರ ಹಾಗೂ ಹೊರಗಿನ ಸುಮಾರು ಎರಡು ಸಾವಿರ ಮಂದಿಗೆ ವಂಚಿಸಿದ್ದಾರೆ. 2005 ರಿಂದಲೂ ಮೂರುವರೆ ಕೋಟಿಯಷ್ಟು ಹಣ ಕಟ್ಟಿಸಿಕೊಂಡು ವಂಚನೆ ಮಾಡಿದ್ದು, ಈವರೆಗೆ ನೂರಾರು ಕೋಟಿ ಹಣವನ್ನು ವಂಚಿಸಿದ್ದಾರೆಂದು ಆರೋಪಿಸಿದರು.
ಈ ಸಂಬಂಧ ದೂರು ನೀಡಿದ ಪರಿಣಾಮ ಸಿಸಿಬಿ ತನಿಖೆ ನಡೆಸಿ ವರದಿ ನೀಡಿದ್ದರೂ, ಸರ್ಕಾರ ಈ ಸಂಬಂಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹಲವರು ಮಂದಿ ನ್ಯಾಯಾಲಯದ ಮೊರೆ ಹೋದ ಕಾರಣ 173 ಬಾರಿ ವಾರೆಂಟ್, ಸಮನ್ಸ್ ಜಾರಿಗೊಂಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹಾಗಾಗಿ ಕೂಡಲೇ ವ್ಯವಸ್ಥಾಪಕ ನಿರ್ದೇಶಕ ಸೈಯದ್ ನಿಜಾಂಆಲೀ ಯನ್ನು ಬಂಧಿಸಬೇಕು. ನಮ್ಮ ಹಣವನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ವೈ.ಗುರುಪ್ರಸಾದ್, ಕಾರ್ಯದರ್ಶಿ ಡಾ. ಕೆ.ಎಲ್. ಕೃಷ್ಣ, ಗಣೇಶ್‌ಮೂರ್ತಿ, ಶ್ರೀನಿವಾಸಪ್ರಸಾದ್, ಮಧುಶ್ರೀ, ಪ್ರಸನ್ನಕುಮಾರ್, ಗೀತಾ, ಹನುಮಂತರಾಜು ಸೇರಿದಂತೆ ನೂರಾರು ಮಂದಿ ನಿವೇಶನ ವಂಚಿತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.