ನೀನೆಂದರೆ ಇಷ್ಟ, ಒಂದೊಂದ್ಸಲ ಕಷ್ಟ!


Team Udayavani, Jul 5, 2017, 3:45 AM IST

neenandre-ista.jpg

ಅಕ್ಕ, ನೀನೇಕೆ ಹೀಗೆ? ಯಾರ ಜೊತೆಗೂ ಬೆರೆಯುವುದಿಲ್ಲ. ಬೆರೆತೆಯೆಂದರೂ ಕ್ಷಣಮಾತ್ರದಲ್ಲಿಯೇ ಮತ್ತೆ ಸಿಡಿಮಿಡಿಗೊಳ್ಳುವೆ. ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ. ಯಾವಾಗಲೂ ಏಕಾಂಗಿಯಾಗಿರುವುದಕ್ಕೆ ಇಷ್ಟಪಡುವವಳು ನೀನು. ನಿನಗೆ ಒಂದು ದಿನವೂ ಬೋರಾಗಲಿಲ್ಲವೇ? ಎಲ್ಲರ ಜೊತೆ ಕಲೆತು ಆಡಿ ನಲಿಯಬೇಕೆಂದು ನಿನಗೆ ಅನಿಸಲಿಲ್ಲವೇ?

ಆ ದಿನ ನೆನಪಿದೆಯಾ? ನಾವು ಮನೆಮಂದಿಯೆಲ್ಲಾ ಹರಟೆಯಲ್ಲಿ ಮಗ್ನರಾಗಿದ್ದೆವು. ಆದರೆ ನೀನು ಯಾವುದೋ ಲಕ್ಷ್ಯದಲ್ಲಿದ್ದೆ. ನಾವೆಲ್ಲಾ ಸಂತೋಷದಲ್ಲಿ ಕಾಲ ಕಳೆಯುತ್ತಿದ್ದರೆ, ನೀನು ಮಾತ್ರ ಭೂಮಿಯೇ ತಲೆಯ ಮೇಲೆ ಕಳಚಿ ಬಿದ್ದ ಹಾಗೆ ಕೂತಿದ್ದೆ. ನಾವೆಲ್ಲಾ ಒಂದು ಕ್ಷಣ ನಿನಗೇನಾಯಿತೋ ಎಂದು ಚಿಂತಿಸತೊಡಗಿದೆವು. ಅಮ್ಮನಂತೂ ತುಂಬಾ ಹೆದರಿಬಿಟ್ಟಿದ್ದಳು. ನಂತರ, ಅವಳು ಯಾವಾಗಲೂ ಇರುವುದೇ ಹಾಗೆ ಗಾಬರಿಯಾಗಬೇಡಿ ಎಂದು ಹೇಳಿ ನಾನೇ ಎಲ್ಲರನ್ನು ಸುಮ್ಮನಾಗಿಸಿದ್ದೆ.

ಒಂದು ದಿನ ನನ್ನ ಫ್ರೆಂಡ್ಸ್‌ನೆಲ್ಲಾ ಮನೆಗೆ ಕರೆದಿದ್ದೆ. ಅವರು ಮನೆಗೆ ಬರುವುದಕ್ಕೆ ಒಂದು ಗಂಟೆ ಮುಂಚೆ ನನ್ನ ಮೇಲೆ ಕೋಪ ಮಾಡಿಕೊಂಡಿದ್ದೆ ನೀನು. ನನ್ನ ಫ್ರೆಂಡ್ಸ್‌ ಮನೆಗೆ ಬಂದವರೇ, ಮೊದಲು ಕೇಳಿದ್ದು ನಿನ್ನನ್ನ. ಆದರೆ ನೀನು ನನ್ನ ಮೇಲಿನ ಕೋಪದಿಂದ ಅವರನ್ನು ಸರಿಯಾಗಿ ಮಾತನಾಡಿಸಲೇ ಇಲ್ಲ. ಪಾಪ, ಅವರೆಷ್ಟು ಬೇಜಾರಾದರು ಎಂಬುದರ ಪರಿವೆಯೇ ಇರಲಿಲ್ಲ ನಿನಗೆ. ಈಗಲೂ  ನೀನು ಏಕೆ ಹಾಗೆ ಮಾಡಿದೆ? ಎಂದು ಅವರು ಕೇಳುತ್ತಾರೆ. ನಾನು ಏನೋ ಒಂದು ಉತ್ತರ ನೀಡಿ ಸುಮ್ಮನಾಗುತ್ತೇನೆ.

ನೀನು ಹೀಗೆ ಇರುವುದಕ್ಕೂ ಇದೂ ಒಂದು ಕಾರಣ ಇರಬಹುದು ಅಲ್ವಾ? ಮೊದಲಿನಿಂದಲೂ ನೀನು ಮನೆಯಿಂದ ದೂರವಿದ್ದೇ ಬೆಳೆದೆ. ಮೂರನೇ ತರಗತಿಯಿದ್ದಾಗಿನಿಂದಲೂ ಚಿಕ್ಕಪ್ಪನ ಮನೆಯಲ್ಲಿಯೇ ಬೆಳೆದಿದ್ದರಿಂದ ನಮ್ಮ ನಿನ್ನ ನಡುವೆ ಸರಿಯಾಗಿ ಬಾಂಧವ್ಯವೇ ಬೆಳೆಯಲಿಲ್ಲ. ಹೈಸ್ಕೂಲಿಗೆ ಬಂದ ನಂತರ ಮನೆಗೆ ಬಂದೆಯಾದರೂ ಮತ್ತೆ ಹಾಸ್ಟೆಲ್‌ಗೆ ಸೇರಿದೆ. ಪರಿಣಾಮ, ಮತ್ತೆ ಮನೆಯಿಂದ ದೂರವಾದೆ. ಅಮ್ಮನಂತೂ ನಿನ್ನ ನೆನೆಸಿಕೊಂಡು ಕಣ್ಣೀರಿಡದ ದಿನವೇ ಇರಲಿಲ್ಲ.

ನಾನಾದರೂ ಮನೆಯವರ ಜೊತೆ ತುಂಬಾ ದಿನ ಕಳೆದಿದ್ದೇನೆ. ಆದರೆ ಅಕ್ಕ, ನೀನು ಸರಿಯಾಗಿ ಒಂದು ದಿನವು ಮನೆಯಲ್ಲಿ ಇರಲಿಲ್ಲ. ಆಫೀಸ್‌, ಕೆಲಸ ಅಂತ ಮನೆಯಿಂದ ಈಗಲೂ ದೂರಾನೆ ಇದ್ದೀಯಾ. ನೀನು ಹೆಚ್ಚು ಮದುವೆ, ಸಮಾರಂಭಗಳಿಗೆ ಹೋಗಲೇ ಇಲ್ಲ. ಹಬ್ಬಹರಿದಿನಗಳಲ್ಲಂತೂ ಮನೆಯಲ್ಲಿ ಇದ್ದಿದ್ದೇ ಇಲ್ಲ. ಚಿಕ್ಕ ವಯಸ್ಸಿನಿಂದಲೇ ಒಂಟಿಯಾಗಿ ಬೆಳೆದ ನೀನು, ಇಂದಿಗೂ ಒಂಟಿಯಾಗಿಯೇ ಜೀವನವನ್ನು ನಡೆಸುತ್ತಿರುವೆ. ಏಕಾಂಗಿಯಾಗಿಯೇ ಯಶಸ್ಸನ್ನು ಸಾಧಿಸಬೇಕೆಂಬ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವ ಹಾಗಿದೆ. ಆದರೂ ಒಂದೊಂದು ಸಲ ನಿನ್ನನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಆಗುವುದಿಲ್ಲವೇನೋ ಎಂದೆನಿಸುತ್ತದೆ. 

ಆದರೂ ನೀನೆಂದರೆ ಇಷ್ಟ. ಒಂದೊಂದು ಸಲ ಕಷ್ಟ. ನೀನು ಏಕೆ ಹೀಗೆ? ಎಂದು ಇಂದಿಗೂ ಆರ್ಥವಾಗಿಲ್ಲ…

– ಮಮತ ಕೆ. ಕೆ., ಸೊರಬ

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.