ಮಾತು ಮೌನವಾಗುವ ಹೊತ್ತು


Team Udayavani, Jul 5, 2017, 3:45 AM IST

matu-main.jpg

ದುಡಿಮೆಯೇ ಜೀವನ ಎಂದು ನಿರ್ಧರಿಸಿ ಒಬ್ಬಳೇ ಮಗಳು ಬೆಂಗಳೂರಿಗೆ ಹೋಗಿಬಿಟ್ಟಿದ್ದಾಳೆ. ಅವಳನ್ನು ಮಹಾನಗರದಲ್ಲಿ ಬಿಟ್ಟು, ಊರಲ್ಲಿರುವ ಪೋಷಕರು ಅನುಭವಿಸುವ ತಳಮಳವೆಲ್ಲ ಇಲ್ಲಿ ಅಕ್ಷರರೂಪು ತಾಳಿದೆ. ಒಂದರ್ಥದಲ್ಲಿ ಇದು ಮನೆ ಮನೆಯ ಕಥೆ…

ಹಿಂದೆಲ್ಲಾ ಹೆಣ್ಣು ರಾತ್ರಿ ಹೊರಕ್ಕೆ ಹೋಗುವಂತಿರಲಿಲ್ಲ. ಆದರೆ, ಇಂದು ಗಂಡು ಹೆಣ್ಣು ಎಂಬ ಭೇದವಿಲ್ಲ. ಎಲ್ಲರೂ ಹೊರಗೆ ದುಡಿಯಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಿಗೇ- ನಾನೂ ದುಡಿಯಬೇಕು. ನನ್ನದೂ ಸ್ವಂತ ಗಳಿಕೆ ಇರಬೇಕು ಎಂದು ಹೆಣ್ಣು ಆಸೆ ಪಡುತ್ತಿದ್ದಾಳೆ.

ನಮಗಿರುವ ಒಬ್ಬಳೇ ಮಗಳನ್ನು ದೂರದೂರು ಬೆಂಗಳೂರಿಗೆ ಕಳಿಸುವುದರೊಂದಿಗೆ ಶುರುವಾದ ಮಾನಸಿಕ ತಳಮಳ, ಮಗಳು “ಇಂಜಿನಿಯರಿಂಗ್‌’ ಓದಿ ಕೆಲಸ ಗಿಟ್ಟಿಸಿಕೊಂಡರೂ ಕಡಿಮೆಯಾಗಿಲ್ಲ. ಒಂದೆಡೆ ಹೆಣ್ಣು ಮಗಳು, ಮತ್ತೂಂದೆಡೆ ಒಬ್ಬಳೇ ಮಗಳು. ಅ ಬೆಂಗಳೂರಿನ ಕಾರ್ಪೊರೇಟ್‌ ಕಂಪನಿಗಳಲ್ಲಿ ದುಡಿಯುವ ಈ ಹುಡುಗಿಯರು ದುಡಿದು ಮನೆ ಸೇರುವಾಗ ರಾತ್ರಿ 8.30. ಪ್ರತಿದಿನ ಆವಳ “ಪೋನ್‌ ಕಾಲ್‌ಗೆ ಕಾಯುವುದು, ಸರಿಯಾಗಿ ಪಿ.ಜಿ ಗೆ  ಬಂದು ಮುಟ್ಟಿದ್ದಾಳೆ. ಸದ್ಯ ಏನೂ ಸಮಸ್ಯೆಯಿಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡುವ ಮೊದಲೇ, ಮಗಳು ಮಾತಾಡುತ್ತಾಳೆ: “ಅಮ್ಮಾ, ಪಿ.ಜಿಯಲ್ಲಿ ಊಟದ ಸಮಸ್ಯೆ ಕಾಡುತ್ತದೆ. ಇಲ್ಲಿ ದಿನವೂ ಒಂದೇ ಥರದ ಊಟ. ಹಾಗಾಗಿ ಬೇಜಾರಾಗಿ ಹೋಯಿತು’ ಎನ್ನುವ ಮಗಳು… ಹೀಗೆ ಒಂದಿಲ್ಲೊಂದು ಸಮಸ್ಯೆ ಕಾಡುವಾಗ ನಮ್ಮ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ.

ಕಂಪನಿಗಳಲ್ಲಿ ಇರುವ ವೀಕೆಂಡ್‌ ಡಿನ್ನರ್‌ ಪಾರ್ಟಿ ಮಕ್ಕಳಿಗೆ ಮಜಾ. ನಮಗೋ ಸಜಾ. ಅ ರಾತ್ರಿ ಅವಳು ಪಾರ್ಟಿ ಮುಗಿಸಿ “ಪಿ.ಜಿ’ ಸೇರುವವರೆಗೆ ನಮ್ಮ ತಳಮಳ, ಆತಂಕ ತಪ್ಪಿದ್ದಲ್ಲ. ಬದುಕಿಗೂ ಭಾವನೆಗೂ ಹೋರಾಟ. ಬದುಕು ಬೇಕು ಎಂದರೆ ಭಾವನೆ ಸಾಕು ಎನ್ನುತ್ತದೆ. ನಮ್ಮ ಬದುಕಿನ ಏರಿಳಿತದೊಂದಿಗೆ ಮಗಳ ಭವಿಷ್ಯವನ್ನೂ ನೋಡಬೇಕು. ಒಮ್ಮೊಮ್ಮೆ ಮನಸ್ಸು ಕೇಳುತ್ತದೆ: ಬದುಕು ಇಲ್ಲೂ ಇಲ್ಲವಾ? ನಗರಕ್ಕೆ ಹೋಗಲೇಬೇಕಾ?  ಇದೆಲ್ಲಾ ಯಾಕೆ ಇಂದಿನ ಜನಾಂಗಕ್ಕೆ ಅರ್ಥ ಆಗುವುದಿಲ್ಲ? ಇಂದು ಬದುಕಿನ ಗುರಿಯನ್ನು ತಲುಪುವ ನೆಪದಲ್ಲಿ ಹಳ್ಳಿಗಳು ಬರಡಾಗುತ್ತಿವೆ. ನಗರ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿದೆ. ಏನಾಗಬಹುದು ಮುಂದೆ? ಎಂಬ ಪ್ರಶ್ನೆ ಪೆಡಂಭೂತದಂತೆ ಕಾಡುತ್ತಿದೆ.

ಇರುವ ಒಬ್ಬ ಮಗಳನ್ನು ಬೆಂಗಳೂರಿಗೆ ಕಳಿಸಿ ಒಂದು ರೀತಿಯಲ್ಲಿ ಅನಾಥಪ್ರಜ್ಞೆಯನ್ನು ನಮಗೆ ನಾವೇ ತಂದುಕೊಂಡಂತಾಗಿದೆ. ಇನ್ನು ನಮ್ಮ ಮುಂದಿನ ಭವಿಷ್ಯವೇನು? ನಾವು ಅ ಗೊಂದಲದ ಗೂಡಾದ ಬೆಂಗಳೂರಿಗೆ ಹೋಗಬೇಕೆ? ಅಲ್ಲಿ ಉಳಿಯಲು ಸಾಧ್ಯವಾ? ಎಂಬ ಪ್ರಶ್ನೆ ಭೂತಾಕಾರವಾಗಿದೆ.

“ಅಮ್ಮಾ, ಮನೆಗೆ ಬರಬೇಕು. ಸ್ವಲ್ಪ ದಿನ ನಮ್ಮ ಮನೆಯ ಪ್ರಶಾಂತ ವಾತಾವರಣದಲ್ಲಿ ಇರಬೇಕು ಅನ್ನಿಸ್ತಿದೆ. ಈ ಕೆಲಸ ಸಾಕಾಗಿ ಹೋಯಿತು. ತಿಂಗಳಿಗೆ ಇರುವ ಒಂದು ರಜೆಯನ್ನು ಸೇರಿಸಿಕೊಂಡು ಬರುತ್ತೇನಮ್ಮ’ ಎಂದು ಮಗಳು ಹೇಳುವಾಗ ನನ್ನ ಕಣ್ಣುಗಳು ಹನಿಗೂಡುತ್ತವೆ. ಮನಸ್ಸು ಭಾರವಾಗುತ್ತದೆ. “ನೀನು ಬಾ ಮಗಳೇ. ನಿನ್ನ ನೆಮ್ಮದಿ ಖುಷಿಯನ್ನು ಕಸಿದುಕೊಳ್ಳುತ್ತಿರುವ ಆ ಕೆಲಸ ಬಿಟ್ಟುಬಿಡು’ ಎನ್ನುವ ಮನಸ್ಸಾಗುತ್ತದೆ. ಆದರೆ, ಮುಂದಿನ ಅವಳ ಜೀವನ ಅಲ್ಲಿಯೇ ಇರುವುದನ್ನು ನೆನೆದಾಗ ಮಾತು ಮರೆತು ಹೋಗುತ್ತದೆ. ಮನ ತಳಮಳಿಸುತ್ತದೆ.

ಮನೆಗೆ ಬಂದ ಮಗಳು, ಮನೆ, ತೋಟ, ನಾವು ಕೆಲಸ ಮಾಡುವ ಸ್ಕೂಲು ಎಲ್ಲವನ್ನೂ ಕಂಡು ಸಂಭ್ರಮಿಸುತ್ತಾಳೆ. ಮೂರು ದಿನದ ರಜೆ ಬಹ ಬೇಗನೆ  ಮುಗಿದು ಹೋಗುತ್ತದೆ. ಹೊರಡುವ ಸಮಯ ಹತ್ತಿರಾದಂತೆಲ್ಲ ಅವಳಿಗೆ ಅಪ್ಪ- ಅಮ್ಮನನ್ನು ಬಿಟ್ಟು ಹೋಗುವ ಬೇಸರವಿರುತ್ತದೆ. ಮಗಳು ಬೆಂಗಳೂರಿಗೆ ಹೋದ ದಿನ ಮನೆ ಮೌನವಾಗುತ್ತದೆ. ಮನಸ್ಸು ಭಾರವಾಗುತ್ತದೆ. ಇದೇ ಬದುಕಲ್ಲವೇ?

– ಲಕ್ಷ್ಮೀ ಎನ್‌. ಭಟ್ಟ, ಯಲ್ಲಾಪುರ

ಟಾಪ್ ನ್ಯೂಸ್

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

10

Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್‌ ಸ್ಟಾರ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Suri Loves Sandhya movie teaser

Suri Loves Sandhya: ಟೀಸರ್‌ನಲ್ಲಿ ಸೂರಿ ಲವ್‌ ಸ್ಟೋರಿ

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

3

Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.