ಸ್ಮಾರ್ಟ್‌ಕನಸಿಗೆ ಸ್ಲೋ ನಡಿಗೆ: ಘೋಷಣೆಯಾದರೂ ಚೇತರಿಕೆ ಕಾಣದ ಅನುಷ್ಠಾನ


Team Udayavani, Jul 4, 2017, 6:35 PM IST

Mangalore-Smartcity-600.jpg

ಮಹಾನಗರ: ‘ಸ್ಮಾರ್ಟ್‌ ಸಿಟಿಯಾಗಿ ಮಂಗಳೂರು ಆಯ್ಕೆ’ ಎಂಬ ಪ್ರಕಟನೆಯ ಬಳಿಕ ವಿಶೇಷ ಉದ್ದೇಶ ವಾಹಕದ (ಎಸ್‌ಪಿವಿ) ಮೊದಲ ಸಭೆ ಬೆಂಗಳೂರಿನಲ್ಲಿ ನಡೆದಿರುವುದನ್ನು ಹೊರತುಪಡಿಸಿ, ಯಾವುದೇ ಮಹತ್ವದ ಬೆಳವಣಿಗೆಗಳು ಮಂಗಳೂರಿನಲ್ಲಿ ಇದುವರೆಗೂ ನಡೆದಿಲ್ಲ. ನಗರಕ್ಕೆ ಸ್ಮಾರ್ಟ್‌ ಸಿಟಿ ಪಟ್ಟ ದೊರಕಿ ಹೆಚ್ಚಾ ಕಡಿಮೆ 10 ತಿಂಗಳಾಗಿದ್ದು, ಮಹತ್ವದ ಕಾರ್ಯಚಟುವಟಿಕೆಗಳು ಆರಂಭವಾಗಬೇಕಿತ್ತು. ಆದರೆ, ಒಂದೆರಡು ಸಭೆ/ಸರ್ವೆ ಬಿಟ್ಟರೆ, ಕಾರ್ಯಯೋಜನೆಗಳಿಗೆ ಇನ್ನೂ ಮೂರ್ತರೂಪ ದೊರಕಿಲ್ಲ. ಐದು ವರ್ಷದೊಳಗೆ ಯೋಜನೆ ಪೂರ್ಣ ಮಟ್ಟದಲ್ಲಿ ಅನುಷ್ಠಾನವಾಗಬೇಕಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಉಳಿದಿರುವ 4 ವರ್ಷ ದೊಳಗೆ ಯೋಜನೆಗಳ ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. 

‘ವಿಶೇಷ ಉದ್ದೇಶ ವಾಹಕ’ದ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ಮೊದಲ ಸಭೆ ಬೆಂಗಳೂರಿನ ವಿಕಾಸಸೌಧದಲ್ಲಿ ಮೇ 2ರಂದು ನಡೆದಿತ್ತು. ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಆರ್‌.ಕೆ.ಸಿಂಗ್‌ ಅವರು ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ಕಂಪೆನಿಯ ಅಧ್ಯಕ್ಷರಾಗಿದ್ದಾರೆ. ಜಿಲ್ಲಾಧಿಕಾರಿ ಡಾ| ಕೆ.ಜಿ.ಜಗದೀಶ್‌, ಮೇಯರ್‌ ಕವಿತಾ ಸನಿಲ್‌, ಆಯುಕ್ತ   ಮಹಮ್ಮದ್‌ ನಝೀರ್‌, ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಸದಸ್ಯರಾದ ಲ್ಯಾನ್ಸಿ ಲಾಟ್‌ ಪಿಂಟೋ, ಪ್ರೇಮಾನಂದ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ದ್ವಿತೀಯ ಸಭೆ ಜೂನ್‌ ಪ್ರಥಮ ವಾರದಲ್ಲಿ ನಡೆಯಬೇಕಿತ್ತು. ಆದರೆ  ಇನ್ನೂ ಆ ಸಭೆಗೆ ದಿನಾಂಕ ನಿಗದಿಯಾಗಿಲ್ಲ. ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಕಂಪೆನಿ ಹಾಗೂ ಯೋಜನೆಯ ನಿರ್ವಹಣ ಗುತ್ತಿಗೆ ವಹಿಸಿರುವ ಪ್ರಾಜೆಕ್ಟ್ಮ್ಯಾ ನೇಜ್‌ಮೆಂಟ್‌ ಕನ್ಸಲ್ಟೆಂಟ್‌ (ಪಿಎಂಸಿ) ಪ್ರತ್ಯೇಕ ಕಚೇರಿಗಳು ಈ ತಿಂಗಳಿನೊಳಗೆ ಕಾರ್ಯಾಚರಿಸುವ ಸಾಧ್ಯತೆ ಇದೆ. ಕಂಪೆನಿ ಕಚೇರಿ ಪಾಲಿಕೆಯ ಕಚೇರಿ ಕಟ್ಟಡದಲ್ಲಿ ಆರಂಭಗೊಳ್ಳಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಪಿಎಂಸಿ ಸರ್ವೆ ಆರಂಭ
ಪಿಎಂಸಿ ವಾಡಿಯಾ ಕಂಪೆನಿಯ ಕಚೇರಿಯು ಚಿಲಿಂಬಿಯಲ್ಲಿ ಆರಂಭವಾಗಿದ್ದು, ಸರ್ವೆ ಆರಂಭಿಸಿದೆ. ಮುಂಬಯಿ ಮೂಲದ ವಾಡಿಯಾ ಟೆಕ್ನೋ ಸರ್ವಿಸಸ್‌ ಪ್ರೈ.ಲಿ. ಕಂಪೆನಿ, ಯೂಯಿಸ್‌ ಬರ್ಗರ್‌ ಕನ್ಸಲ್ಟೆಂಟ್‌ ಕಂಪೆನಿ ಹಾಗೂ ಸೀಡಕ್‌ ಕಂಪೆನಿ ಜತೆಯಾಗಿ ಮಂಗಳೂರು ಯೋಜನೆಯ ನಿರ್ವಹಣೆ ಗುತ್ತಿಗೆ ಪಡೆದಿವೆ. ಪಿಎಂಸಿ ಈಗಾಗಲೇ ಪ್ರಾಥಮಿಕ ಹಂತದ ವರದಿ ಸಿದ್ಧಪಡಿಸಿದ್ದು, 6 ತಿಂಗಳಲ್ಲಿ ಹಂತ ಹಂತವಾಗಿ ವರದಿ ಸಲ್ಲಿಸಲಿದೆ. ಸ್ಮಾರ್ಟ್‌ ರಸ್ತೆ, ಸ್ಮಾರ್ಟ್‌ ಸ್ಕೂಲ್‌, ಸರಕಾರಿ ಕಟ್ಟಡ ಗಳಲ್ಲಿ ಸೋಲಾರ್‌ ಫಲಕ ಅಳವಡಿಕೆ, ಸರಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಬೀದಿ ದೀಪಗಳಿಗೆ ಎಲ್‌ಇಡಿ ಸಹಿತ ಸುಮಾರು 5 ಪ್ರಾಜೆಕ್ಟ್ ಗಳ ಸಮಗ್ರ ಯೋಜನಾ ವರದಿ ಈ ತಿಂಗಳಿನಲ್ಲಿ ಸಿಗುವ ಸಾಧ್ಯತೆಯೂ ಇದೆ ಎನ್ನುತ್ತವೆ ಪಾಲಿಕೆ ಮೂಲಗಳು.

ಸ್ಮಾರ್ಟ್‌ಸಿಟಿ ಮೂಲಕ ಮಂಗಳೂರಿನ 1628 ಎಕ್ರೆ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಯೋಜಿಸಲಾಗಿದೆ. ನೆಹರೂ ಮೈದಾನ ಸಹಿತ ಮುಖ್ಯವಾದ 100 ಎಕ್ರೆ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ, 27 ಎಕ್ರೆ ವ್ಯಾಪ್ತಿಯಲ್ಲಿ ಹಂಪನಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ರೀತಿಯ ಅಭಿವೃದ್ಧಿ, 22 ಎಕ್ರೆ ವ್ಯಾಪ್ತಿ ಮೀನುಗಾರಿಕೆ – ಬಂದರು ಮರು ಅಭಿವೃದ್ದಿ, 10 ಎಕ್ರೆ ಹಳೆ ಬಂದರು ಮರು ಅಭಿವೃದ್ದಿ, 57 ಎಕ್ರೆ ಪ್ರದೇಶದಲ್ಲಿ ದೇವಸ್ಥಾನಗಳ ವ್ಯಾಪ್ತಿ/ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಅಭಿವೃದ್ಧಿ, 25 ಎಕ್ರೆ ಜಲ ತೀರ ಹಾಗೂ ಸಾಗರ ತೀರದ ಅಭಿವೃದ್ಧಿ, 42 ಎಕ್ರೆ ವ್ಯಾಪ್ತಿಯಲ್ಲಿ ಐಟಿ ಅಭಿವೃದ್ಧಿ, ಸಣ್ಣ ಕೈಗಾರಿಕೆಗಳು, ಆರೋಗ್ಯ, ಟೈಲ್ಸ್‌ ಫ್ಯಾಕ್ಟರಿ, 17 ಎಕ್ರೆ ವ್ಯಾಪ್ತಿಯಲ್ಲಿ ವೆನ್ಲಾಕ್‌ ಹಾಗೂ ಲೇಡಿಗೋಷನ್‌ ಅಭಿವೃದ್ಧಿ, 47 ಎಕ್ರೆ ವ್ಯಾಪ್ತಿಯಲ್ಲಿ ಜಲತೀರ ಪ್ರದೇಶಕ್ಕೆ ಸಂಪರ್ಕಿಸುವ ವ್ಯಾಪ್ತಿಯಲ್ಲಿ ವಾಣಿಜ್ಯೀಕರಣದ ಮೂಲಕ ಅಭಿವೃದ್ಧಿ, 20 ಎಕ್ರೆ ಬಂದರು ವ್ಯಾಪ್ತಿಯಲ್ಲಿ ಸೋಲಾರ್‌ ಫಾರ್ಮ್ ಅಭಿವೃದ್ಧಿಯ ಪ್ರಸ್ತಾವನೆ ಇದೆ. ಉಳಿದಂತೆ, ಪಾನ್‌ ಸಿಟಿಯಂತೆ ವಿವಿಧ ಯೋಜನೆಗಳ ಮಾಹಿತಿ ನೀಡುವ ‘ಒನ್‌ ಟಚ್‌ ಮಂಗಳೂರು’ ಎಂಬ ಮೊಬೈಲ್‌ ಆ್ಯಪ್‌ ಹಾಗೂ ‘ಒನ್‌ ಆ್ಯಕ್ಸೆಸ್‌ ಮಂಗಳೂರು’ ಎಂಬ ವೆಬ್‌ ಬಳಕೆ ಸಹಿತ ತಂತ್ರಜ್ಞಾನಗಳ ಬಳಕೆಗೆ ಪ್ರಸ್ತಾವನೆಯಲ್ಲಿ ಉಲ್ಲೇಖವಿದೆ. ಪಾಲಿಕೆಯು ಸಲ್ಲಿಸಿದ್ದ ಒಟ್ಟು 2000.72 ಕೋ.ರೂ. ಪ್ರಸ್ತಾವನೆಯಲ್ಲಿ ‘ಏರಿಯಾ ಬೇಸ್‌’ ನಿಂದ (ನಗರದ ಸ್ಥಳ ಕೇಂದ್ರಿತ ಅಭಿವೃದ್ಧಿ)1,707.29 ಕೋ.ರೂ. ಹಾಗೂ ‘ಪಾನ್‌ ಸಿಟಿ’  (ಡಿಜಿಟಲೀಕರಣ -ತಂತ್ರಜ್ಞಾನ) ಮೂಲಕ 293.43 ಕೋ.ರೂ.ಗಳ ಯೋಜನೆ ಸಿದ್ಧಗೊಳಿಸಲಾಗಿದೆ.

ಅನುದಾನ ವಿವರ
ಪ್ರಥಮ ಹಂತದಲ್ಲೇ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆ ಯಾಗುವ ಅವಕಾಶವಿತ್ತು. ಆದರೆ, ಆ ಸಂದರ್ಭ ಮಂಗಳೂರಿನ ದೀರ್ಘ‌ಕಾಲೀನ (20 ವರ್ಷಗಳ ಅವಧಿ) ಸಮಗ್ರ ಅಭಿವೃದ್ಧಿ ದೃಷ್ಟಿ ಯಿಂದ 20 ಸಾವಿರ ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆಯ್ಕೆಯಾಗಲಿಲ್ಲ. ದ್ವಿತೀಯ ಹಂತದಲ್ಲಿ 5 ವರ್ಷಗಳ ಅವಧಿಗೆ 2 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದು, ಆಯ್ಕೆಯಾಗಿದೆ. ಕೇಂದ್ರ ಹಾಗೂ ರಾಜ್ಯದಿಂದ 973.56 ಕೋ.ರೂ. ಸ್ಮಾರ್ಟ್‌ಸಿಟಿ ಅನುದಾನ, 516.95 ಕೋ.ರೂ. ಪಿಪಿಪಿ ಅನುದಾನ, 126.85 ಕೋ.ರೂ. ಕೇಂದ್ರದ ಯೋಜನೆಗಳ ಅನುದಾನ, 163.93 ಕೋ.ರೂ. ರಾಜ್ಯದ ಯೋಜನೆಗಳ ಅನುದಾನ, 128.75 ಕೋ.ರೂ. ಎಡಿಬಿ, 78.90 ಕೋ.ರೂ.   ಪಾಲಿಕೆ ಅನುದಾನ, 11.78 ಕೋ.ರೂ.ಗಳನ್ನು ವಿವಿಧ ನಿಧಿಗಳಿಂದ ನಿರೀಕ್ಷಿಸಿ 2,000.72 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು.

– ದಿನೇಶ್‌ ಇರಾ

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.