ಸುಳ್ಯ, ಪುತ್ತೂರು: ರಬ್ಬರ್‌, ಅಡಿಕೆಗೆ ಕಂಬಳಿಹುಳ ಬಾಧೆ


Team Udayavani, Jul 5, 2017, 3:45 AM IST

rubber.jpg

ಪುತ್ತೂರು: ಮೊದಲೇ ಧಾರಣೆ ಏರಿಳಿತದಿಂದ ತತ್ತರಿಸಿರುವ ಅಡಿಕೆ ಮತ್ತು ರಬ್ಬರ್‌ ಬೆಳೆಗೆ ಈಗ ಮತ್ತೂಂದು ಸಮಸ್ಯೆ ತಲೆದೋರಿದೆ. ಸಣ್ಣ ಮತ್ತು ದೊಡ್ಡ ಗಾತ್ರದ ಕಂಬಳಿ ಹುಳಗಳು ತೋಟಗಳಲ್ಲಿ ಬೀಡು ಬಿಟ್ಟಿದ್ದು, ದಿನೇ-ದಿನೇ ಸಂಖ್ಯೆ ಗಣನೀಯ ವಾಗಿ ವೃದ್ಧಿಸುತ್ತಿದ್ದು, ಕೃಷಿಕರಲ್ಲಿ ಫ‌ಸಲು ಹಾನಿಯ ಆತಂಕ ಮನೆ ಮಾಡಿದೆ.

ರಬ್ಬರ್‌ ಗಿಡದಲ್ಲಿ ಇರುವ ಕಂಬಳಿ ಹುಳದ ಗಾತ್ರ ದೊಡ್ಡದಾಗಿದೆ. ಅಡಿಕೆ ಮರದಲ್ಲಿ ಇರುವ ಹುಳದ ಗಾತ್ರ ಕಿರಿದಾಗಿದೆ. ಮಳೆಗಾಲದ ಆರಂಭದಲ್ಲಿ ಮನೆ ಅಂಗಳ, ಮರ, ಗಿಡಗಳಲ್ಲಿ ಕಾಣಿಸಿಕೊಂಡ ಈ ಹುಳಗಳು ಅನಂತರ ಅಡಿಕೆ, ರಬ್ಬರ್‌ ಮರಗಳನ್ನು ಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡಿವೆ.

ರಬ್ಬರ್‌ ಮರದ ಟ್ಯಾಂಪಿಂಗ್‌ ಅವಧಿ ಇದಾ ಗಿದ್ದು, ಆ ಸ್ಥಳದ ಪ್ಲಾಸ್ಟಿಕ್‌ ಹೊದಿಕೆಯ ಬಳಿ, ಎಲೆಗಳ ಮೇಲೆ ಗುಂಪು-ಗುಂಪಾಗಿ ಬೀಡು ಬಿಟ್ಟಿವೆ.

ಸಾಮಾನ್ಯವಾಗಿ ಕಂಡುಬರುವ ಹುಳಕ್ಕೂ, ಈ ಕಂಬಳಿ ಹುಳಕ್ಕೂ ವ್ಯತ್ಯಾಸ ಇದೆ. ಗಾತ್ರ ದಲ್ಲಿ ದೊಡ್ಡದಾಗಿದ್ದು, ಕಪ್ಪು ಬಣ್ಣ ಹೊಂದಿವೆ. ಹುಳದ ಮೇಲೆ ಬಿಳಿ ಬಣ್ಣದ ರೋಮಗಳು ಆವರಿಸಿಕೊಂಡಿವೆ. ಒಂದು ಮರದಲ್ಲಿ ಇರುವ ಹುಳಗಳ ಸಂಖ್ಯೆ ಮರುದಿನ ದುಪ್ಪಟ್ಟಾಗುತ್ತಿದೆ. ಹಾಗಾಗಿ ಕಂಬಳಿ ಹುಳದ ಬಗ್ಗೆ ಬೆಳೆಗಾರರಿಗೆ ಅನುಮಾನ ಮೂಡಿಸಿದೆ. ಕೃಷಿ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ, ಈ ಬಗ್ಗೆ ಸ್ಪಷ್ಟ ಉತ್ತರ ನೀಡಿದರೆ ರೈತರ ಆತಂಕ ದೂರವಾಗಲಿದೆ ಅನ್ನುತ್ತಾರೆ ಕೃಷಿಕರು.

ರಬ್ಬರ್‌, ಅಡಿಕೆಯ ಕಥೆ
ಜಿಎಸ್‌ಟಿ ಗೊಂದಲದಿಂದ ಅಡಿಕೆ, ರಬ್ಬರ್‌ ಮಾರುಕಟ್ಟೆ ತಟಸ್ಥವಾಗಿದೆ. ಈಗಿರುವ ಧಾರಣೆ ಇಳಿಸಲು ಬೆಳೆಗಾರರು ಬಿಡುವುದಿಲ್ಲ. ಬೆಳೆ ಏರಿ ಸಲು ವರ್ತಕರು ಮುಂದಾಗುತ್ತಿಲ್ಲ. ಇದರ ಮಧ್ಯೆ ಕೃಷಿಕ ರಿಗೆ ಪ್ರತಿ ವರ್ಷವೂ ಇಂತಹ ವಿಚಿತ್ರ ಸಮಸ್ಯೆ ಗಳು ಕಾಡುತ್ತಿವೆ. ಗಿಡಗಳಿಗೆ ಹಾನಿ ಮಾಡು ತ್ತದೆಯೋ, ಇಲ್ಲವೂ ಎಂಬ ಖಾತರಿ ಇಲ್ಲದ ಕಾರಣ ಕಂಬಳಿ ಹುಳ ಯಾಕೆ ಕಾಣಿಸಿಕೊಂಡಿರಬಹುದು ಎಂಬ ಚರ್ಚೆ ಕೃಷಿಕರೊಳಗೆ ನಡೆದಿದೆ.

ಇಲಾಖೆ ಮೇಲೆ ಭರವಸೆ ಇಲ್ಲ
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಮಾಮೂಲಿ. ಈ ಹಿಂದೆ ಸುಳ್ಯದಲ್ಲಿ ಅಡಿಕೆಗೆ ಕಾಣಿಸಿಕೊಂಡ ಹಳದಿ ರೋಗ, ಕಾಂಡ ಹುಳ ರೋಗದ ಸಂದರ್ಭವೂ ಪರಿಶೀಲನೆ ನಡೆಸಿದ್ದರೂ ಅದರ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇಲಾಖೆ ಈ ತನಕವೂ ಔಷಧ ಕಂಡು ಹಿಡಿದಿಲ್ಲ. ಹಾಗಾಗಿ ಇಲಾಖಾಧಿಕಾರಿಗಳು ಅಭಯ ನೀಡಿ ದರೂ ಕೃಷಿಕರ ಭಯಕ್ಕೆ ಮುಕ್ತಿ ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳಲ್ಲಿ ಈ ಹುಳ ಕಾಣಿಸಿಕೊಂಡಿರುವ ಬಗ್ಗೆ ವಿಚಾರಿಸಿದರೆ, ಈ ತನಕ ಕೃಷಿಕರಿಂದ ಮಾಹಿತಿ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸುಳ್ಯದಲ್ಲಿ  ಅಧಿಕ
ಕಂಬಳಿ ಹುಳ ಕಾಣಿಸಿಕೊಂಡಿದ್ದು ಸುಳ್ಯ ಭಾಗ ದಲ್ಲಿ ಅಧಿಕ. ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ಕಾಣಿಸಿಕೊಂಡಿವೆ. ಅಡಿಕೆ ತೋಟಕ್ಕೆ ಹೋಲಿಸಿದರೆ ಸುಳ್ಯದಲ್ಲಿ ಅಧಿಕ. ಮದ್ದು ಸಿಂಪಡಿಸಿದರೂ ಅಡಿಕೆ ಮರದಿಂದ ಹುಳ ಕದಲುತ್ತಿಲ್ಲ. ಅಡಿಕೆ ಎಳೆ ಕಾಯಿ ಬಲಿಯುವ ಕಾಲ ವಾಗಿದ್ದು, ಅದರ ಮೇಲೆ ಪರಿಣಾಮ ಬೀರ ಬಹುದೇ ಎಂಬ ಅನುಮಾನ ಕೃಷಿಕ ರದ್ದು. ರಬ್ಬರ್‌ ಟ್ಯಾಪಿಂಗ್‌ ಈಗಷ್ಟೆ ಆರಂಭಗೊಂಡಿ ರುವುದು ಬೆಳೆಗಾರರ ತಲ್ಲಣಕ್ಕೆ ಕಾರಣ. ಹೇರಳ ವಾಗಿ ಕಾಣಿಸಿಕೊಂಡಿರುವ ಈ ಹುಳ ದಿಂದ ರಬ್ಬರ್‌, ಅಡಿಕೆ ಗಿಡಕ್ಕೆ ತೊಂದರೆ ಉಂಟಾಗ ಬಹುದೇ ಎಂಬ ಆತಂಕಕ್ಕೆ ಪರಿಹಾರ ಸಿಗಬೇಕಿದೆ.

ಪರಿಶೀಲಿಸಿ ಕ್ರಮ
ಇದು ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳುವ ಹುಳ. ಸಾಧಾರಣವಾಗಿ ಚಿಗುರನ್ನು ತಿನ್ನುತ್ತವೆ. ಬೇರೇನೂ ಸಮಸ್ಯೆ ಯಾಗದು. ಈ ಹುಳಗಳಿಂದ ಅಡಿಕೆ, ರಬ್ಬರ್‌ ಗಿಡಗಳಿಗೆ ಹಾನಿ ಉಂಟಾ ಗಿದೆಯೇ ಎಂದು ಪರಿಶೀಲಿಸಲಾಗುವುದು.  ಹುಳ ಬಾಧೆ ಹೆಚ್ಚಾ ದರೆ, 2 ಮಿಲಿ ಕ್ಲೊರೊಪೈರಿಪಾಸ್‌ ಅನ್ನು ಎರಡು ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಿದರೆ ನಿಯಂತ್ರಣಕ್ಕೆ ಬರುತ್ತದೆ.
– ಹೊಳೆಬಸಪ್ಪ ಕುಂಬಾರ, ಸಹಾಯಕ ಕೃಷಿ ಅಧಿಕಾರಿ, ತೋಟಗಾರಿಕೆ ಇಲಾಖೆ ಪುತ್ತೂರು

ಪೂರ್ತಿ ಆವರಿಸಿದೆ
ಸುಳ್ಯದ ಹಲವು ಅಡಿಕೆ, ರಬ್ಬರ್‌ ತೋಟಗಳಲ್ಲಿ ಕಂಬಳಿ ಹುಳ ಕಾಣಿಸಿಕೊಂಡಿದೆ. ಮರ ಪೂರ್ತಿ ಹಬ್ಬಿರುವುದರಿಂದ ಕೃಷಿಕ ರಲ್ಲಿ ಗೊಂದಲ ಮೂಡಿದೆ. ಅಡಿಕೆ, ರಬ್ಬರ್‌ಗೆ ಸಮಸ್ಯೆ ಇದೆಯೇ ಎಂಬ ಬಗ್ಗೆ ಉತ್ತರ ಸಿಕ್ಕಿದರೆ ಕೃಷಿಕರ ಆತಂಕ ದೂರವಾದೀತು.
-ಎಂ.ಡಿ. ವಿಜಯ ಕುಮಾರ್‌, ಸಂಚಾಲಕರು, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ, ಸುಳ್ಯ

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

3

Puttur: ಕುಂಜಾಡಿ; ಸೇತುವೆ ಕಾಮಗಾರಿ ಪುನರಾರಂಭ

2(1

Belthangady: ಕೃಷಿ, ಕರಕುಶಲ ಕಲೆಗಳ ವೈಭವ

1(1

Madanthyar: ಬಾಲಕಿಯರ ಹಾಸ್ಟೆಲ್‌ ಕಟ್ಟಡ ಅನಾಥ!

ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.