ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಪ್ರತಿಭಾ ಪುರಸ್ಕಾರ
Team Udayavani, Jul 5, 2017, 5:07 PM IST
ನವಿ ಮುಂಬಯಿ: ಭಗವಂತನ ಸೃಷ್ಟಿಯಲ್ಲಿ ಉತ್ತಮ ಜೀವಿ ಮನುಷ್ಯ. ನಾವು ನಮಗೆ ಈ ಜೀವನವನ್ನು ನೀಡಿದ ಭಗವಂತನ ಧ್ಯಾನ ಮಾಡುವುದು ಅಗತ್ಯ. ನಾವು ಮಾಡಿದ ಕರ್ಮದ ಫಲದಿಂದ ಪ್ರಸಿದ್ಧಿ ಪಡೆಯುತ್ತೇವೆ. ನಮಗೆ ನಮ್ಮ ಸಂಸ್ಕೃತಿ ಮುಖ್ಯ. ಮಕ್ಕಳು ನಮ್ಮ ನೆಲದ ಸಂಸ್ಕೃತಿಯನ್ನು ನಾವು ಅನುಸರಿಸಬೇಕು. ದೇವರ ದಯೆ ಇದ್ದರೆ ಮಾತ್ರ ನಾವು ಜೀವನದಲ್ಲಿ ಪ್ರಗತಿ ಪಡೆಯಲು ಸಾಧ್ಯ. ಇಂದು ನಮಗೆ ದೇವಿಯ ಅನುಗ್ರಹದಿಂದ ಈ ಸಂಸ್ಥೆಯ ಮುಖಾಂತರ ಸಮಾಜ ಸೇವೆ ಮಾಡುವ ಭಾಗ್ಯ ಒದಗಿದೆ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.
ಶ್ರೀ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ ಸಭಾಂಗಣದಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ವತಿಯಿಂದ ಜು. 2ರಂದು ಜರಗಿದ 14ನೇ ವಾರ್ಷಿಕ ಉಚಿತ ಪುಸ್ತಕ ವಿತರಣೆ ಮತ್ತು ಎಚ್‌ಎಸ್‌ಸಿ, ಎಸ್‌ಎಸ್‌ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 14 ವರ್ಷದಿಂದ ಸಮಾಜದ ಮಕ್ಕಳಿಗೆ ಯಾವುದೇ ಜಾತಿ, ಭೇದವಿಲ್ಲದೆ ಉಚಿತವಾಗಿ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದ್ದೇವೆ. ನೀವೆಲ್ಲರೂ ದೇವಿಯ ಪ್ರಸಾದ ರೂಪದಲ್ಲಿ ಪಡೆದ ಈ ಪುರಸ್ಕಾರದಿಂದ ಒಳ್ಳೆಯ ರೀತಿಯಲ್ಲಿ ಕಲಿತು ಈ ಸಮಾಜದ, ಈ ದೇಶದ ಪ್ರಾಮಾಣಿಕ ಪ್ರಜೆಗಳಾಗಿ ದೇಶಕ್ಕೆ, ಸಮಾಜಕ್ಕೆ ಕೀರ್ತಿ ತರಬೇಕು. ನಿಮಗೆಲ್ಲರಿಗೂ ದೇವಿ ಮೂಕಾಂಬಿಕೆಯು ಆಯುರಾರೋಗ್ಯ, ಸೌಭಾಗ್ಯವನ್ನು ನೀಡಿ ಅನುಗ್ರಹಿಸಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ದೇವಾಲಯದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಅಣ್ಣಾವರ ಶಂಕರ್ ಶೆಟ್ಟಿ ಅವರು ಉಪಸ್ಥಿತರಿದ್ದರು. ದೇವಾಲಯದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರು ಆಶೀರ್ವಚನ ನೀಡಿದರು. ಅತಿಥಿಗಳಾಗಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಉದ್ಯಮಿಗಳಾದ ದೇವರಾಜ್ ಎಸ್. ಧುಬೆ, ಅಜಯ್ ಪಾಟೀಲ್, ರಾಜೇಂದ್ರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ನವಿಮುಂಬಯಿ ಮಹಾನಗರ ಪಾಲಿಕೆಯ ಮಾಜಿ ನಗರ ಸೇವಕಿ ಅನಿತಾ ಸಂತೋಷ್ ಶೆಟ್ಟಿ, ದೇವಾಲಯದ ಟ್ರಸ್ಟಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಮಂಡಳದ ಉಪಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ದೆಪ್ಪುಣಿಗುತ್ತು, ಜತೆ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಬಿದ್ರೆ, ನಟನಪ್ರಿಯ ಅಕಾಡೆಮಿಯ ನಿರ್ದೇಶಕ ಟಿ. ಆರ್. ವೆಂಕಟೇಶ್ವರನ್ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ಮತ್ತು ಸಂಸ್ಥೆಯ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇಣಿಗೆ ನೀಡಿದ ದಾನಿಗಳನ್ನು, ಗಣ್ಯರುಗಳನ್ನು ಪದಾಧಿಕಾರಿಗಳು ಗೌರವಿಸಿದರು. ಮಂಡಳದ ಅಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು ಅವರು ಸ್ವಾಗತಿಸಿ ಮಾತನಾಡಿ, ದೇವಾಲಯದ ಸಹ ಸಂಸ್ಥೆಯಾದ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ವತಿಯಿಂದ ಕಳೆದ 14 ವರ್ಷಗಳಿಂದ ಪರಿಸರದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಗುತ್ತಿದೆ. ನೀವೆಲ್ಲರೂ ಈ ದೇವಿಯ ಪ್ರಸಾದ ರೂಪದಲ್ಲಿ ಪಡೆದ ಪುರಸ್ಕಾರದಿಂದ ಒಳ್ಳೆಯ ರೀತಿಯಲ್ಲಿ ಕಲಿತು ವಿದ್ಯಾವಂತರಾಗಿ, ಸಮಾಜದಲ್ಲಿ ಹೆಸರು ಮಾಡಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡ ವೆಂಕಟೇಶ್ವರನ್ ಅವರು ಮಾತನಾಡಿ, ಶ್ರೀ ಮೂಕಾಂಬಿಕೆಯು ಸರಸ್ವತಿ, ಲಕ್ಷ್ಮೀ ಹಾಗೂ ಗೌರಿ ಈ ಮೂರು ದೇವಿಗಳ ಅವತಾರವಾಗಿದ್ದು, ಆದ್ದರಿಂದ ದೇವಿ ಸದಾ ವಿದ್ಯೆಗೆ ಪ್ರೋತ್ಸಾಹ ನೀಡುತ್ತಾಳೆ. ನಾವು ನಿತ್ಯ ದೇವಿಯ ಸ್ಮರಣೆ ಮಾಡುವುದರಿಂದ ದೇವಿಯ ಅನುಗ್ರಹ ನಮಗೆ ಸದಾ ದೊರಕುತ್ತದೆ. ಈ ದೇವಾಲಯದ ಸಮಿತಿಯ ಸದಸ್ಯರ ಶ್ರಮದಿಂದ ಈ ದೇವಾಲಯ ಇಷ್ಟು ಪ್ರಗತಿ ಹೊಂದಿದೆ. ದೇವಾಲಯದ ವತಿಯಿಂದ ಈ ಪುರಸ್ಕಾರ ಡೆದ ನೀವೆಲ್ಲರೂ ಸದಾ ಧನ್ಯರು ಎಂದು ಹೇಳಿದರು.
ಅನಿತಾ ಸಂತೋಷ್ ಶೆಟ್ಟಿ ಅವರು ಮಾತನಾಡಿ, ನೀವು ಪಡೆದ ಪುಸ್ತಕಗಳು ಕಡಿಮೆಯಾಗಿದ್ದಿರಬಹುದು. ಇದರಿಂದ ನಿಮ್ಮ ಪೂರ್ತಿ ಶಿಕ್ಷಣ ಸಾಗುವುದಿಲ್ಲ. ದೇವಿಯ ಅನುಗ್ರಹದಿಂದ ಈ ಪುಸ್ತಕಗಳು ಸಿಕ್ಕಿವೆ. ಇದರಿಂದ ಮಕ್ಕಳು ಸಫಲತೆಯನ್ನು ಕಾಣಲು ಸಾಧ್ಯವಿದೆ. ಇಂದು ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಇತರ ಮಕ್ಕಳಿಗೆ ಸಂಸ್ಥೆಯ ಮೂಲಕ ನೆರವು ನೀಡಲು ಮುಂದಾಗಬೇಕು. ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಹಾಗೂ ಸಮಿತಿಯ ಸದಸ್ಯರ ಪರಿಶ್ರಮದಿಂದ ಮಂದಿರವು ಅಭಿವೃದ್ಧಿ ಕಂಡಿದ್ದು, ನಿಮ್ಮೆಲ್ಲರ ಸೇವೆ ಅಭಿನಂದನೀಯವಾಗಿದೆ ಎಂದರು.
ಮಂಡಳದ ಉಪಾಧ್ಯಕ್ಷ ಸುರೇಶ್ ಎಸ್. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಬಿದ್ರೆ ಪ್ರತಿಭಾ ಪುರಸ್ಕೃತರ ಯಾದಿಯನ್ನು ವಾಚಿಸಿದರು. ಉಪಾಧ್ಯಕ್ಷ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಸಿ, ಎಚ್‌ಎಸ್‌ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸುಮಾರು 100 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಪರಿಸರದ ಸುಮಾರು 1200 ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಕೊನೆಯಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.