ವಿಮಾನದಲ್ಲಿ ಹೋದ ಚೀನೀ ದೇವತೆ
Team Udayavani, Jul 6, 2017, 3:45 AM IST
ಸಿಂಗಾಪುರ: ಕಡು ಬಣ್ಣದ ಬಟ್ಟೆ ತೊಟ್ಟ ಚೀನೀ ದೇವತೆ. ವಿಮಾನದ ಐಷಾರಾಮಿ ಬ್ಯುಸಿನೆಸ್ ಕ್ಲಾಸಲ್ಲಿ ಪ್ರಯಾಣ. ಅರೆ ಇದೇ ನಿದು, ದೇವತೆಯರೆಲ್ಲ ವಿಮಾನ ಯಾನ ಮಾಡುತ್ತಾರಾ ಅಂತ ಸಂಶಯಿಸದಿರಿ.
ಇದು ನಿಜಕ್ಕೂ ನಡೆದಿದೆ. ಚೀನಾ ಕ್ಸಿಯಾಮೆನ್ನಿಂದ ಮಲೇಷ್ಯಾದ ಕೌಲಾಲಾಂ ಪುರಕ್ಕೆ ಚೀನಾದ ಸಮುದ್ರ ದೇವತೆ “ಮಾಝು’ ಸೀಟಲ್ಲಿ ಕೂತು ಪ್ರಯಾಣಿಸಿ ದ್ದಾಳೆ. ಅಂದಹಾಗೆ ಇದು ದೇವತೆಯ ಮೂರ್ತಿ. 6 ಅಡಿ ಉದ್ದದ, ಚಿತ್ತಾರದ ಬಟ್ಟೆ ತೊಟ್ಟ ದೇವತೆಯನ್ನು ಬೆಲ್ಟ್ ಹಾಕಿ ನಿಲ್ಲಿಸಲಾಗಿತ್ತು. ಮಾಝು ದೇವತೆಯೊಂದಿಗೆ 130 ಮಂದಿ ಭಕ್ತರೂ ಪ್ರಯಾಣಿಸಿದ್ದಾರೆ. ದ್ವೀಪ ಪ್ರದೇಶ ಫುÂಜಿಯನ್ ಪ್ರಾಂತ್ಯದಲ್ಲಿ ಈ ದೇವತೆಯ ಮೂಲವಿದೆ ಎಂದು ಹೇಳ ಲಾಗಿದ್ದು, ಚೀನೀ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿರುವ ಕಾರಣಕ್ಕೂ, ಅಲ್ಲಿನ ಪೂಜಾ ಕಾರ್ಯಕ್ರಮಕ್ಕೆ, ದೇವತೆಯನ್ನು ಸಾಗಿಸಲಾಗಿದೆ. ಇದಕ್ಕಾಗಿ 20 ಸಾವಿರ ರೂ.ಗಳ ಟಿಕೆಟ್ ಮಾಡಲಾಗಿದ್ದು, ವಿಮಾನ ಪ್ರಯಾಣ ಬಳಿಕ ಭಕ್ತರು ಸೂಕ್ತವಾಗಿ ಕಾಲನ್ನು ಜೋಡಿಸಿ ಸಾಗಿಸಿದ್ದಾರೆ. ಸದ್ಯ ಚೀನೀ ದೇವತೆಯ ಈ ವಿಮಾನ ಪ್ರಯಾಣದ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.