ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಸಂತಾನ ಸಮಸ್ಯೆ..!
Team Udayavani, Jul 6, 2017, 3:45 AM IST
ಶಿವಮೊಗ್ಗ: ಅಪ್ಪನೆಂದರೆ ಮಗಳಿಗೆ ಪಂಚಪ್ರಾಣ, ಅಪ್ಪನಿಗೂ ಅಷ್ಟೇ ಮಗಳೇ ಎಂದರೆ ಓಡೋಡಿ ಬರುವ ಆಕೆ ಕಂಡರೆ ಜೀವ. ಇಂಥ ಸಂಬಂಧದಲ್ಲಿ ಸಂಸಾರ ವೃದ್ಧಿಯ ಬಗ್ಗೆ ಅಥವಾ ಲೈಂಗಿಕಾಸಕ್ತಿಯ ಬಗ್ಗೆ ಮಾತನಾಡುವುದೇ?
ಮನುಷ್ಯರ ವಿಚಾರದಲ್ಲಿ “ಛೇ’ ಎಂದು ಹೇಳಿಬಿಡುವುದಾದರೂ, ಪ್ರಾಣಿಗಳ ಲೆಕ್ಕಾಚಾರಕ್ಕೆ ಬಂದರೆ ಅಸಾಧ್ಯ ಎಂದು ಹೇಳುವುದು ಕಷ್ಟ. ಹೌದು, ಇಂಥ ಒಂದು ಸಂದಿಗ್ಧ ಪರಿಸ್ಥಿತಿ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಎದುರಾಗಿದೆ. ಸದ್ಯ ಇಲ್ಲಿರೋದು ಆರ್ಯ (14) ಮತ್ತು ಮಾನ್ಯ (5) ಎಂಬ ಸಿಂಹಗಳು. ಇವು ಸಂಬಂಧದಲ್ಲಿ ಅಪ್ಪ-ಮಗಳು. ಹೀಗಾಗಿಯೇ ಏನೋ ಇವೆರಡು ಜೋಡಿಯಾಗುತ್ತಲೂ ಇಲ್ಲ. ಅಲ್ಲದೆ ಸಹಜವಾಗಿ ಇರಬೇಕಾದ ಲೈಂಗಿಕ ಆಸಕ್ತಿಯೂ ಇಲ್ಲ ಎಂಬುದು ಇಲ್ಲಿನ ಅಧಿಕಾರಿಗಳ ಅಭಿಪ್ರಾಯ.
ಆದರೆ ಪ್ರಾಣಿಗಳಲ್ಲಿ ಇಂಥ ಸಂಬಂಧ ಎಲ್ಲಿಯದು ಎಂದರೂ, ಪ್ರಕೃತಿಯೇ ಇವುಗಳಿಗೆ ಸಂತಾನ ಭಾಗ್ಯ ಕರುಣಿಸುತ್ತಿಲ್ಲ.
ಹಳೇ ಕಥೆ: ಮೈಸೂರು ಮೃಗಾಲಯದಿಂದ ಮಾಲಿನಿ, ಆರ್ಯ ಎಂಬ ಎರಡು ಸಿಂಹಗಳನ್ನು ತ್ಯಾವರೆಕೊಪ್ಪ ಧಾಮಕ್ಕೆ ತರಲಾಗಿತ್ತು. ಇವುಗಳಿಗೆ ಹುಟ್ಟಿದ್ದೇ ಮಾನ್ಯ. ಆ ಬಳಿಕ ಮಾಲಿನಿ ಮೃತಪಟ್ಟಿತು. ಇದೀಗ ಆರ್ಯನಿಗೆ ಮಗಳು ಮತ್ತು ಸಂಗಾತಿ ಎರಡೂ ಮಾನ್ಯಳೇ ಆಗಿದ್ದಾಳೆ. ಸುಮಾರು ಐದೂವರೆ ವರ್ಷದಿಂದ ಒಟ್ಟಿಗೇ ಇವೆ. ಮಾನ್ಯ ಬೆದೆಗೆ ಬಂದ ಬಳಿಕ ಇವುಗಳ ಮಧ್ಯೆ ನೈಸರ್ಗಿಕ ಕ್ರಿಯೆ ನಡೆದಿದೆ ಎನ್ನುತ್ತಾರೆ ಸಿಂಹಧಾಮದ ಅಧಿಕಾರಿಗಳು. ಆದರೆ ಯಾವ ಪ್ರಮಾಣದಲ್ಲಿ ಕೂಡಬೇಕೋ ಆ ಪ್ರಮಾಣದಲ್ಲಿ ಕೂಡುತ್ತಿಲ್ಲ. ಇದಕ್ಕೆ ವಯಸ್ಸಿನ ಅಂತರ ಕಾರಣವೋ ಅಥವಾ ಬೇರೆ ನೈಸರ್ಗಿಕ ಕಾರಣವೋ ಗೊತ್ತಿಲ್ಲ ಎನ್ನುತ್ತಾರೆ.
ಬಯಲು ಬಂದೀಖಾನೆಯಂತಹ ಆವರಣದಲ್ಲಿ ಸಿಂಹಗಳಿಗೆ ಸಂತಾನಾಭಿವೃದ್ಧಿಯ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. ಆದರೆ ಇಲ್ಲಿ ನಿಖರವಾದ ಕಾರಣ ಏನೆಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ವನ್ಯಜೀವಿ ವಿಭಾಗದ ಡಿಎಫ್‌ಒ ಚಲುವರಾಜ್.
ವಂಶಾಭಿವೃದ್ಧಿಯ ಸಮಸ್ಯೆಗೆ ಕಾರಣದ ಕುರಿತು ಪರೀಕ್ಷೆ ಮಾಡಬೇಕಾದ ಸೌಲಭ್ಯ ಇಲ್ಲಿಲ್ಲ. ಹೀಗಾಗಿ ಮುಂದೇನು ಮಾಡಬೇಕೆಂದು ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ಅವರ ಎದುರಲ್ಲಿ ಇರುವ ಇನ್ನೊಂದು ಸುಲಭದ ಅವಕಾಶ ಎಂದರೆ ಬೇರೆ ಸಿಂಹಗಳನ್ನು ಸಂಗಾತಿಯಾಗಿ ಇಲ್ಲಿಗೆ ಕರೆ ತರುವುದು.
ಇದೀಗ ಅಂತಹ ಪ್ರಯತ್ನದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಈಗಾಗಲೇ ಬನ್ನೇರುಘಟ್ಟ ಮೃಗಾಲಯದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹವನ್ನು ನೀಡುವಂತೆ ಕೋರಿಕೆ ಸಲ್ಲಿಸಲಾಗಿದೆ. ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರ ಅನುಮತಿ ನೀಡಿದ ಬಳಿಕ ಈ ಪ್ರಸ್ತಾವನೆಗೆ ಜೀವ ಬರಲಿದೆ.
ಇವು ಬಂದರೆ ಒಂದೇ ಬಾರಿಗೆ ಎರಡು ಹೆಣ್ಣು ಸಿಂಹಗಳು ಕೂಡ ಬಸುರಿ ಸಂಭ್ರಮ ಅನುಭವಿಸಬಹುದೆಂಬ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಸಿಂಹಗಳಲ್ಲಿ ಬೆದೆಗೆ ಬಂದ ವೇಳೆಯಲ್ಲಿ ದಿನನಿತ್ಯ 30-40 ಬಾರಿಯಾದರೂ ಗಂಡು-ಹೆಣ್ಣು ಸೇರಬೇಕು. ಆದರೆ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಇದಾಗುತ್ತಿಲ್ಲ. ಇಲ್ಲಿರುವ ಗಂಡು ಸಿಂಹಕ್ಕೆ ಸುಮಾರು 14 ವರ್ಷ. ಹೆಣ್ಣು ಸಿಂಹಕ್ಕೆ 5 ವರ್ಷ. ಇದು ಇವೆರಡರಲ್ಲಿ ಪರಸ್ಪರ ಆಸಕ್ತಿ ಮೂಡಿಸದೇ ಇರುವಲ್ಲಿ ಕಾರಣವಾಗುತ್ತಿರಬಹುದು.
– ಡಾ| ವಿನಯ್, ಪಶುವೈದ್ಯರು, ತ್ಯಾವರೆಕೊಪ್ಪ ಹುಲಿ-ಸಿಂಹಧಾಮ
– ಗೋಪಾಲ್ ಯಡಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.