ಗಂಡನಿಗೆ ಗಂಡಾಂತರ ವದಂತಿಗೆ ತಾಳಿಯಲ್ಲಿದ್ದ ಹವಳ ಪುಡಿ ಪುಡಿ!
Team Udayavani, Jul 6, 2017, 9:00 AM IST
ದಾವಣಗೆರೆ: ಮಾಂಗಲ್ಯ ಸರದ ಜತೆಗೆ ಕೆಂಪು ಹವಳ ಇದ್ದರೆ ನಿಮ್ಮ ಗಂಡನಿಗೆ ಗಂಡಾಂತರ ತಪ್ಪಿದ್ದಲ್ಲ. ತಕ್ಷಣ ಅವುಗಳನ್ನು ಜಜ್ಜಿ ಹಾಕಿ, ಇಲ್ಲವಾದರೆ ಬೆಳಗಾಗುವುದರೊಳಗೆ ನಿಮ್ಮ ಪತಿಗೆ ಪ್ರಾಣಾಪಾಯ ಆಗಲಿದೆ…!
ಇಂತಹದ್ದೊಂದು ಸುದ್ದಿ ಕೇಳಿ ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ತಾಳಿಯಲ್ಲಿದ್ದ (ಮಾಂಗಲ್ಯ ಸರ)ಹವಳಗಳನ್ನು ಜಜ್ಜಿ ಪುಡಿ ಪುಡಿ ಮಾಡಿದ ಘಟನೆ ಬುಧವಾರ ನಡೆದಿದೆ.
ಗ್ರಾಮೀಣ ಭಾಗದ ಹರಪನಹಳ್ಳಿ, ಜಗಳೂರು ತಾಲೂಕಿನ ವಿವಿಧೆಡೆ ಸೇರಿ ಪಾಲಿಕೆ ವ್ಯಾಪ್ತಿಯ ಹಳೆ ಕುಂದುವಾಡ, ಹೊಸ ಕುಂದುವಾಡ, ಎಸ್.ಎ. ರವೀಂದ್ರನಾಥ ನಗರ, ಅಮೃತ ನಗರದಲ್ಲಿ ಈ ವಿದ್ಯಮಾನ ನಡೆದಿದೆ. ಅದರಲ್ಲೂ
ವಿಶೇಷವಾಗಿ ಕುಂದುವಾಡ ಗ್ರಾಮದಲ್ಲಿ ಶೇ.80ರಷ್ಟು ಸುಮಂಗಲೆಯರು ತಮ್ಮ ತಾಳಿಯಲ್ಲಿದ್ದ ಹವಳಗಳನ್ನು ಕಲ್ಲಿನಿಂದ ಜಜ್ಜಿ ಹಾಕಿದ್ದಾರೆ.
ಮಂಗಳವಾರ ರಾತ್ರಿ 11ರಿಂದ ಈ ಹವಳದ ಸುದ್ದಿ ಹಬ್ಬಿದೆ. ಅನೇಕರು ದೂರವಾಣಿ ಕರೆ, ಸಾಮಾಜಿಕ ಜಾಲತಾಣಗಳ ಮೂಲಕ ಈ ಸುದ್ದಿ ಹಬ್ಬಿಸಿದ್ದಾರೆ. ಹೀಗೆ ಸುದ್ದಿ ಹಬ್ಬಿಸಿದವರು ಈಗೊಂದು ದೊಡ್ಡ ಗಂಡಾಂತರ ಬಂದಿದೆ.
ತಾಳಿಯಲ್ಲಿನ ಕೆಂಪು ಹವಳ ಜಜ್ಜದೇ ಇದ್ದುದಕ್ಕೆ ಅಲ್ಲಿ ಇಷ್ಟು ಜನ ಸತ್ತಿದ್ದಾರೆ, ಇಲ್ಲಿ ಅಷ್ಟು ಜನ ಸತ್ತಿದ್ದಾರೆ ಅಂದೆಲ್ಲಾ ಪುಕಾರು ಸೃಷ್ಟಿಸಿದ್ದಾರೆ. ಇದನ್ನು ಕೇಳಿದ ಜನ 10-15 ರೂ.ನ ಹವಳ ಹೋದರೆ ಹೋಗಲಿ, ನಮ್ಮ ಗಂಡಂದಿರು
ಕ್ಷೇಮವಾಗಿದ್ದರೆ ಸಾಕು ಎಂದು ಈ ರೀತಿ ಮಾಡಿದ್ದಾರೆ.
ಕುಂದುವಾಡದ ಪೈಲ್ವಾನ್ ಗಣೇಶ್‌ರಿಗೂ ಸಹ ಮೊಬೈಲ್‌ಗೆ ಈ ರೀತಿಯ ಕರೆಬಂದಿದೆ. ಬಳ್ಳಾರಿಯಿಂದ ಅವರ ಸಂಬಂಧಿಕರೊಬ್ಬರು ಕರೆಮಾಡಿ, ಯಾಕೆ? ಏನು? ಎಂದು ಕೇಳಬೇಡ. ಮೂಢನಂಬಿಕೆಯೋ, ವೈಜ್ಞಾನಿಕವೋ
ಕೆದಕಬೇಡ. ತಕ್ಷಣ ನಿಮ್ಮ ಮನೆಯವರ ತಾಳಿಯಲ್ಲಿರುವ ಹವಳವನ್ನು ಜಜ್ಜಿ ಹಾಕಿಸು ಎಂಬುದಾಗಿ ಮಧ್ಯರಾತ್ರಿ 12.30ರ ಸುಮಾರಿಗೆ ತಿಳಿಸಿದ್ದಾರೆ. ಇದನ್ನು ಗಣೇಶ್ ಒಪ್ಪದೇ ಇದ್ದಾಗ, ಎಲ್ಲಾ ಊರುಗಳಲ್ಲಿ ಆಗುತ್ತಿದೆ. ನಿಮ್ಮ ಊರಲ್ಲೂ ಇದು ನಡೆಯುತ್ತಿದೆ ಎಂದಿದ್ದಾರೆ. ಆಯಿತು ನೋಡೋಣ ಎಂದು ಅವರು ಸುಮ್ಮನಾಗಿದ್ದಾರೆ. ಆದರೆ, ಮತ್ತದೇ ವ್ಯಕ್ತಿ ಬೆಳಗ್ಗೆ 4 ಗಂಟೆಗೆ ಮತ್ತೆ ಕರೆ ಮಾಡಿ, ಉದಾಸೀನ ಮಾಡಬೇಡ. ಇದೀಗ ಹರಪನಹಳ್ಳಿಯಲ್ಲಿ 5 ಜನ ಸತ್ತಿದ್ದಾರಂತೆ ಎಂದು ಎಚ್ಚರಿಸಿದ್ದಾರೆ. ಕೊನೆಗೆ ಗಣೇಶ್ ಮನೆಯಿಂದ ಹೊರಬಂದಿದ್ದಾರೆ. ಕರೆ ಮಾಡಿದ ವ್ಯಕ್ತಿ
ಹೇಳಿದಂತೆ ಗ್ರಾಮದ ಅನೇಕ ಮಹಿಳೆಯರು ಅಷ್ಟು ಹೊತ್ತಲ್ಲೇ ಎಚ್ಚರಗೊಂಡು ಹವಳ ಒಡೆದು ಹಾಕುತ್ತಿದ್ದುದು ಕಂಡುಬಂದಿದೆ. ಇದರಿಂದ ಚಕಿತರಾದ ಗಣೇಶ್, ಹಲವರಿಗೆ ತಿಳಿಹೇಳುವ ಯತ್ನಮಾಡಿದ್ದಾರೆ. ಆದರೆ, ಯಾರೂ ಸಹ
ಅವರ ಮಾತು ನಂಬಿಲ್ಲ. ಗ್ರಾಮದ ಬಹುತೇಕ ಮುತ್ತೆ$çದೆಯರು ತಮ್ಮ ತಾಳಿಯಲ್ಲಿದ್ದ ಹವಳ ಜಜ್ಜಿ ಹಾಕಿದ್ದಾರೆ. ಕೊನೆಗೆ ಇದು ಮಾಧ್ಯಮಗಳಿಗೆ ಗೊತ್ತಾಗಿದೆ. ಒಂದಷ್ಟು ಜನ ತಿಳಿ ಹೇಳಿದರೂ ಗೃಹಿಣಿಯರು ಕಿವಿಗೊಟ್ಟಿಲ್ಲ. ಜಿಲ್ಲೆಯ
ಅನೇಕ ಗ್ರಾಮಗಳಲ್ಲಿ ಈ ರೀತಿಯ ಘಟನೆ ನಡೆದಿರುವುದು ತಿಳಿದುಬಂದಿದೆ. ಹರಪನಹಳ್ಳಿ, ಜಗಳೂರು ತಾಲೂಕಿನ ಗ್ರಾಮಗಳಲ್ಲಿ ಸುದ್ದಿ ಕಾಳಿYಚ್ಚಿನಂತೆ ಹಬ್ಬಿದೆ.
ಅವಿದ್ಯಾವಂತ, ಗ್ರಾಮೀಣ ಮಹಿಳೆಯರೇ ಈ ವದಂತಿ ನಂಬಿ ಕೆಂಪು ಹವಳ ಜಜ್ಜಿ ಹಾಕಿದ್ದಾರೆ. ಕೆಲವರಿಗೆ ತವರು ಮನೆಯವರೇ ದೂರವಾಣಿ ಕರೆ ಮಾಡಿದ್ದಾರಂತೆ. ರಾತ್ರೋ ರಾತ್ರಿ ಹಬ್ಬಿದ ಪುಕಾರು ತಾಳಿಯಲ್ಲಿದ್ದ ಹವಳಕ್ಕೆ ಕಂಟಕ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.