ಹೊಸ ಪದ್ಧತಿ ಅರಿವಿಗೆ ಬೇಕಿದೆ ಕೊಂಚ ಸಮಯ
Team Udayavani, Jul 6, 2017, 9:09 AM IST
ದಾವಣಗೆರೆ: ಒಂದು ದೇಶ… ಒಂದು ತೆರಿಗೆ… ಘೋಷಣೆಯಡಿ ದೇಶಾದ್ಯಂತ ಕೇಂದ್ರ ಸರ್ಕಾರ ಜು. 1ರಿಂದ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಜಿ.ಎಸ್.ಟಿ. ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹೋಟೆಲ್ ಉದ್ಯಮ, ದಿನಸಿ ಅಂಗಡಿಗಳಿಗೆ ಇನ್ನೂ ಖಚಿತ ಮಾಹಿತಿಯೇ ಇಲ್ಲದ ಕಾರಣ ನೂತನ ತೆರಿಗೆ ಪದ್ಧತಿಯ ಸಾಧಕ-ಬಾಧಕ ಅರಿವಾಗಲು ಒಂದಿಷ್ಟು ಸಮಯ ಬೇಕಿದೆ. ಆದರೆ, ಈ ಹೊಸ ತೆರಿಗೆ ಪದ್ಧತಿ ಕನ್ನಡ ಚಿತ್ರರಂಗಕ್ಕೆ ಮರಣ ಮೃದಂಗ… ಎನ್ನುವ
ಮಾತು ಅತಿ ಸ್ಪಷ್ಟವಾಗಿ ಕೇಳಿ ಬರುತ್ತಿದೆ.
ಜಿಎಸ್‌ಟಿಯಲ್ಲಿ ಕೃಷಿ ಉತ್ಪನ್ನಗಳು ಸೇರ್ಪಡೆಯಾಗಿಲ್ಲ. ನೋಂದಾಯಿತ ಬ್ರಾಡೆಂಡ್ ಸರಕು, ಸಂಸ್ಕರಣೆಗೊಳಪಟ್ಟವು ಮಾತ್ರ ನೂತನ ತೆರಿಗೆ ಪದ್ಧತಿಯ ವ್ಯಾಪ್ತಿಗೊಳಪಡುತ್ತಿವೆ. ಅನೇಕ ಕೃಷಿ ಉತ್ಪನ್ನಗಳು ಜಿಎಸ್‌ಟಿ ಅಡಿಯಲ್ಲಿ ಬರುವುದೇ
ಇಲ್ಲ. ಜಿಎಸ್‌ಟಿ ಕುರಿತಂತೆ ಈವರೆಗೆ ಅಧಿಕೃತವಾಗಿ ಯಾವುದೇ ಸುತ್ತೋಲೆ ಬಂದಿಲ್ಲ. ಮೇಲಾಗಿ ಈ ಅವಧಿಯಲ್ಲಿ ಮಾರುಕಟ್ಟೆಗೆ ಯಾವುದೇ ಅವಕ ಬರುತ್ತಿಲ್ಲ. ಹಾಗಾಗಿ ಜಿಎಸ್‌ಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಹಿವಾಟಿನ ಮೇಲೆ ಬೀರುವ ಅಥವಾ ಬೀರಬಹುದಾದ ಪರಿಣಾಮಗಳ ಬಗ್ಗೆ ಈಗಲೇ ಏನನ್ನೂ ಹೇಳಲಿಕ್ಕಾಗದು ಎನ್ನುತ್ತಾರೆ
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಂಟಿ ನಿರ್ದೇಶಕ ಬಿ. ಆನಂದ್.
ನಮ್ಮ ಮಾಹಿತಿ ಪ್ರಕಾರ ತೆಂಗು ಮತ್ತು ಅಡಕೆಗೆ ಶೇ. 5ರಷ್ಟು ಜಿ.ಎಸ್.ಟಿ. ಇದೆ. ಇನ್ನುಳಿದಂತೆ ಯಾವುದೇ ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿ ಅನ್ವಯಿಸುತ್ತದೆಯೇ ಅಥವಾ ಇಲ್ಲವೇ ಎಂದು ಖಚಿತವಾಗಿ ಹೇಳಲಿಕ್ಕಾಗದು. ಸರ್ಕಾರದಿಂದ
ಅಧಿಕೃತ ಸುತ್ತೋಲೆ ಬಂದ ನಂತರವೇ ಸ್ಪಷ್ಟ ಚಿತ್ರಣ ದೊರೆಯುತ್ತದೆ ಎನ್ನುತ್ತಾರೆ ಅವರು. ನೂತನ ಜಿ.ಎಸ್.ಟಿ.ಯಿಂದ ಸಣ್ಣ ಪ್ರಮಾಣದ ಹೋಟೆಲ್ ವಹಿವಾಟು ಮೇಲೆ ಭಾರೀ ಪರಿಣಾಮ ಉಂಟಾಗದು. ದಿನಸಿ ವಸ್ತುಗಳಲ್ಲಿ ಕೆಲವು
ಜಿ.ಎಸ್.ಟಿ. ವ್ಯಾಪ್ತಿಗೆ ಬರಲಿವೆ ಎಂಬ ಮಾಹಿತಿ ಇದೆ. ಮಳೆಯ ಕೊರತೆಯಿಂದ ಮಾರುಕಟ್ಟೆಗೆ ಬರುವ ತರಕಾರಿ ಕಡಿಮೆ. ಹಾಗಾಗಿ ಅವುಗಳ ಬೆಲೆ ಜಾಸ್ತಿಯಾಗಿ, ತಿನಿಸುಗಳ ಬೆಲೆ ಒಂದಷ್ಟು ಏರುಪೇರಾಗುತ್ತದೆ. ತರಕಾರಿ ಬೆಲೆ ಹೀಗೆಯೇ ಇರುತ್ತದೆ ಎನ್ನಲಿಕ್ಕಾಗದು. ಹಾಗಾಗಿ ತರಕಾರಿ ಬೆಲೆಯ ಆಧಾರದಲ್ಲಿ ತಿಂಡಿ, ಊಟದ ಬೆಲೆ
ಏರಿಳಿಕೆ ಮಾಡಲಿಕ್ಕೆ ಬರುವುದಿಲ್ಲ. ಈವರೆಗೆ ಜಿ.ಎಸ್.ಟಿ. ಯಿಂದಲೇ ಭಾರೀ ಎಫೆಕ್ಟ್ ಕಂಡು ಬಂದಿಲ್ಲ. ಮುಂದೆ ಹೇಗೋ ಕಾದು ನೋಡಬೇಕು ಎನ್ನುವುದು ಅಯೋಧ್ಯಾ ಹೋಟೆಲ್‌ನ ಶ್ರೀಧರ್ ಶೆಟ್ಟಿ ಅನಿಸಿಕೆ.
ಜಿ.ಎಸ್.ಟಿ. ಬರುವ ಮುನ್ನ ಏಸಿ(ಹವಾನಿಯಂತ್ರಿತ) ಸೇವೆಗೆ ಶೇ.18 ರಷ್ಟು ಟ್ಯಾಕ್ಸ್ ಇತ್ತು. ಜಿ.ಎಸ್.ಟಿ.ಯಿಂದ ಅದು ಶೇ. 28ಕ್ಕೆ ಏರಿದೆ. ಸೌಲಭ್ಯ ಹೆಚ್ಚಾದಂತೆಲ್ಲಾ ಜಿಎಸ್‌ಟಿ ಅಪ್ಲೈ ಆಗುತ್ತಾ ಹೋಗುತ್ತದೆ. ವರ್ಷಕ್ಕೆ 20 ಲಕ್ಷಕ್ಕಿಂತಲೂ ಕಡಿಮೆ ವಹಿವಾಟು ನಡೆಸುವರೆಗೆ ಅನ್ವಯವಾಗುವುದಿಲ್ಲ. ರಿಲ್ಯಾಕೇಷನ್ ಕೊಡುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ.
ರಿಜಿಸ್ಟರ್ಡ್ ಆಗಿರುವ ಬ್ರಾಡೆಂಡ್ ವಸ್ತುಗಳಿಗೆ ಜಿಎಸ್‌ಟಿ ಇದೆ. ಆದರೆ, ಇತರೆ ವಸ್ತುಗಳಿಗೆ ಜಿಎಸ್‌ಟಿ ಇಲ್ಲ. ಜು.1 ರಿಂದ ಜಿ.ಎಸ್.ಟಿ. ಬಂದಿದ್ದರೂ ಈವರೆಗೆ ಎಫೆಕ್ಟ್ ಗೊತ್ತಾಗುತ್ತಿಲ್ಲ. ರೇಟು ಖಚಿತವಾಗಿದೆ. ಆದರೆ, ಸರ್ವೀಸ್ (ಪೂರೈಕೆ) ಬಗ್ಗೆ
ಸ್ಪಷ್ಟನೆ ಇಲ್ಲ. ಜಿಎಸ್‌ಟಿ ಬಗ್ಗೆ ಗೊಂದಲವಂತೂ ಇದ್ದೇ ಇದೆ ಎನ್ನುತ್ತಾರೆ ಕಿರಾಣಿ ಅಂಗಡಿ ಮಾಲಿಕ ಪ್ರದೀಪ್.
ಜಿಎಸ್‌ಟಿ ಬಂದಾಗನಿಂದ ಅಂಗಡಿ ಓಪನ್ ಮಾಡಿಯೇ ಇಲ್ಲ. ಯಾವ ಗೂಡ್ಸ್ ಮೇಲೆ ಎಷ್ಟು ತೆರಿಗೆ ಬೀಳುತ್ತದೆ ಎಂಬುದರ ಬಗ್ಗೆ ಈಗಲೂ ಕನ್ ಪ್ಯೂಸ್ ಇದೆ. ಆಡಿಟರ್ ಕೇಳಿದರೂ ಸರಿಯಾಗಿ ಗೊತ್ತಾಗುತ್ತಿಲ್ಲ. ಹಾಗಾಗಿ ಅಂಗಡಿ ಮುಚ್ಚಿದಿವಿ. ಎಲ್ಲಾ ಗೊಂದಲ ಬಗೆಹರಿದು, ಕ್ಲಿಯರ್ ಪಿಕ್ಚರ್ ಸಿಕ್ಕ ಮೇಲೆ ವಹಿವಾಟು ನಡೆಸುತ್ತೇವೆ ಎಂದು
ಶ್ರೀ ಗುರುರಾಘವೇಂದ್ರ ಎಲೆಕ್ಟ್ರಾನಿಕ್ಸ್‌ನ ಗಿರೀಶ್ ಹೇಳುತ್ತಾರೆ.
ಹಿಂದೆ 5 ಲಕ್ಷ ಇದ್ದ ಲಿಮಿಟೇಷನ್ ಈಗ 20 ಲಕ್ಷ ಆಗಿದೆ. ಹಾಗಾಗಿ ನಮಗೆ ಜಿಎಸ್‌ಟಿ ಆಗಿದ್ದರಿಂದ ತೊಂದರೆ ಇಲ್ಲ. ಎಂದಿನಂತೆ ಅಂಗಡಿ ನಡೆಯುತ್ತಿದೆ ಎಂದು ಸಂತೋಷ್ ಎಲೆಕ್ಟ್ರಿಕ್ಸ್ ಮಾಲಿಕ ಸಂತೋಷ್ ದೊಡ್ಮನಿ ತಿಳಿಸುತ್ತಾರೆ.
ಜಿಎಸ್‌ಟಿ ಭಾರೀ ಪರಿಣಾಮ ಬೀರಿರುವುದು ಚಿತ್ರಮಂದಿರಗಳ ಮೇಲೆ. ಜಿಎಸ್‌ಟಿ ಕನ್ನಡ ಚಿತ್ರಗಳ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತದೆ. ಕಡಿಮೆ ಬಜೆಟ್ ಚಿತ್ರಗಳ ಕಥೆ ಅಕ್ಷರಶಃ ಮುಗಿದಂತೆ. 100 ರೂಪಾಯಿ ಟಿಕೆಟ್‌ಗೆ 18
ರೂಪಾಯಿ ಜಿಎಸ್‌ಟಿ ಇದೆ. ಅದಕ್ಕಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗೆ 28 ರೂಪಾಯಿ ಬೀಳುತ್ತದೆ. ಟಿಕೆಟ್ ಮೇಲೆ ಜಿಎಸ್‌ಟಿ ಹಾಕುವುದರಿಂದ ಷೇರಿನ ಮಾತೇ ಇಲ್ಲ. ಜಿಎಸ್‌ಟಿ ಯಿಂದ ಕನ್ನಡ ಫಿಲ್ಮ್ಗೆ ಭಾರಿ ಹೊಡೆತ ಎನ್ನುತ್ತಾರೆ ಚಿತ್ರಮಂದಿರದ
ಮಾಲಿಕರೊಬ್ಬರು. ಹಿಂದಿನಂತೆ ಲೋಕಲ್‌ನವರಿಗೆ (ರಾಜ್ಯ) ದವರಿಗೆ ಟ್ಯಾಕ್ಸ್ ಬಿಡಬೇಕಿತ್ತು. ಜಿ.ಎಸ್.ಟಿ.
ಯಿಂದ ಹೆಚ್ಚಿನ ಹೊರೆ ಆಗಲಿದೆ. ಸಣ್ಣ-ಪುಟ್ಟ ಊರುಗಳ ಚಿತ್ರಮಂದಿರದಲ್ಲಿ ಸ್ಲಾಬ್‌ನಡಿ ಒಂದು ಷೋಗೆ 500 ರೂಪಾಯಿ ಕೊಡಲಾಗುತ್ತಿತ್ತು. ಹೇಗೋ ಸಣ್ಣ ಬಜೆಟ್ ಚಿತ್ರಗಳು ನಡೆಯುತ್ತಿದ್ದವು. ಮೊದಲೇ ಮಳೆ ಇಲ್ಲ. ಜನರು ಟಾಕೀಸ್‌ಗೆ
ಬರುವುದೇ ಇಲ್ಲ. ಯಾವುದೋ ಒಂದು ಫಿಲ್ಮ್ ಹಿಟ್ ಆಗುತ್ತದೆ. ಒಟ್ಟಾರೆಯಾಗಿ ಜಿಎಸ್‌ಟಿ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ದೊಡ್ಡ ಹೊಡೆತ… ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ರಾ.ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.