ನಾನು, ಭೀಮಸಮುದ್ರದ ಭೀಮ.. ಕಾಂಗ್ರೆಸ್ ನಾಯಕರಿಗೆ ಸಂಸದ ಎದಿರೇಟು
Team Udayavani, Jul 6, 2017, 9:17 AM IST
ದಾವಣಗೆರೆ: ನಾನು, ಹೆದರಿ-ಬೆದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೆ ಸರಿಯುವವನೇ ಅಲ್ಲ. ಏಕೆಂದರೆ ನಾನು
ಭೀಮಸಮುದ್ರದ ಭೀಮ…ಎನ್ನುವ ಮೂಲಕ ತಮ್ಮನ್ನು ಟೀಕಿಸಿದ್ದ ಕಾಂಗ್ರೆಸ್ ಮುಖಂಡರಿಗೆ ನೇರ ಟಾಂಗ್ ಕೊಟ್ಟಿದ್ದಾರೆ.
ಬುಧವಾರ ತಮ್ಮ 65ನೇ ಜನ್ಮದಿನದ ಅಂಗವಾಗಿ ಸರ್ಕಾರಿ ಅಂಧ ಹೆಣ್ಣು ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ರಕ್ತದಾನ
ಶಿಬಿರ, ಸಮವಸ್ತ್ರ ವಿತರಣಾ ಕಾರ್ಯಕ್ರಮದುದ್ದಕ್ಕೂ ಭಾರಿ ಜೋಷ್‌ನಲ್ಲೇ ಮಾತನಾಡಿದ ಅವರು, ಜಿಲ್ಲೆಯ ಜನರ
ಆಶೀರ್ವಾದ, ಸಹಕಾರ ಇರುವ ಕಾರಣಕ್ಕೆ ಭೀಮಸಮುದ್ರದಿಂದ ಬಂದು ಇಲ್ಲಿ ರಾಜಕೀಯ ಮಾಡುತ್ತಿದ್ದೇನೆ. ನನಗೆ ಶಕ್ತಿ
ಇರುವುದರಿಂದಲೇ ಅಲ್ಲಿಂದ ಬಂದು ಇಲ್ಲಿ ರಾಜಕೀಯ ಮಾಡುತ್ತಿರುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೋ ಹುಮ್ಮಸ್ಸಿನಲ್ಲಿ ಸಿದ್ದೇಶ್ವರ್ ಮಾಡಿರುವ ಅಭಿವೃದ್ಧಿ ಕೆಲಸದ ಬೋರ್ಡ್ ತೋರಿಸಿದರೆ ಸಾಕು
ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ. ನಾನು ಮಾಡಿರುವ ನೂರಾರು ಅಭಿವೃದ್ಧಿ ಕೆಲಸಗಳ ಬೋರ್ಡ್ ಬೇಕಾದ ಕಡೆಗೆ ಇವೆ. ಈ ಕಾರ್ಯಕ್ರಮ ನಡೆಯುತ್ತಿರುವ ಶಾಲೆಯಲ್ಲೇ ಇದೆ. ರಾಜೀನಾಮೆ ಕೊಡುತ್ತೇನೆ ಎಂದು ಮಾತನಾಡುವುದು ಬಹಳ ಸುಲಭ. ವಿವೇಕದಿಂದ ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.
ನನ್ನ ಬಾಡಿಯ ಒಂದೊಂದೇ ಪಾರ್ಟ್ಸ್ ಹೋಗುತ್ತಿವೆ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲವೂ
ಸರಿಯಾಗಿಯೇ ಇವೆ. ಆದರೂ ಅವರು ಎಷ್ಟು ಹಳ್ಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿ, ಸ್ಪಂದಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ. ನನ್ನ ಬಳಿಯೂ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಇದೆ. ನೀವು ಮಾಡಿರುವ
ಕೆಲಸದ ಪಟ್ಟಿ ಕೊಡಿ ಎಂದು ಸವಾಲು ಹಾಕಿದರು.
ನನ್ನ ಪಾರ್ಟ್ಸ್ ಹೋಗುತ್ತಿವೆ ಎನ್ನುತ್ತಾದರೂ ನಾನು ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗೆ ಸ್ಪಂದಿಸುವ, ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ನಮ್ಮ ತಂದೆಯನ್ನು 2 ಬಾರಿ, ನನ್ನನ್ನು ಮೂರು ಬಾರಿ ಗೆಲ್ಲಿಸಿರುವ ಜನರಿಗೆ ಎಷ್ಟು ಕೆಲಸ ಮಾಡಿದರೂ ಋಣ ತೀರಸಲು ಆಗುವುದೇ ಇಲ್ಲ ಎಂದು ಭಾವಪರವಶರಾಗಿ ಹೇಳಿದರು.
2004 ಚುನಾವಣೆ ಸಂದರ್ಭದಲ್ಲೂ ಸಿದ್ದೇಶ್ವರ್ ಸತ್ತೇ ಹೋಗುತ್ತಾರೆ ಎಂದೆಲ್ಲಾ ಕಾಂಗ್ರೆಸ್‌ನವರು ಪುಖಾರು ಹಬ್ಬಿಸಿದ್ದರು. 2004 ಅಲ್ಲ 2017 ಬಂದಿದ್ದರೂ ಸಿದ್ದೇಶ್ವರ್ ಸತ್ತಿಲ್ಲ. ಈ ಸಿದ್ದೇಶ್ವರ್ ಗಟ್ಟಿಯಾಗಿಯೇ ಇದ್ದೇನೆ. ಇನ್ನೂ 10-15 ವರ್ಷ ರಾಜಕೀಯ ಮಾಡುತ್ತೇನೆ. 2018ರ ಚುನಾವಣೆಯಲ್ಲಿ ಎಲ್ಲ 8 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಆಸೆ ಇದೆ. 8ಕ್ಕೆ 8 ಸ್ಥಾನ ಗೆಲ್ಲಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಇನ್ನೂ ರಾಜಕೀಯದಲ್ಲಿ ಮುಂದುವರಿಯುವುದಾಗಿ
ತಿಳಿಸಿದರು. ಡಿಸಿಎಂ ಟೌನ್‌ಶಿಪ್ ಬಳಿ ರೈಲ್ವೆ ಸೇತುವೆ ಹಾವಿನಂತೆ ಸೊಳ್ಳಂಬಳ್ಳ ಇದೆ. ಶಿರಮಗೊಂಡನಹಳ್ಳಿ ಬಳಿ ಸೇತುವೆಯಲ್ಲಿ ಓಡಾಡಲಿಕ್ಕೆ ಆಗುವುದೇ ಇಲ್ಲ… ಎಂದೆಲ್ಲ ಆರೋಪ ಮಾಡಿದಾಗ ಸುಮ್ಮನೇ ಇದ್ದೆ. ಯಾವಾಗ ವೈಯಕ್ತಿಕವಾಗಿ ಮಾತನಾಡತೊಡಗಿದರೋ ಆಗ ನಾನು ಸಹ ವೈಯಕ್ತಿಕವಾಗಿ ಮಾತನಾಡುತ್ತಿದ್ದೇನೆ. ಡಿಸಿಎಂ
ರೈಲ್ವೆ ಸೇತುವೆ, ಶಿರಮಗೊಂಡನಹಳ್ಳಿ ಸೇತುವೆ ಕೆಲಸ ಆಗಿರುವುದೆಲ್ಲಾ ಯುಪಿಎ ಕಾಲದಲ್ಲಿ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಮರೆಯಬಾರದು. ಷಟ³ಥ ರಸ್ತೆ ಕೆಲಸ ಮಾಡುವಾಗ ಶಿರಮಗೊಂಡನಹಳ್ಳಿ ಸೇತುವೆ
ಪ್ರಾಬ್ಲಿಂ ಸಾಲ್Ì ಮಾಡಲಾಗುವುದು. ಡಿಸಿಎಂ ಟೌನ್‌ಶಿಪ್ ಬಳಿ ಫ್ಲೆ ಓವರ್ ನಿರ್ಮಿಸಲು ಮರು ಸರ್ವೇ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ಸಭೆಯಲ್ಲಿ ನಾನು ಭಾಗವಹಿಸಿದ್ದೇನೆ. ಯೋಜನೆ ನಿಯಮ ತಿದ್ದುಪಡಿ ಮಾಡಿದ್ದ ಕಾರಣಕ್ಕೆ ಕೆಲಸ
ವಿಳಂಬವಾಗುತ್ತಿದೆ. ನಾನು 1 ರೂಪಾಯಿ ಕೊಟ್ಟಿಲ್ಲ ಎಂದಿದ್ದಾರೆ. ನಿಜ ನಾನು 1 ರೂಪಾಯಿ ಅಲ್ಲ 400 ಕೋಟಿ ಕೊಟ್ಟಿದ್ದೇನೆ. ಈಗಾಗಲೇ 400 ಕೋಟಿ ಖರ್ಚಾಗಿ, ಇನ್ನೂ 400 ಕೋಟಿ ಬರಬೇಕಿತ್ತು. ಬಹಳಷ್ಟು ಕೆಲಸ ಮಾಡಿದ್ದೇವೆ ಎಂದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸವಿವರವಾದ ಪಟ್ಟಿಯನ್ನೇ ಓದಿದರು. ಮಹಾನಗರ ಪಾಲಿಕೆ ಕಾರ್ಯ ವೈಖರಿಯ
ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ, ನೀರು ಮತ್ತಿತರ ಸಮಸ್ಯೆ ಪ್ರಸ್ತಾಪಿಸಿ ಮಹಾನಗರ ಪಾಲಿಕೆ ಇದೆಯೇ… ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ನೇರಾನೇರವಾಗಿ
ಟಾಂಗ್ ನೀಡಿದ ಸಂಸದ ಸಿದ್ದೇಶ್ವರ್, ದಯಮಾಡಿ ಯಾರೇ ಆಗಲಿ ವೈಯಕ್ತಿಕವಾಗಿ ಟೀಕೆ ಮಾಡಬಾರದರು. ಫೋನ್‌ನಲ್ಲಿ ಮಾತನಾಡುತ್ತಾ ಕೆಳಗೆ ಬಿದ್ದ ಕಾರಣಕ್ಕೆ ಕಾಲಿಗೆ ಪೆಟ್ಟಾಯಿತು. ಆದರೂ, ಕುಂಟುತ್ತಲೇ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದೇನೆ ಎಂದು ತಮಗಾಗಿರುವ ಕಾಲಿನ ಗಾಯದ ಬಗ್ಗೆ ಸಮಜಾಯಿಷಿ ನೀಡಿದರು.
ನಾವು-ನೀವು ಇಬ್ಬರು ಸೇರಿದರನೇ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ನನ್ನಿಂದಾಗುವ ಕೆಲಸ ನನ್ನಿಂದ ಮಾಡಿಸಿಕೊಳ್ಳಿ. ನಿಮ್ಮಿಂದಾಗುವ ಕೆಲಸ ನಾನು ಮಾಡಿಸಿಕೊಳ್ಳುತ್ತೇನೆ. ಇಬ್ಬರೂ ಕೂಡಿ ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡೋಣ. ಚುನಾವಣೆ ಬಂದಾಗ ಪಕ್ಷ ರಾಜಕಾರಣ ಮಾಡೋಣ. ಒಂದಾಗಿ ಅಭಿವೃದ್ಧಿ ಕೆಲಸ
ಮಾಡೋಣ ಎನ್ನುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಒಂದಾಗಿರೋಣ ಎಂಬ ಸಂದೇಶ ರವಾನಿಸಿದರು.
ಬಿಜೆಪಿ ನಾಯಕರು ಹೇಳಿದ್ದು…
ನಿಮ್ಮ ಕೊಡುಗೆ ಏನು?
ಸಿದ್ದೇಶಣ್ಣನ ವೈಯಕ್ತಿಕ, ಆರೋಗ್ಯ ವಿಚಾರವಾಗಿ ಮಾತನಾಡುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಚಿಕೆಯಾಗುವುದಿಲ್ಲವೇ. ಇನ್ನು ಮುಂದೆಯೂ ಸಿದ್ದೇಶ್ವರ್ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ. ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಜನರು ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸುತ್ತಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಗೂಂಡಾ ಅಲ್ಲ. ರಾಮಜ್ಯೋತಿ ಯಾತ್ರೆ ಸಂದರ್ಭದಲ್ಲಿ ಕಾಲಿಗೆ ಗುಂಡಿನ ಏಟು
ತಿಂದವರು. ಅವರನ್ನು ಗೂಂಡಾ ಎಂದಿರುವುದು ನಿಮ್ಮ ನಾಲಿಗೆ ಸಂಸ್ಕೃತಿ ತೋರಿಸುತ್ತದೆ. ಸುತ್ತಮುತ್ತಲೇ ಅನೈತಿಕ ದಂಧೆ, ರಾಜಕಾರಣ ಮಾಡುವರು ಇದ್ದಾರೆ. ಸಿದ್ದೇಶ್ವರ್ ಸದಾ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವಂತಹ ಧೀಮಂತ ನಾಯಕ. ಅಂತವಹರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುತ್ತಾರೆ. ಜಿಲ್ಲೆಗೆ ನಿಮ್ಮ ಕೊಡುಗೆ ಏನು?.
ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ
ವಿವೇಚನೆ ಇಲ್ಲದ ಮಾತು…
ಜಿಪಂನ್ನು ಸೂಪರ್‌ಸೀಡ್ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಸೂಪರ್ ಸೀಡ್ ಮಾಡಲಿಕ್ಕೆ ಜಿಲ್ಲಾ ಪಂಚಾಯತಿ ಏನು ಸಹಕಾರ ಸಂಘವೇ. ಅಲ್ಲೇನಾದರೂ ಅವ್ಯವಹಾರ ನಡೆದಿದೆಯೇ. ಜಿಲ್ಲಾ ಪಂಚಾಯತ್
ಚುನಾಯಿತ ಜಿಲ್ಲಾ ಸರ್ಕಾರ. ಅದನ್ನು ಸೂಪರ್ ಸೀಡ್ ಮಾಡುವುದಾಗಿ ಹೇಳಿರುವುದು ವಿವೇಚನೆ ಇಲ್ಲದ ಮಾತು. ವೈಯಕ್ತಿಕ ಟೀಕೆ ಅತ್ಯಂತ ಖಂಡನೀಯ.
ಮಾಡಾಳ್ ವಿರುಪಾಕ್ಷಪ್ಪ, ಮಾಜಿ ಶಾಸಕ
ರಾಜಕೀಯ ನಿವೃತ್ತಿ ಆಗ್ತಿರಾ?
ನನ್ನನ್ನು ಗೂಂಡಾ ಎಂದಿದ್ದಾರೆ. ಏನೆಲ್ಲಾ ಮಾತನಾಡಿದ್ದಾರೆ. ಅದಕ್ಕೆಲ್ಲಾ 2-3 ದಿನಗಳಲ್ಲಿ ಸರಿಯಾಗಿಯೇ ಉತ್ತರ ಕೊಡುತ್ತೇನೆ. 1996ರಲ್ಲಿ ರಾಮಜ್ಯೋತಿ ಗಲಾಟೆ ಕೇಸ್ ಹೊರತುಪಡಿಸಿ ಜಿಲ್ಲೆಯ ಒಂದೇ ಒಂದು ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಒಂದೇ ಒಂದು ಎಫ್‌ಐಆರ್ ಇರುವ ಕಾಪಿ ತೋರಿಸಲಿ. ಅವರ ಸುತ್ತ ಇರುವಂತಹ 90 ಜನರ ವಿರುದ್ಧ ಎಫ್ ಐಆರ್ ಇರುವ ಕಾಪಿ ತಂದು ತೋರಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರೇ ರಾಜಕೀಯ ನಿವೃತ್ತಿ ಆಗೀರಾ?
ಬಿಜೆಪಿ ನಾಯಕರು ಹೇಳಿದ್ದು…
ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾ ಅಧ್ಯಕ್ಷ
ಬಹಿರಂಗ ಚರ್ಚೆಗೆ ಬನ್ನಿ…
ದಾವಣಗೆರೆ ದಕ್ಷಿಣದಲ್ಲಿ 39 ಸ್ಲಂಗಳಿವೆ. 1 ಲಕ್ಷ ಜನರಿಗೆ ಯಾವುದೇ ರೀತಿಯ ಸರಿಯಾದ ಸೌಲಭ್ಯವೇ ಇಲ್ಲ. 20 ವರ್ಷದಿಂದ ಆ ಭಾಗದ ಶಾಸಕರಾಗಿರುವ ಸ್ಲಂಗಳ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ
ಬರಲಿ.
ಜಯಪ್ರಕಾಶ್ ಅಂಬರ್‌ಕರ್, ಬಿಜೆಪಿ ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.