ಹೊಸಕರ: ಗೊಂದಲಕ್ಕಿನ್ನು ಸಿಕ್ಕಿಲ್ಲ ಪರಿಹಾರ!


Team Udayavani, Jul 6, 2017, 11:50 AM IST

DV-6.jpg

ಚಿತ್ರದುರ್ಗ: ಹಲವು ನಿರೀಕ್ಷೆಗಳೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡು ಐದು ದಿನಗಳಾದರೂ ಗೊಂದಲ ಮಾತ್ರ ಇನ್ನೂ ಮುಂದುವರಿದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸದ್ಯ ಹಳೆಯ ದರವೇ ಮುಂದುವರಿದಿದೆ.

ಎಪಿಎಂಸಿ ವರ್ತಕರು, ದಲ್ಲಾಲರು, ಖರೀದಿದಾರರು, ಗ್ರಾಹಕರು, ಔಷಧ ಅಂಗಡಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಜಿಎಸ್‌ಟಿ ವ್ಯಾಪ್ತಿಗೊಳಪಡುವ ಎಲ್ಲರಿಗೂ ಹೊಸ ತೆರಿಗೆ ಪದ್ಧತಿ ಗೊಂದಲಮಯವಾಗಿ ಕಾಡತೊಡಗಿದೆ. ಈ ಬಗ್ಗೆ ಯಾರಲ್ಲೂ ನಿಖರತೆ ಇಲ್ಲ. ಹಾಗಾಗಿ ಜಿಎಸ್‌ಟಿ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು
ಅಧಿಕಾರಿಗಳು ಮಾಡಬೇಕಿತ್ತು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.

ಉತ್ಪಾದನೆ, ಮಾರಾಟ, ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರಮಟ್ಟದಲ್ಲಿ ವಿಧಿಸಿರುವ ಏಕರೂಪ ತೆರಿಗೆ ಇದಾಗಿದೆ. ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು 4 ಹಂತಗಳಲ್ಲಿ ಶೇ.5, 12, 18 ಮತ್ತು 28 ಎಂದು 
ನಿಗದಿಪಡಿಸಲಾಗಿದೆ. ವಿವಿಧ ವಲಯಗಳಿಗೆ ಈ ಶೇಕಡವಾರು ಅನ್ವಯವಾಗಲಿದ್ದು, ಸದ್ಯ ಸಗಟು ವ್ಯಾಪಾರಿಗಳು ಹಳೆಯ ದರದಲ್ಲೇ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾಲ್‌ಗ‌ಳು, ದೊಡ್ಡ ಹೋಟೆಲ್‌ಗ‌ಳೂ ಯಥಾಸ್ಥಿತಿ ಕಾಯ್ದುಕೊಂಡಿವೆ. ಕೇಂದ್ರ ಸರ್ಕಾರ ನಿಗದಿಪಡಿಸುವ ಕೇಂದ್ರೀಯ ತೆರಿಗೆ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ಎಸ್‌ಜಿಎಸ್‌ಟಿ ಬೇರೆ ಬೇರೆಯೋ ಅಥವಾ ಒಂದೇ ಆಗಿರುತ್ತದೆಯೇ ಎನ್ನುವ ಅನುಮಾನ
ವರ್ತಕರನ್ನು ಕಾಡುತ್ತಿದೆ. ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಎಸ್‌ಟಿ) ಜಾರಿಯಿಂದ ಹೊಸ ಆರ್ಥಿಕ ಶಕೆ ಆರಂಭವಾಗಲಿದೆ, ದೇಶದ ಅರ್ಥ ವ್ಯವಸ್ಥೆ ಬದಲಾಗಲಿದೆ, ತೆರಿಗೆ ವಂಚಿಸಿ ಕಾನೂನು ಉಲ್ಲಂಘಿಸುವ ಹಾಗೂ ನಕಲಿ ಕಂಪನಿಗಳ ವಿರುದ್ಧ ಜೈಲುಶಿಕ್ಷೆಯಂತಹ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಜಿಎಸ್‌ಟಿಯನ್ನು
ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಲೆಕ್ಕಪರಿಶೋಧಕ ಸಿ. ಚಂದ್ರಪ್ಪ. ರಾಜ್ಯದ ಜನತೆ ಈಗಾಗಲೇ ವ್ಯಾಟ್‌ಗೆ ಹೊಂದಿಕೊಂಡಿದ್ದರು. ಅಲ್ಲದೆ ಆನ್‌ಲೈನ್‌ನಲ್ಲೂ ಹೆಚ್ಚಿನ ವಹಿವಾಟು ಮಾಡುತ್ತಿದ್ದರು. ಹೀಗಾಗಿ ಜಿಎಸ್‌ಟಿಗೆ ಹೊಂದಿಕೊಳ್ಳುವುದು ಅಷ್ಟೊಂದು ಕಷ್ಟವಾಗದು. ಜಿಎಸ್‌ಟಿ ಜಾರಿಯಿಂದಾಗಿ ಅಬಕಾರಿ ಸುಂಕ, ಮೌಲ್ಯವ ರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮಿ ತೆರಿಗೆ, ಆಕ್ಟಾಯ್‌ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳೂ ರದ್ದಾಗಿವೆ. ಕಚ್ಚಾ ಆಹಾರ ಪದಾರ್ಥ ಸೇರಿದಂತೆ ಕೆಲವು ಅಗತ್ಯ ವಸ್ತುಗಳಿಗೆ ಜಿಎಸ್‌ಟಿಯಿಂದ ಅನುಕೂಲವೇ ಹೆಚ್ಚು ಎಂಬುದು ಅವರ ಅಭಿಪ್ರಾಯ.
ಒಟ್ಟಿನಲ್ಲಿ ಜಿಎಸ್‌ಟಿಗೆ ಜಿಲ್ಲೆಯ ಜನ ಇನ್ನಷ್ಟೇ ಒಗ್ಗಿಕೊಳ್ಳಬೇಕಿದೆ. ಸದ್ಯಕ್ಕಂತೂ ಹಿಂದಿನ ಪದ್ಧತಿಯೇ ಮುಂದುವರಿದಿದ್ದು, ಜಿಎಸ್‌ ಟಿಯಿಂದ ಬೆಲೆ ಹೆಚ್ಚಳ ಅಥವಾ ಕಡಿಮೆಯಾದ ಬಗ್ಗೆ ತಿಳಿದುಬಂದಿಲ್ಲ.

ಪರೋಕ್ಷ, ಪ್ರತ್ಯಕ್ಷ ಇತರೆ ಎಲ್ಲ ತೆರಿಗೆ ಸೇರಿ ಶೇ. 5.50ರಷ್ಟು ತೆರಿಗೆಯನ್ನು ಪಾವತಿ ಮಾಡುತ್ತಿದ್ದೆವು. ಆದರೆ ಜಿಎಸ್‌ಟಿ ಜಾರಿ ನಂತರ ಔಷ ಧಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಲಾಗಿದೆ. ಆದರೆ ತೆರಿಗೆ ಹೆಚ್ಚಿದೆ ಎಂದು ಔಷಧ ದರಗಳನ್ನು ಹೆಚ್ಚಳ ಮಾಡುವಂತಿಲ್ಲ. ಔಷ ಧ ಕಂಪನಿಗಳೇ ದರ ಇಳಿಕೆ ಮಾಡಿವೆ. ಹೀಗಾಗಿ ಗ್ರಾಹಕರಿಗೆ ಹಳೆಯ ದರದಲ್ಲೇ ಔಷ ಧ ನೀಡುತ್ತಿದ್ದೇವೆ. ಜಿಎಸ್‌ಟಿ ಜಾರಿಯಾಗಿದ್ದರಿಂದ ನಮಗೆ ಅದರ ನಿರ್ವಹಣೆ ಮಾಡುವುದು ಹೇಗೆಂದು ಸರಿಯಾಗಿ ಗೊತ್ತಿಲ್ಲ. ಹಾಗಾಗಿ ಲೆಕ್ಕಪತ್ರ ನಿರ್ವಹಣೆಗೆ ಬಿಕಾಂ ಓದಿರುವವರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ.
 ಮಂಜುನಾಥ್‌, ಔಷಧ ವ್ಯಾಪಾರಿ, ಚಿತ್ರದುರ್ಗ.

ಮೌಲ್ಯವರ್ಧಿತ ತೆರಿಗೆ (ವ್ಯಾಟ್‌), ಮನರಂಜನಾ ತೆರಿಗೆ, ಐಷಾರಾಮಿತೆರಿಗೆ ಅಥವಾ ಲಾಟರಿ ತೆರಿಗೆ, ರಾಜ್ಯದಿಂದ ರಾಜ್ಯ ಪ್ರವೇಶ ಸಂದರ್ಭದಲ್ಲಿ ಎಂಟ್ರಿ ತೆರಿಗೆ ಸೇರಿದಂತೆ ಎಲ್ಲ ರೀತಿಯ ತೆರಿಗೆ ಜಿಎಸ್‌ಟಿಯಿಂದ ರದ್ದಾಗಿದೆ. ಜಿಎಸ್‌ಟಿ ಜಾರಿಯಾಗಿದ್ದರಿಂದ ಕೆಲವು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಶೇ. 95ರಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ರಂಗೋಲಿ ಕೆಳಗೆ ತೂರಿ ತೆರಿಗೆ ವಂಚಿಸುವಂತವರಿಗೆ ಜೈಲುಶಿಕ್ಷೆಯಂತಹ ಕಠಿಣ ಶಿಕ್ಷೆ ಆಗುವುದರಿಂದ ತೆರಿಗೆಗಳ್ಳತನ ಅಸಾಧ್ಯ. 
ಸಿ. ಚಂದ್ರಪ್ಪ, ಲೆಕ್ಕ ಪರಿಶೋಧಕರು, ಚಿತ್ರದುರ್ಗ.

ಬರ ಎದುರಾಗಿದ್ದರಿಂದ ಕಳೆದ ಡಿಸೆಂಬರ್‌ನಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆದಿಲ್ಲ. ಹೀಗಾಗಿ ಜಿಎಸ್‌ಟಿ ಪರಿಣಾಮ ಇನ್ನೂ ಗೊತ್ತಾಗುತ್ತಿಲ್ಲ. ಈ ಹಿಂದೆ ಖರೀದಿದಾರರಿಂದ ಶೇ. 4ರಂತೆ ವ್ಯಾಟ್‌ ಸಂಗ್ರಹ ಮಾಡುತ್ತಿದ್ದೆವು. ಈಗ ಜಿಎಸ್‌ಟಿ ಶೇ. 5 ಎಂದು ಹೇಳಲಾಗುತ್ತಿದೆ. ಸುಗ್ಗಿ ಕಾಲ ಬಂದಾಗ ಜಿಎಸ್‌ಟಿಯ ಮರ್ಮ ಏನೆಂಬುದು ಗೊತ್ತಾಗಲಿದೆ.
ಆರ್‌. ನಾಗರಾಜ್‌, ವರ್ತಕ, ಎಪಿಎಂಸಿ ಮಾರುಕಟ್ಟೆ, ಚಿತ್ರದುರ್ಗ.

ಹರಿಯಬ್ಬೆ ಹೆಂಜಾರಪ

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.