ಒಂದು ರೈನ್ ಕೋಟ್ ಕತೆ !
Team Udayavani, Jul 7, 2017, 3:50 AM IST
ಮಳೆಗಾಲ ಬಂದರೆ ಮಾರುಕಟ್ಟೆಯಲ್ಲಿ ಯಾವುದಕೆಲ್ಲ ಬೇಡಿಕೆ ಬಂದುಬಿಡುತ್ತದೆ ಎಂದು ಹೇಳಲು ಆಗುವುದೇ ಇಲ್ಲ. ಊರಿಡೀ ಡಿಸ್ಕೌಂಟ್‌ಗಳ ಸುರಿಮಳೆ, ಅದರದ್ದೇ ಸದ್ದು. ಬಟ್ಟೆ, ಚಪ್ಪಲಿ, ಕೊಡೆ… ಇದೆಲ್ಲಾ ಬದಿಗಿರಲಿ, ಕೊನೆಗೆ ರೈನ್‌ಕೋಟ್‌ಗಳಿಗೂ ಡಿಸ್ಕೌಂಟ್ ಭಾಗ್ಯ. ಅದರ ವ್ಯಾಪಾರ ಮತ್ತು ಅದಕ್ಕೆ ಬೇಡಿಕೆ ಏನೂ ಕಮ್ಮಿ ಇರುವುದಿಲ್ಲ. ಅದೂ ಸತ್ಯ. ಮಳೆಗೆ ರೈನ್‌ಕೋಟ್ ಇದ್ದರೆ ಅದೇನೋ ತೃಪ್ತಿ, ಸಮಾಧಾನ, ಸೇಫ್ ಅನ್ನೋ ಭಾವನೆ.
ನನಗೆ ಚೆನ್ನಾಗಿ ನೆನಪಿದೆ. ನಾನು ಸಣ್ಣವಳಿರುವಾಗ ಹೆಚ್ಚಾಗಿ ಬಳಸಿದ್ದು ರೈನ್ ಕೋಟ್ ಅದು ನನಗೆ ಕೊಟ್ಟಷ್ಟು ಖುಶಿ ಇನ್ಯಾವ ವಸ್ತು ಕೂಡ ಕೊಟ್ಟಿರಲಿಲ್ಲ. ಆ ಕೊಡೆ ಹಿಡಿದುಕೊಂಡು ನೆನೆದುಕೊಂಡು ಹೋಗುವುದ್ದಕ್ಕಿಂತ ರೈನ್‌ಕೋಟ್ ಧರಿಸಿ ಸುತ್ತಾಡುವುದೇ ಉತ್ತಮ ಅಂತ ಅನಿಸುತ್ತೆ. ಶಾಲೆಯಲ್ಲಿ ಎಲ್ಲರೂ ಬಣ್ಣ ಬಣ್ಣದ ಕೊಡೆಯಲ್ಲಿ ಮಿಂಚಿದರೆ ನಾನಂತೂ ಬಣ್ಣ ಬಣ್ಣದ ರೈನ್‌ಕೋಟಲ್ಲಿ ಮಿಂಚುತ್ತಿದ್ದೆ.
ಅಮ್ಮ ಯಾವಾಗಲೂ ನನಗೊಂದು ಸೈಜ್ ದೊಡ್ಡ ರೈನ್ ಕೋಟೇ ತೆಗೆದುಕೊಡುತ್ತಿದ್ದರು. ಏಕೆಂದರೆ ಆ ರೈನ್ ಕೋಟ್ ನನ್ನನ್ನು ಮಾತ್ರವಲ್ಲ, ನನ್ನ ಬ್ಯಾಗನ್ನೂ ಕೂಡ ಮುಚ್ಚಬೇಕಿತ್ತು ಅದಕ್ಕೆ. ಮಳೆ ಎಷ್ಟೇ ಜೋರಾಗಿ ಬರಲಿ ನಾನು ಮಾತ್ರ ಒದ್ದೆಯಾಗುವ ಪ್ರಶ್ನೆಯೇ ಇಲ್ಲ. ಹಾರಿಹೋಗುತ್ತೆ, ಮುರಿದು ಹೋಗುತ್ತೆ ಅನ್ನುವ ಭಯವೂ ಇಲ್ಲದೆ ದಾರಿಯುದ್ದಕ್ಕೂ ರೈನ್‌ಕೋಟ್ ಧರಿಸಿ ದಾರಿಯುದ್ದಕ್ಕೂ ಬೀಗುತ್ತ ಹೋಗುತ್ತಿದ್ದೆ. ಕ್ರಮೇಣ ನನ್ನ ಶಾಲೆಯಲ್ಲಿ ರೈನ್‌ಕೋಟ… ಧಾರಿಗಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ಎಲ್ಲರಿಗೂ ನನಗೆ ಅನಿಸಿದ್ದೇ ಅನಿಸಿತ್ತೋ ಏನೋ. ಮೊದಲೆಲ್ಲ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆ. ಆಗ ಅಷ್ಟೇನೂ ಕಷ್ಟ ಅನಿಸುತ್ತಾ ಇರಲಿಲ್ಲ. ಆದರೆ ಯಾವಾಗ ನಾನು ಬಸ್ಸಲ್ಲಿ ಪ್ರಯಾಣ ಶುರು ಮಾಡಿದೆನೋ ಆಗ ಬಂತು ರೈನ್‌ಕೋಟ್‌ಗೆ ಕಷ್ಟಕಾಲ. ಜೋರಾದ ಮಳೆಗೆ ರೈನ್‌ಕೋಟ್ ಧರಿಸಿ, ಅದರೊಂದಿಗೆ ಬೆನ್ನಿನ ಮೇಲೆ ದೊಡ್ಡ ಮೂಟೆಯಂಥ ಬ್ಯಾಗ್ ಹೊತ್ತು ನಿಂತಾಗ ಆ ರೈನ್‌ಕೋಟ್ ಒದ್ದೆ ಎಲ್ಲರಿಗೂ ಕಿರಿಕಿರಿ ಮಾಡುವುದು ಸಹಜ. ಒಂದು ದಿನ ಎರಡು ದಿನ ಹಾಗಂತ ಎಲ್ಲಾ ಎಷ್ಟು ದಿನಾ ಅಂತ ಸಹಿಸಿಯಾರು. ಕೊನೆಗೊಮ್ಮೆ ಕಂಡಕ್ಟರ್ ಅಣ್ಣ ಬಿಪಿ ರೈಸ್ ಮಾಡಿಕೊಂಡು ಇನ್ನು ಹತ್ತುವಾಗ ರೈನ್‌ಕೋಟ್ ಕಳಚಿಟ್ಟು ಬನ್ನಿ. ನಿಮ್ಮ ಬ್ಯಾಗಿಗೆ, ಟಿಫಿನ್‌ಗೆ, ರೈನ್‌ಕೋಟ್‌ಗೆ ಅರ್ಧ ಬಸ್ಸು ಬೇಕು ಅಂತ ಎಗರಾಡಿ ಬಿಟ್ರಾ ನೋಡಿ ಸೀದಾ ಕೊಡೆಗೆ ಶಿಫr…. ಆದರೂ ರೈನ್ ಕೋಟ್‌ನಲ್ಲಿ ಸಿಗುತ್ತಿದ್ದ ಬೆಚ್ಚಗಿನ ಅನುಭವ ಯಾವತ್ತೂ ಕೊಡೆಯಲ್ಲಿ ಸಿಗುತ್ತಲೇ ಇರಲ್ಲಿಲ್ಲ. ಮಳೆಯಲ್ಲಿ ಎಷ್ಟೇ ನೆನೆದರೂ ಮನೆಗೆ ತಲುಪಿ ರೈನ್‌ಕೋಟ್ ಕಳಚಿದಾಗ ಆಹಾ ಅದೇನೋ ಬೆಚ್ಚಗಿನ ಅನುಭವ. ಬಟ್ಟೆ, ಬ್ಯಾಗೂ ಯಾವುದೂ ಒದ್ದೆಯಾಗಲ್ಲ. ಆದರೆ ಯಾವಾಗ ಕೊಡೆ ಬಳಸಲು ಶುರು ಮಾಡಿದೆನೋ ಅದು ಅದಲು ಬದಲು ಆಗೋಯ್ತು. ಹಾರಿ ಹೋಗುತ್ತಿದ್ದ ಕೊಡೆ (ಕಷ್ಟಪಟ್ಟು ಅದನ್ನು ಉಳಿಸಿಕೊಳ್ಳುತ್ತಿದ್ದೆ), ಮುರಿದು ಹೋದ ಅದರ ಕಡ್ಡಿಗಳು, ಒದ್ದೆಯಾದ ಬಟ್ಟೆ, ಬ್ಯಾಗು, ಬ್ಯಾಗೊಳಗಿನ ಪುಸ್ತಕ, ಪುಸ್ತಕದೊಳಗಿನ ಹಾಳೆ ಎಲ್ಲಾ ಒದ್ದೆ. ಉಫ್… ಸುಸ್ತಾಗಿ ಬಿಡುತ್ತಿತ್ತು. ನನಗೆ ಆಗೆಲ್ಲಾ ರೈನ್‌ಕೋಟ್ ನೆನಪಾಗಿ “ಮಿಸ್ ಯೂ…’ ಅಂತ ಮನದಲ್ಲೇ ಅಳುತ್ತಾ ಇದ್ದೆ.
ಹಾಗಂತ ನಾನು ರೈನ್‌ಕೋಟ್ ಬಳಸುವುದನ್ನು ಪೂರ್ತಿಯಾಗಿ ಬಿಟ್ಟೆ ಎಂದೇನೂ ಇಲ್ಲ. ಆಗ ಅಪ್ಪ ಎಲ್ಲಿ ಹೋಗೋದಾದ್ರು ಬೈಕಲ್ಲಿ ನನ್ನನ್ನೂ ಕೂರಿಸಿಕೊಂಡು ಹೋಗ್ತಾ ಇದ್ದರು. ಆಗ ಮತ್ತೆ ಅದೇ ರೈನ್ ಕೋಟ್ ಅನ್ನು ಧರಿಸಿ ಮಳೆಗಾಲದಲ್ಲಿ ಅಪ್ಪನ ಜೊತೆ ಹೋಗುತ್ತ ಇದ್ದ ನೆನಪು. ಅದೆ ಈಗಲೂ ಮುಂದುವರಿದಿದ್ಯೋ ಏನೊ? ಯಾಕೆಂದರೆ ನನಗೆ ಅಪ್ಪ ಹೊಸ ಸ್ಕೂಟರ್ ತೆಗೆದುಕೊಟ್ಟಾಗ ಎಪ್ರಿಲ್ ಮೇ ತಿಂಗಳು. ಆಗ ಒಂದೆರಡು ತಿಂಗಳು ಆರಾಮವಾಗಿ ಹೋಗುತ್ತ ಇದ್ದೆ. ಮಳೆಗಾಲ ಆರಂಭವಾದಾಗ ನಡೆದುಕೊಂಡು ಹೋಗಲು ಉದಾಸೀನವಾಗಿ ಅಪ್ಪನ ಬಳಿ ಹಠ ಮಾಡಿ ಒಂದು ರೈನ್ ಕೋಟ್ ತರಿಸಿಕೊಂಡೆ. ಈಗ ಮತ್ತದೇ ರೈನ್‌ಕೋಟ್ ಜೊತೆಗೆ ದ್ವಿಚಕ್ರ ಪ್ರಯಾಣ. ನಾನು ಮಾತ್ರವಲ್ಲ ನನ್ನಂತೆ ಎಲ್ಲಾ ದ್ವಿಚಕ್ರ ಪ್ರಯಾಣಿಕರು ಕೂಡ ರೈನ್‌ಕೋಟ್ ಅವಲಂಬಿತರೇ. ಮತ್ತೆ ನಾನು ಬಣ್ಣ ಬಣ್ಣದ ರೈನ್‌ಕೋಟ್‌ನಲ್ಲಿ ಮಿಂಚಲು ಶುರು ಮಾಡಿದೆ. ಈಗ ಮತ್ತದೇ ದಿನಗಳು ನೆನಪಿಗೆ ಬರುತ್ತೆ.
ಈಗಂತೂ ರೈನ್‌ಕೋಟ್‌ನ ಪ್ರಭಾವ ಹೇಗಿದೆ ಎಂದರೆ ನಡೆದುಕೊಂಡು ಹೋಗುವವರೂ ರೈನ್‌ಕೋಟ್‌ನಲ್ಲೆ ಹೋಗುತ್ತಾರೆ. ಅಂದು ಯಾಕೋ ಏನೋ ರಸ್ತೆಕಡೆ ಮುಖ ಮಾಡಿದರೆ ಎಲ್ಲೆಲ್ಲೂ ಬಣ್ಣ ಬಣ್ಣದ ಮನುಷ್ಯರು ನಡೆದುಕೊಂಡು ಹೋಗುತ್ತಿಲ್ಲಾರಲ್ಲ ಎಂದುಕೊಂಡರೆ ಅವರೆಲ್ಲಾ ರೈನ್‌ಕೋಟ್‌ಧಾರಿಗಳಾಗಿದ್ದರು. ಈಗಂತೂ ಕೊಡೆಗಿಂತ ರೈನ್‌ಕೋಟೆ ಬೇಡಿಕೆ ಹೆಚ್ಚಾಗಿರುವುದಂತೂ ಸತ್ಯ. ಹಿಂದೆ ನಮ್ಮ ಅಜ್ಜಂದಿರು ತೋಟದ ಕೆಲಸಕ್ಕೆ ಹೋಗುವಾಗ ಬಾಳೆಎಲೆ, ತೆಂಗಿನ ಓಲೆ ಬಳಸಿ ಕೆಲಸ ಮಾಡುತ್ತಾ ಇದ್ದರಂತೆ. ಅದರ ಮಾರ್ಡನ್ ಅವತಾರವೇ ಈ ರೈನ್‌ಕೋಟ್ ಅಂತ ಅನಿಸಿದ್ದೂ ಇದೆ.
ಅದೇನೆ ಆಗಲಿ ರೈನ್‌ಕೋಟ್‌ನಲ್ಲಿ ಸಿಗುವ ಅನುಭವನೇ ಬೇರೆ. ಅದು ಒಂಥರ ಸೇಫ್ ಅಲ್ವಾ? ಅದರ ಮಹಿಮೆ ಅಪಾರ. ಏನಂತೀರಾ? ನಿಮ್ಮಲ್ಲೂ ಇರಬಹುದಲ್ಲ ಇಂತಹ ರೈನ್‌ಕೋಟ್ ಕಥೆಗಳು. ಸಾಧ್ಯವಾದರೆ ನೆನಪಿಸಿಕೊಳ್ಳಿ.
– ಪಿನಾಕಿನಿ ಪಿ. ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.