ಡಿಯರ್‌ ಫ್ರೆಂಡ್‌


Team Udayavani, Jul 7, 2017, 3:50 AM IST

indbanner.jpg

ಫ್ರೆಂಡ್ಸ್‌ ನಮ್ಮ ಬಾಲ್ಯದ ದಿನಗಳಿಂದ ಹಿಡಿದು ನಮ್ಮ ಜೀವನದ ವಿವಿಧ ಮಗ್ಗಲಲ್ಲಿ ಬಂದು ಹೋಗುವ ಅಮೂಲ್ಯ ರತ್ನಗಳು. ಸ್ನೇಹಿತ ವರ್ಗ ಒಂದು ಇದ್ದರೆ ಎಂಥ ನೋವನ್ನು ಬೇಕಾದರೂ ಹಂಚಿಕೊಳ್ಳಲು ಸಾಧ್ಯ. ಬಾಲ್ಯದ ಮೊದಲ ಮಂಗಾಟ ಶುರುವಾಗುವ ಹಂತ ಅಂಗನವಾಡಿಯಲ್ಲಿ ಸಿಗುವ ಆಕಸ್ಮಿಕ ಗೆಳೆಯನಿಂದ ಹಿಡಿದು, ಹೈಸ್ಕೂಲ್‌-ಕಾಲೇಜು ಹಂತದಲ್ಲಿ ಸಿಗುವ ಕೆಲವೊಂದು ಟೈಮ್‌ಪಾಸ್‌ ಗೆಳೆಯರು ಕೂಡ ಸದಾ ನೆನಪಿನಲ್ಲಿ ಉಳಿಯುತ್ತಾರೆ.

ಬಹುಶಃ ನನ್ನಲ್ಲಿ ಅಂಥ ಆತ್ಮೀಯತೆ ಬೆಳೆದದ್ದು ಹೈಸ್ಕೂಲ್‌ನಲ್ಲಿ ಇರಬೇಕು. ಅಂಗನವಾಡಿಯಿಂದ ಪ್ರೈಮರಿಯವರೆಗೆ ಬರೀ ಯಾವಾಗ ಬೆಲ್‌ ಆಗುತ್ತದೆ ಎನ್ನುವ ಕಡೆಗೆ ಕಿವಿಯನ್ನು ತೆರೆದು ಇಡುತ್ತಿದೆ ವಿನಾ ಪಾಠದ ಕಡೆ ಗಮನ ಹರಿಸಿದ್ದು ಅಪರೂಪ. ಕ್ಲಾಸ್‌ ಅಲ್ಲಿ ಗೂಬೆ ತರ ಕೂತು ಕತ್ತು ಆಡಿಸುತ್ತ ಆಗಾಗ ಮಾತನಾಡುತ್ತಾ ಇದ್ದೆ. ಬರ್ತ್‌ಡೇ ಬಂದಾಗ ಎಲ್ಲರಿಗೂ ಚಾಕ್ಲೇಟ್‌ ಕೊಟ್ಟದ್ದು ಒಂದು ಸ್ಪಷ್ಟ ನೆನಪು. ಅಂತೂ ಏಳನೆಯ ಕ್ಲಾಸ್‌ ದಾಟಿ ಎಂಟನೆಯ ಕ್ಲಾಸಿಗೆ ಬಂದೆ.

ಅದು ಹೈಸ್ಕೂಲ್‌ ಅರಿಯದ ಮುಖಗಳು. ಮೂಡುವ ಹೊಸ ಕನಸು. ಬೆಂಚ್‌ಗಳ ಜೊತೆ ಡೆಸ್ಕ್ಗಳ ಸಮ್ಮಿಲನ. ಎಲ್ಲರೂ ಒಟ್ಟಿಗೆ ಕೂತು ಪಾಠ ಕೇಳುವ ಸಮಯ. ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ದಿನಗಳು ತಿಂಗಳುಗಳಾಗಿ ಉರುಳಿದವು. ನಿಧಾನವಾಗಿ ಹೈಸ್ಕೂಲ್‌ ಲೋಕಕ್ಕೆ ತೆರೆದುಕೊಳ್ಳುತ್ತ ಹೋದಂತೆ, ಮನೋಜ ಎಂಬ ಹುಡುಗನ ಪರಿಚಯ ನನಗಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಆತನನ್ನು ನಮ್ಮ ಕನ್ನಡ ಮೇಷ್ಟ್ರು ಶಾಲೆಗೆ ಸೇರಿಸಿದರು. ಮನೋಜನ ಸ್ನೇಹ ಗಟ್ಟಿಯಾಯಿತು. ಎಲ್ಲಿ ಹೋದರೂ ಆತನ ಜೊತೆಗೆ ಹೋಗುತ್ತ ಇದ್ದೆ. ಓದಿನ ವಿಷಯದಲ್ಲಿ ಮನೋಜ ನನಗೆ ಸಮಾನ ಆಗಿದ್ದ. ಕೊಟ್ಟ ಹೋಮ್‌ವರ್ಕ್‌ ಮಾಡದೇ ಕ್ಲಾಸಿನ ಹೊರಗೆ ಕೂತು ಮಾತನಾಡಿ, ನಾಗರಬೆತ್ತದ ಏಟನ್ನು ಒಟ್ಟಿಗೆ ತಿಂದು ಇನ್ನೊಂದು ದಿನ ಇನ್ನೊಬ್ಬರ ನೋಟ್ಸ್‌ ಕಾಪಿ ಮಾಡಿ ಹೋಮ್‌ವರ್ಕ್‌ ಮಾಡಿ ಟೀಚರ್‌ನಿಂದ ಶಹಭಾಸ್‌ ಗಿರಿಯನ್ನು ಪಡೆದುಕೊಂಡ ಆ ನೆನಪು ಮರೆಮಾಚದೆ ಹಾಗೇ ಉಳಿದಿದೆ.

ಇಡೀ ಶಾಲೆಯಲ್ಲಿ ನಮ್ಮಿಬ್ಬರ ಗೆಳೆತನಕ್ಕೆ ಹೊಗಳಿಕೆಯ ಮಾತುಗಳು ಕೇಳಿ ಬರುತ್ತ ಇತ್ತು. ಕಲಿಕೆಯಲ್ಲಿ ಅಷ್ಟಕ್ಕೇ ಅಷ್ಟೇ ಎನ್ನುವಷ್ಟು ಹಿಂದಕ್ಕೆ ಉಳಿದಿದ್ದೆವು. ಮನೋಜ ಶಾಲೆಗೆ ಬರುವುದು ಕಡಿಮೆಯಾಯಿತು. ಕಾರಣ ಆತ ತನ್ನ ಅಣ್ಣನೊಂದಿಗೆ ಆಗಾಗ ಕೆಲಸಕ್ಕೆ ಹೋಗುತ್ತಿದ್ದ. ಕೃಷಿಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೆ ಅವನ ಕೈಗಳು ಒಗ್ಗಿಕೊಂಡೇ ಬಂದು ಇದ್ದವು. ಇತ್ತ ನಮ್ಮ ಒಂಬತ್ತನೇ ಕ್ಲಾಸಿನ ವಾರ್ಷಿಕ ಫ‌ಲಿತಾಂಶ ಪ್ರಕಟವಾಯಿತು. ನಿರೀಕ್ಷೆಯಂತೆಯೇ ನಾನು ಮತ್ತು ಮನೋಜ ಒಟ್ಟೊಟ್ಟಿಗೆ ಫೇಲ್‌ ಆಗಿದ್ದೀವಿ. ಮನೋಜ ಮಾತ್ರ ಇನ್ನೊಂದು ಸಲ ಶಾಲೆಯ ಕಡೆ ಮುಖ ತೋರಿಸಲೇ ಇಲ್ಲ.

ಅಣ್ಣನ ಜೊತೆಗೆ ಕೆಲಸವನ್ನು ಮಾಡುತ್ತ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ.ಈಗ ಮನೋಜ ನನ್ನಷ್ಟು ಕಲಿಯದೇ ಇದ್ದರೂ ನನ್ನಗಿಂತ ಜಾಸ್ತಿ ಸಂಪಾದಿಸುತ್ತ ಇದ್ದಾನೆ. ರಜೆಯ ಸಮಯದಲ್ಲಿ ಚ‌ಂಡೆ ನುಡಿಸಲು ಹೋಗುವ ಮನೋಜ ಉಳಿದ ಹೊತ್ತಿನಲ್ಲಿ ಮೇಸಿŒ ಕೆಲಸಕ್ಕೆ ಹೋಗುತ್ತ ಇದ್ದಾನೆ. ಅಪರೂಪಕ್ಕೊಮ್ಮೆ ಭೇಟಿಯಾದರೂ ಆತ್ಮೀಯವಾಗಿ ಮಾತನಾಡದೇ ಹೋಗಲ್ಲ !

ಮಿಸ್‌ ಯೂ ಫ್ರೆಂಡ್‌!

– ಸುಹಾನ್‌

ಟಾಪ್ ನ್ಯೂಸ್

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.