ಕೇರಳ-ಕರ್ಕಟ ಮಾಸದ ಸುಖ ಚಿಕಿತ್ಸೆ 


Team Udayavani, Jul 7, 2017, 3:50 AM IST

karkada.jpg

ಆಷಾಢ ಮಾಸ , ಹೆಂಗಳೆಯರೆಲ್ಲ ವರ್ಷವಿಡೀ ಕಾತುರದಿಂದ ಕಾಯುವ ಕಾಲ. ತನ್ನ ಪ್ರಸ್ತುತ ಜೀವನದಲ್ಲಿ ಹೆಗಲೇರಿದ ಜವಾಬ್ದಾರಿಗಳು, ಕೊನೆ ಇರದ ಕೆಲಸಗಳು, ಬೆಂಬಿಡದ ಆತಂಕಕಾರೀ ಚಿಂತೆಗಳೇನೇ ಇದ್ದರೂ, ಎಲ್ಲವನ್ನೂ ಗಂಟು ಕಟ್ಟಿ ಅಟ್ಟಕ್ಕೆಸೆದು, ನಾಲ್ಕು ಬಟ್ಟೆಗಳನ್ನು ಚೀಲಕ್ಕೆ ತುಂಬಿ, ನಿಂತಲ್ಲಿಂದಲೇ ನೆಗೆದು ಹಾರಿ ತವರು ಸೇರುವ ಕಾಲ!
ಹೆತ್ತ ತಾಯಿಯನ್ನು ಕಂಡೊಡನೆ ಪ್ರಯಾಣದ ಆಯಾಸವೆಲ್ಲ ಪರಾರಿ. ಮನಸ್ಸಿನದು ಅಂಬೆ ಕರುವಿನ ಸ್ಥಿತಿ! ಆಕೆಯ ನೇವರಿಕೆಯ ಸ್ಪರ್ಶ, ಆ ಸುಖ… ಸ್ವರ್ಗ. ಒಳಗದುಮಿಟ್ಟ  ದುಗುಡ ದುಮ್ಮಾನಗಳಿಗೆ ಹೊರಗಿಂಡಿಯಾಗುತ್ತಾಳೆ ತಾಯಿ. ಅವಳ ಅಭಯ, ಅನುಭವೀ ಸಲಹೆಗಳು ತುಂಬುತ್ತವೆ ಹೊಸ ಶಕ್ತಿ. ಆಕೆಯ ಅಕ್ಕರೆಯ ಆರೈಕೆಯಲ್ಲಿ ಮುಂದೆ ಕಳೆಯುವ ಒಂದೊಂದು ದಿನವೂ ಚೇತೋಹಾರಿ.

ಇದು ತನುಮನಗಳಿಗೆ ಸಿಗುವ  ಸುಖಚಿಕಿತ್ಸೆಯಲ್ಲದೆ ಮತ್ತೇನು? ಹೌದು. ಮಗಳನ್ನು ತವರಿಗೆ ಆಹ್ವಾನಿಸುವ ಆಷಾಢ (ಆಟಿ, ಕರ್ಕಟ) ದ ಸಂಪ್ರದಾಯದ ಹಿಂದೆ ಒಂದು ಸದುದ್ದೇಶವಿದೆ, ವಿಜ್ಞಾನವಿದೆ ಅನಿಸುತ್ತಿಲ್ಲವೆ?

ಆಯುರ್ವೇದ ವೈದ್ಯಕೀಯ ಪದ್ಧತಿಯ ಅನುಸಾರ, ಆಷಾಢ ಮಾಸವು ಶರೀರದಲ್ಲಿ ನವಚೈತನ್ಯ ತುಂಬುವುದಕ್ಕೆ ಸಕಾಲ. ಈ ಋತುವಿನಲ್ಲಿ ಔಷಧಿಗಳಿಗೆ ಗುಣಾತ್ಮಕವಾಗಿ ಸ್ಪಂದಿಸುವ ಶರೀರದ ಸಹಜ ಗುಣವು ತನ್ನ ಉಚ್ಛಾ†ಯ ಸ್ಥಿತಿಯಲ್ಲಿ ಇರುತ್ತದೆ, ಎನ್ನುತ್ತದೆ ಆಯುರ್ವೇದ. ಆದ್ದರಿಂದಲೆ, ಈ ಕಾಲದಲ್ಲಿ ಶರೀರಕ್ಕೆ ನೀಡುವ ಯಾವುದೇ ಚಿಕಿತ್ಸೆಯು  ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲೇ ಹುಟ್ಟಿಕೊಂಡ ಆಚರಣೆಯೊಂದು ಕೇರಳದಲ್ಲಿ ಇಂದು ಬಹಳ ಜನಪ್ರಿಯವಾಗಿದೆ. ನಮ್ಮ ಕನ್ನಡದ ಆಷಾಢ‌, ತುಳುವಿನ ಆಟಿಯೆ ಕೇರಳಿಗರ ಕರ್ಕಟ ಮಾಸ. ಇದು ಅವರ ಪಂಚಾಂಗದ ಕೊನೆಯ ಮಾಸವಾಗಿದ್ದು, ಶರೀರದ ನಂಜುಕಾರಕ ಕಲ್ಮಶವನ್ನು ಹೊರದೂಡಿ, ನವಚೈತನ್ಯ ತುಂಬುವ ಪಂಚಕರ್ಮ ಚಿಕಿತ್ಸೆಯ ಪರ್ವ ಕಾಲವೆಂದೆ ಖ್ಯಾತಿ ಪಡೆದಿದೆ. ಕೇರಳದ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಮನೆ ಮನೆಗಳಲ್ಲೂ ಇದನ್ನು ವಿಭಿನ್ನ ವ್ಯಾಪ್ತಿ/ ಮಿತಿಗಳಲ್ಲಿ ಆಚರಿಸುತ್ತಾರೆ.

ತ್ರಿದೋಷ ಶಮನಕ್ಕೆ ಚಿಕಿತ್ಸೆ
ಪಂಚಭೂತಗಳಿಂದ ಸೃಷ್ಟಿಯಾದ ಮಾನವ ಶರೀರವು ವಾತ, ಪಿತ್ತ, ಕಫ‌ಗಳೆಂಬ ತ್ರಿದೋಷಗಳಿಂದ ಕೂಡಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಶರೀರ ಗುಣಧರ್ಮವೂ ಭಿನ್ನವಾಗಿರುವಂತೆ, ತ್ರಿದೋಷಗಳ ಮಟ್ಟವೂ ಭಿನ್ನವಾಗಿರುತ್ತದೆ. ಬೇಸಿಗೆಯ ಕಾಲದಲ್ಲಿ ಶರೀರದಲ್ಲಿ ಸಂಗ್ರಹವಾಗುವ ಈ ತ್ರಿದೋಷಗಳು, ಮಳೆಗಾಲದಲ್ಲಿ ಎಗ್ಗಿಲ್ಲದೆ ವೃದ್ಧಿಸುತ್ತದೆ. ಈ ಪರಿಣಾಮವಾಗಿ ಶರೀರದಲ್ಲಿ ಅನೇಕ ರೀತಿಯ ಭಾದೆಗಳು ಕಂಡುಬರುತ್ತವೆ. ಇಂತಹ ದೋಷಗಳನ್ನು ಆಯುರ್ವೇದದ ಶೋಧನ, ರಸಾಯನ, ಪಂಚಕರ್ಮ ಮುಂತಾದ ವಿವಿಧ ಚಿಕಿತ್ಸಾ ಕ್ರಮಗಳಿಂದ ನಿವಾರಿಸಬಹುದಾಗಿದೆ. ಕೇರಳದ ಕರ್ಕಟ ಮಾಸ ಆಚರಣೆಯ ಮೂಲ ಉದ್ದೇಶವೂ ಅದೇ .

ಕೇರಳ ಸ್ಪೆಶಲ್‌
ಜುಲೈ ತಿಂಗಳ ಮಧ್ಯದಿಂದ ಆಗಸ್ಟ್‌ ತಿಂಗಳ ಮಧ್ಯಭಾಗದವರೆಗೆ ಕರ್ಕಟ ಮಾಸ ಎನಿಸುತ್ತದೆ. (ಈ ವರ್ಷ ಜುಲೈ 17 ರಿಂದ ಆಗಸ್ಟ್‌ 17) ಇದು ಮಳೆ ಅತ್ಯಂತ ಗಾಢವಾಗಿರುವ ಕಾಲ. 

ಆಯುರ್ವೇದ ಪದ್ಧತಿಯು ಚಿಕಿತ್ಸೆಯ ಜತೆಗೆ ಪಥ್ಯಕ್ಕೂ ಪ್ರಾಮುಖ್ಯ ನೀಡುತ್ತದೆ. ಕರ್ಕಟ ಮಾಸವೆಂದರೆ ಜಡಿಮಳೆಯ ಕಾಲವಾದ್ದರಿಂದ ನಾವು ಸೇವಿಸಿದ ಆಹಾರವು ಜೀರ್ಣವಾಗದೆ ಹೊಟ್ಟೆಯಲ್ಲೆ ಉಳಿದು ಹುಳಿಯುವ ಸಾಧ್ಯತೆ ಹೆಚ್ಚು. ಈ ಸ್ಥಿತಿ ಕ್ರಮೇಣ ಅಸಿಡಿಟಿ ತೊಂದರೆ ತರುವುದು. ಹೀಗಾಗಿ ಆಯುರ್ವೇದವು ಈ ಋತುವಿನಲ್ಲಿ ಹುಳಿ ಪದಾರ್ಥಗಳ ಸೇವನೆಯನ್ನು ಕಡಿತಗೊಳಿಸುವಂತೆ ಸೂಚಿಸುತ್ತದೆ. ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಅಪೇಕ್ಷಣೀಯ. ಪ್ರತಿವ್ಯಕ್ತಿಯ ತ್ರಿದೋಷ ಮಟ್ಟ ಭಿನ್ನವಾಗಿರುವುದರಿಂದ ಪಥ್ಯದಲ್ಲೂ ವ್ಯತಾಸವಿರುವುದು. ವ್ಯಕ್ತಿಯ ತ್ರಿದೋಷ ಮಟ್ಟವನ್ನು ಆಯುರ್ವೇದ ತಜ್ಞ ವೈದ್ಯರಷ್ಟೇ ಗುರುತಿಸಬಲ್ಲರು.

ಕೇರಳದ ಜನ ಕರ್ಕಟ ಮಾಸದಲ್ಲಿ ಔಷಧೀಯ ಗಂಜಿಯನ್ನು ಸೇವಿಸುವುದರ ಉದ್ದೇಶವೂ ತ್ರಿದೋಷಗಳ ನಿಗ್ರಹ ಮತ್ತು ಆರೋಗ್ಯ ವರ್ಧನೆಯೇ ಆಗಿದೆ. ನವರಕ್ಕಿಳಿ ಎಂಬ ಒಂದು ವಿಶಿಷ್ಟ ಅಕ್ಕಿಯನ್ನು ಕೇರಳಿಗರು ಇದಕ್ಕಾಗಿಯೇ ಬೆಳೆಯುತ್ತಾರೆ. ಪೌಷ್ಠಿಕಾಂಶಗಳಿಂದ ಶ್ರೀಮಂತವಾಗಿರುವ ಈ ತಳಿಯು ಅಕ್ಕಿಗಳ ರಾಜ ಎನಿಸಿದೆ. ಈ ಅಕ್ಕಿಯನ್ನು ಬೇಯಿಸಿ, ಕೆಲವು ಗಿಡಮೂಲಿಕೆಗಳ ಪುಡಿಯನ್ನು ಬೆರೆಸಿ ತಯಾರಿಸುವ ಗಂಜಿ (ಕಂಜಿ) ಯನ್ನು ಸೇವಿಸುವುದು ಕರ್ಕಟ ಮಾಸ ಆಚರಣೆಯ ಒಂದು ಮುಖ್ಯ ಭಾಗ ಎನಿಸಿದೆ. ಇದನ್ನು ಸೇವಿಸುವುದರಿಂದ ಬಲವರ್ಧನೆ, ಒತ್ತಡ ನಿವಾರಣೆ, ಶರೀರದ ತೂಕದ ನಿರ್ವಹಣೆ,  ತ್ವಚೆಗೆ ಕಾಂತಿ, ಜೀರ್ಣಕ್ರಿಯೆ,  ರೋಗನಿರೋಧಶಕ್ತಿ ಹೆಚ್ಚುವುದು. ಶರೀರವನ್ನು ಪುನಶ್ಚೇತನಗೊಳಿಸುವುದು. 

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ತಯಾರಿಸುವ ವಿವಿಧ ಪುಡಿಗಳು ಮಾರಾಟಕ್ಕೆ ದೊರೆಯುವಂತೆ, ಮೈಸೂರು ಬೆಂಗಳೂರುಗಳಲ್ಲಿ ಸಂಕ್ರಾಂತಿಗೆ ಬೀರುವ  ಎಳ್ಳು ಸಾಮಗ್ರಿಗಳು ದೊರೆಯುವಂತೆ, ಕೇರಳದಲ್ಲಿ ಕರ್ಕಟ  ನವರಕ್ಕಿ ಕಂಜಿ ಮಿಕ… ದೊರೆಯುತ್ತದೆ ! 

ಶರೀರ ಶುದ್ಧಿ , ಅಭ್ಯಂಗ, ನವರಕ್ಕಿಳಿ, ಪಿಳಿಚ್ಚಿಲ…, ತಲಂ (ತಲೆಗೆ ಹಾಕುವ ವಿವಿಧ ಲೇಪಗಳು) ಮುಂತಾದವು ಕರ್ಕಟ ಚಿಕಿತ್ಸೆಯ ವೈಶಿಷ್ಟ್ಯ. ಇದನ್ನು ಸುಖಚಿಕಿತ್ಸೆ  ಎಂತಲೂ ಕರೆಯುತ್ತಾರೆ.

ಕೇರಳಿಗರ ಈ ವಾರ್ಷಿಕ ಚಿಕಿತ್ಸೆಯು ಈಗ ಆ ರಾಜ್ಯದ ಪರಿಧಿಯನ್ನು ಮೀರಿ, ಬೆಂಗಳೂರನ್ನೂ ಸೇರಿದಂತೆ, ದೇಶದ ಪ್ರಮುಖನಗರಗಳ ಆಸ್ಪತ್ರೆಗಳನ್ನು ಆವರಿಸಿಕೊಂಡು, ಇದೀಗ ವಿದೇಶಗಳಲ್ಲಿರುವ ಆಯುರ್ವೇದ ಆಸ್ಪತ್ರೆಗಳಿಗೂ ಲಗ್ಗೆ ಇಟ್ಟಿದೆ!

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುವ ಭರವಸೆ ಇಲ್ಲ. ಏಕೆಂದರೆ ವಿಷಪೂರಿತ ಸಿಂಪಡಣೆಯನ್ನೆ ಹೀರಿ ಬೆಳೆದ ಸೇಬು ಅದು! ಆದರೆ, ವರ್ಷಕ್ಕೊಮ್ಮೆ ಪಡೆಯಬಹುದಾದ ಇಂಥ ಸುಖ ಚಿಕಿತ್ಸೆಯಿಂದ ನಿಮ್ಮ ಆರೋಗ್ಯ ವೃದ್ಧಿಸುವುದಂತೂ ದಿಟ!

ಆಷಾಢ‌ ಮಾಸ ಬಂದಿತವ್ವ… ಆರೋಗ್ಯದ ಖಾಸಾ ಖಯಾಲಿ ಇರಲವ್ವ !

– ಮನೋರಮಾ ಹೆಜಮಾಡಿ

ಟಾಪ್ ನ್ಯೂಸ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.