ಮುಜುಂಗಾವು ವಿದ್ಯಾಪೀಠದಲ್ಲಿ ಸ್ವಾಸ್ತ್ಯ ಮಂಗಲ
Team Udayavani, Jul 7, 2017, 3:45 AM IST
ಕುಂಬಳೆ: ಶ್ರೀ ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇ
ಶಾನುಸಾರ ಕುಂಬಳೆ ವಲಯ ಮಾತೃ ವಿಭಾಗ ವಲಯದವರಿಗಾಗಿ ಆಯೋಜಿಸಿದ ಸ್ವಾಸ್ತ್ಯ ಮಂಗಲ ಕಾರ್ಯಕ್ರಮವು ಮುಜುಂಗಾವು ವಿದ್ಯಾಪೀಠದಲ್ಲಿ ನೆರವೇರಿತು.
ಶಂಖನಾದದೊಂದಿಗೆ ಪ್ರಾರಂಭವಾಗಿ ವಲಯದ ಉಪಾಧ್ಯಕ್ಷೆ ಪದ್ಮಾವತಿ ಡಿ.ಪಿ.ಭಟ್ ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಯುರ್ವೇದ ತಜ್ಞೆ, ಡಾ|ಶೋಭಾಕೃಷ್ಣ ರಾಜ ಕಾಟಿಪ್ಪಳ್ಳ ಆಹ್ವಾನಿತರಾಗಿ ಆಗಮಿಸಿದ್ದರು.
ಆಹಾರದಲ್ಲಿ ಮುಖ್ಯ ಪಾತ್ರವಹಿಸುವ ಅಡುಗೆ ತಯಾರಿ, ಅದಕ್ಕೆ ಬಳಸುವ ಪಾತ್ರೆಗಳ ಗಮನ, ಸಾವಯವ ತರಕಾರಿಗಳ ಬಗ್ಗೆ, ಅಡುಗೆ ಮನೆ, ಆಹಾರ ಸೇವಿಸುವ ಕ್ರಮ, ಇವುಗಳನ್ನೆಲ್ಲ ವಿವರವಾಗಿ ತಿಳಿಸುವುದರೊಂದಿಗೆ ಶ್ರೋತೃಗಳ ಸಂಶಯ, ಸಂದೇಹಗಳಿಗೂ ಉತ್ತರಿಸಿದರು.
ಶಿಕ್ಷಣ ತಜ್ಞರೂ ಪ್ರಖ್ಯಾತ ಸಾಹಿತಿಗಳೂ ಆದ ವಿ.ಬಿ.ಕುಳಮರ್ವ ಅವರು ತಮ್ಮ ಉತ್ತಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಲಯ ಮಾತೃ ಪ್ರಧಾನೆ ಶಿವಕುಮಾರಿ ಕುಂಚಿನಡ್ಕ, ವಲಯದ ಕಾರ್ಯದರ್ಶಿಗಳಾದ ಸೇಡಿ ಗುಮ್ಮೆ ಗೋಪಾಲಕೃಷ್ಣ ಭಟ್, ವಿದ್ಯಾಪೀಠದ ಆಡಳಿತಾ ಧಿಕಾರಿ ಶ್ಯಾಂಭಟ್ ದಭೆìಮಾರ್ಗ ಉಪಸ್ಥಿತರಿದ್ದರು.
ಡಾ| ಶೋಭಾ ಕಾಟಿಪ್ಪಳ್ಳ ಅವರಿಗೆ ಸಾವಿತ್ರಿ ದೊಡ್ಡ ಮಾಣಿ ಹಾಗೂ ವಿಜಯಾ ಸುಬ್ರಹ್ಮಣ್ಯ ಸ್ಮರಣಿಕೆಯಿತ್ತು ಗೌರವಿಸಿದರು. ಪಾರ್ವತಿ ಪೆರಡಾನ ಸ್ವಾಗತಿಸಿದರು. ದೀಪಾ ದೊಡ್ಡಮಾಣಿ ಕಾರ್ಯಕ್ರಮ ನಿರೂಪಿಸಿದರು. ರೂಪಶ್ರೀ ಕೋಡಿಮೂಲೆ ವಂದಿಸಿದರು. ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.