ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಸಾಕಷ್ಟು ನರ್ಸ್‌ಗಳಿಲ್ಲ
Team Udayavani, Jul 7, 2017, 3:45 AM IST
ಕಾಸರಗೋಡು: ಮಳೆಗಾಲದಲ್ಲಿ ಸಾಮಾನ್ಯವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗ ಕಾಸರಗೋಡು ಜಿಲ್ಲೆಯಾದ್ಯಂತ ಕಾಣಿಸಿಕೊಂಡಿದ್ದು, ದಿನಾ ಸಾವಿರಾರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ಜನರಲ್ ಆಸ್ಪತ್ರೆ ಸಹಿತ ಹಲವಾರು ಸರಕಾರಿ ಆಸ್ಪತ್ರೆಗಳಿದ್ದರೂ ಸಾಕಷ್ಟು ವೈದ್ಯರು, ದಾದಿಯರು ಮೊದಲಾದ ಹುದ್ದೆಗಳು ಖಾಲಿ ಬಿದ್ದಿರುವುದರಿಂದ ರೋಗಿಗಳ ತಪಾಸಣೆಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ಬದಿಯಡ್ಕದಲ್ಲೂ ಇದೆ.
ಗ್ರಾಮೀಣ ಪ್ರದೇಶದ ರೋಗಿಗಳಿಗೆ ಆಶ್ರಯ ತಾಣವಾಗಿರುವ ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಸಾಕಷ್ಟು ದಾದಿಯರಿಲ್ಲದಿರುವುದರಿಂದ ಹಲವು ಸಮಸ್ಯೆಗಳು ಎದುರಾಗಿವೆೆ. ಬದಿಯಡ್ಕ ಪ್ರದೇಶದಲ್ಲೂ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದೆ. ರೋಗಿಗಳನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲು ಇಲ್ಲಿ ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ರೋಗಿಗಳು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುತ್ತಿದ್ದರೂ ಎಲ್ಲ ವ್ಯವಸ್ಥೆ ಹೊಂದಿರುವ ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ಲಭಿಸದಿರುವುದರಿಂದಾಗಿ ರೋಗಿಗಳಿಗೆ ಹಾಗು ಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ.
ಈ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಆಧುನಿಕ ಚಿಕಿತ್ಸೆ, ತಪಾಸಣೆಗೆ ಅಗತ್ಯದ ಉಪಕರಣಗಳಿವೆ. ಆದರೆ ದಾದಿಯರ ಕೊರತೆಯಿಂದಾಗಿ ದಾಖಲಾತಿ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರೋಗಿಗಳು ಇತರ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ತೊಂದರೆಗೆ ಸಿಲುಕಿದ್ದಾರೆ.
ಕೇವಲ ನಾಲ್ವರು ನರ್ಸ್‌ಗಳು
ಬದಿಯಡ್ಕ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಸಹಿತ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಹೆಚ್ಚಿನ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು, ಕ್ಲಿನಿಕ್‌ಗಳನ್ನು ಅವಲಂಬಿಸಿದ್ದಾರೆ. ಬದಿಯಡ್ಕದಲ್ಲಿ ಡೆಂಗ್ಯೂ ಜ್ವರವೂ ಕಾಣಿಸಿಕೊಂಡಿದೆ. ಪ್ರತೀ ದಿನ 100 ರಿಂದ 150 ರಷ್ಟು ರೋಗಿಗಳು ಕಮ್ಯೂನಿಟಿ ಹೆಲ್ತ್ ಸೆಂಟರ್‌ಗೆ ಆಗಮಿಸುತ್ತಿದ್ದು, ಇವರಲ್ಲಿ ಬಹುತೇಕ ಮಂದಿ ಜ್ವರ ಪೀಡಿತರು. ಜ್ವರ ತೀವ್ರತೆ ಹೆಚ್ಚಿದ್ದರೆ ಇಂತಹ ರೋಗಿಗಳನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ. ಇಲ್ಲಿ ಪ್ರಸ್ತುತ ಒಬ್ಬರು ಹೆಡ್ ನರ್ಸ್ ಸಹಿತ ನಾಲ್ವರು ನರ್ಸ್‌ಗಳಿದ್ದಾರೆ.
ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಆಪರೇಶನ್ ಥಿಯೇಟರ್, 30 ಹಾಸಿಗೆಗಳು ಇರುವ ಎಲ್ಲಾ ವಿಧದ ಸೌಕರ್ಯಗಳಿವೆ. ಒಂದು ವಾರದ ಹಿಂದೆ ಇಲ್ಲಿಗೆ ವೈದ್ಯರ ನೇಮಕಾತಿಯೂ ನಡೆದಿದೆ. ಆದರೆ ಅದೇ ಸಂದರ್ಭದಲ್ಲಿ ದಾದಿಯರ ಕೊರತೆ ಕಂಡು ಬಂದಿದೆ. ಕಾಸರಗೋಡು ಬ್ಲಾಕ್ ಪಂಚಾಯತ್‌ನ ಅಧೀನದಲ್ಲಿ ಈ ಕಮ್ಯೂನಿಟಿ ಹೆಲ್ತ್ ಸೆಂಟರ್ ಕಾರ್ಯಾಚರಿಸುತ್ತಿದ್ದು, ಬ್ಲಾಕ್ ಪಂಚಾಯತ್ ಅಧ್ಯಕ್ಷರು ಜೆಯರ್‌ವೆುàನ್ ಆಗಿರುವ ಕಮ್ಯೂನಿಟಿ ಹೆಲ್ತ್ ಸೆಂಟರ್ ಅಭಿವೃದ್ಧಿ ಸಮಿತಿಯಿದ್ದರೂ ಕಳೆದ ಮೂರು ತಿಂಗಳಿಂದ ಈ ಸಮಿತಿ ಸಭೆ ಸೇರಿಲ್ಲ ಎಂಬುದಾಗಿ ವ್ಯಾಪಕ ಆರೋಪ ಕೇಳಿ ಬರುತ್ತಿದೆ.
ಒಳರೋಗಿ ಚಿಕಿತ್ಸಾ ಸೌಕರ್ಯಕ್ಕೆ ಆಗ್ರಹ
ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಒಳರೋಗಿ ಚಿಕಿತ್ಸಾ ಸೌಕರ್ಯ ಒದಗಿಸಬೇಕೆಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಆಪರೇಶನ್ ಥಿಯೇಟರ್, 30 ಹಾಸಿಗೆಗಳು ಸಹಿತ ಎಲ್ಲ ಸೌಕರ್ಯಗಳೂ ಬದಿಯಡ್ಕ ಸಿಎಚ್‌ಸಿಯಲ್ಲಿವೆ.
ಅತ್ಯಾಧುನಿಕ ರೀತಿಯ ಪರಿಶೋಧನಾ ಸಲಕರಣೆಗಳೂ ಇಲ್ಲಿವೆ. ಆದರೆ ವೈದ್ಯರುಗಳ ಕೊರತೆ, ದಾದಿಯರ ಕೊರತೆ ಹಾಗೂ ಸಿಬಂದಿ ಗಳಿಲ್ಲದಿರುವುದು ಊಟಕ್ಕಿಲ್ಲದ ಉಪ್ಪಿನ ಕಾಯಿ ಯಂತಾಗಿದೆ. ಈ ಬಗ್ಗೆ ಅಧಿಕೃತರು ಮೌನ ವಹಿಸಿದರೆ ಬಿಜೆಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.