ಮೂಲ್ಕಿ ಸುಂದರರಾಮ್ ಶೆಟ್ಟಿ ನಾಮಕರಣ: ಮೇಯರ್ಗೆ ಮನವಿ
Team Udayavani, Jul 7, 2017, 3:45 AM IST
ಲಾಲ್ಬಾಗ್ : ಮಂಗಳೂರಿನ ಕೆಥೋಲಿಕ್ ಕ್ಲಬ್ನಿಂದ ಲೈಟ್ಹೌಸ್ ಹಿಲ್ ಆಗಿ ಅಂಬೇಡ್ಕರ್ ವೃತ್ತಕ್ಕೆ ಬರುವ ರಸ್ತೆಗೆ ದಿ| ಮೂಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರನ್ನಿಡು ವ ಮೂಲಕ ಎಲ್ಲ ಗೊಂದಲಗಳನ್ನು ನಿವಾರಿಸಬೇಕು ಹಾಗೂ ಸುಂದರರಾಮ್ ಶೆಟ್ಟಿ ಅವರಿಗೆ ಅಗೌರವವಾಗದಂತೆ ನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಸರಕಾರ ನಡೆದುಕೊಳ್ಳಬೇಕು ಎಂದು ಆಗ್ರಹಿಸಿ ಮೇಯರ್ ಕವಿತಾ ಸನಿಲ್ ಅವರಿಗೆ ಮೂಲ್ಕಿ ನಾಗರಿಕರು ಮನವಿ ಸಲ್ಲಿಸಿದರು.
ಸುಂದರರಾಮ್ ಶೆಟ್ಟಿ ಅವರು ದೇಶ ಕಂಡ ಅತ್ಯಂತ ಅಪರೂಪದ ಶ್ರೇಷ್ಠ ಸಾಧಕ. ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಧೀಮಂತ ನಾಯಕ. ಜಾತಿ, ಮತ, ಧರ್ಮ, ವರ್ಗ, ಪಂಗಡದ ವ್ಯತ್ಯಾಸ ಮಾಡದೆ ಸಮಾಜ ಸೇವೆ ಮಾಡಿ ದಿವಂಗತರಾಗಿರುವ ಮೂಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರಿಗೆ ಅಗೌರವ ತೋರುವ, ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುವ ಘಟನಾವಳಿಗಳನ್ನು ಅವರ ತವರೂರಿನ ಜನತೆ ಸಹಿಸುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖೀಸಲಾಗಿದೆ.
ನಿಯೋಗದಲ್ಲಿ ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ, ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಸಂದೇಶ್ ಶೆಟ್ಟಿ, ಮುಖಂಡರಾದ ಮುರಳೀಧರ ಭಂಡಾರಿ, ಎನ್.ಎಸ್.ಸುಕುಮಾರ್ ಶೆಟ್ಟಿ, ಬಿ.ಪ್ರಭಾಕರ ಶೆಟ್ಟಿ, ನಾಗೇಶ್ ಎ. ಬಪ್ಪನಾಡು, ಎಂ.ಅಬ್ದುಲ್ ರಜಾಕ್, ಉದಯ ಶೆಟ್ಟಿ, ಎಚ್.ಮನ್ಸೂರ್ ಮೂಲ್ಕಿ, ಕೊಳ್ನಾಡ್ ಗುತ್ತು ರಾಮಚಂದ್ರ, ದೇವಪ್ರಸಾದ್ ಪುನರೂರು, ಸತೀಶ್ ಅಂಚನ್ ಮೂಲ್ಕಿ ಮುಂತಾದವರು ಉಪಸ್ಥಿತರಿದ್ದರು.
ಮನವಿಯನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವರಿಗೂ ನೀಡಲಾಗುವುದು ಎಂದು ನಿಯೋಗ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.