ಬಂಗಾಲ ವಿರುದ್ಧ ದಾವೆಗೆ ಚಿಂತನೆ
Team Udayavani, Jul 7, 2017, 3:45 AM IST
ಗ್ಯಾಂಗ್ಟಕ್/ಕೋಲ್ಕತಾ: ಪಶ್ಚಿಮ ಬಂಗಾಲ 62 ಸಾವಿರ ಕೋಟಿ ರೂ. ಪರಿಹಾರ ನೀಡಬೇಕು. ಹೀಗೆಂದು ಕೋರಿ ಸಿಕ್ಕಿಂ ಸುಪ್ರೀಕೋರ್ಟ್‌ಗೆ ದಾವೆ ಹೂಡುವ ಸಾಧ್ಯತೆ ಇದೆ. 32 ವರ್ಷಗಳಿಂದ ಪ್ರತ್ಯೇಕ ಗೂರ್ಖಾ ಲ್ಯಾಂಡ್‌ಗಾಗಿ ನಡೆಯುತ್ತಿರುವ ಪ್ರತಿಭಟನೆಗಳಿಂದ ತನಗೆ ನಷ್ಟವಾಗಿದೆ ಎನ್ನುವುದು ಈಶಾನ್ಯದ ಸಣ್ಣ ರಾಜ್ಯದ ಅಳಲು. ಸಿಕ್ಕಿಂ ವ್ಯಾಪ್ತಿಯಲ್ಲಿ ಚೀನ ಜತೆಗೆ ಇರುವ ಗಡಿ ತಂಟೆಯ ನಡುವೆಯೇ ಈ ಬೆಳವಣಿಗೆ ನಡೆದರೆ ಕೇಂದ್ರ ಸರಕಾರಕ್ಕೆ ಮತ್ತೂಂದು ಕಗ್ಗಂಟಾಗಿ ಪರಿಣಮಿಸಲಿದೆ.
“ಚೀನ ಮತ್ತು ಪಶ್ಚಿಮ ಬಂಗಾಲದ ನಡುವೆ ಸ್ಯಾಂಡ್‌ವಿಚ್ ಆಗಲು ಸಿಕ್ಕಿಂನ ಜನರು ಭಾರತದ ಒಕ್ಕೂಟದ ಜತೆ ವಿಲೀನಗೊಳ್ಳಲು ಒಪ್ಪಲಿಲ್ಲ’ ಎಂದು ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಹೇಳಿದ್ದಾರೆ. ಗೂರ್ಖಾಲ್ಯಾಂಡ್ ವ್ಯಾಪ್ತಿಯಲ್ಲಿ 2 ದಿನಗಳಿಂದ ನಡೆಯುತ್ತಿರುವ ವಾಹನಗಳ ಮೇಲಿನ ದಾಳಿ ಖಂಡಿಸಿದ್ದಾರೆ. ದಶಕಗಳಿಂದ ನಡೆಯುತ್ತಿರುವ ಹೋರಾಟ ಸಂಘರ್ಷಗಳಿಂದ ಕಂಗೆಟ್ಟಿರುವ ಸಿಕ್ಕಿಂ ಸರಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮತ್ತೆ ಗಲಭೆ: ಇದೇ ವೇಳೆ ಈಗಾಗಲೇ ಕೋಮುಗಲಭೆಯಿಂದ ತತ್ತರಿಸಿರುವ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ಪ್ರಕಟವಾಗಿವೆ ಎಂದು ಆರೋಪಿಸಿ ಹೊಸದಾಗಿ ಗಲಭೆ, ಹಿಂಸಾಚಾರಗಳು ಸಂಭವಿಸಿವೆ. ಗಲಭೆ ಪೀಡಿತ ಪ್ರದೇಶದ ಭೇಟಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಓಂ ಮಾಥುರ್ ನೇತೃತ್ವದಲ್ಲಿ ನಿಯೋಗ ರಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.