ಜಾತಿ ರಾಜಕಾರಣ ಸಲ್ಲದು: ಡಾ| ಸಂತೋಷ್ ಗುರೂಜಿ
Team Udayavani, Jul 7, 2017, 3:25 AM IST
ಬ್ರಹ್ಮಾವರ: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ರಸ್ತೆಗೆ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರನ್ನು ಇಡುವ ವಿಚಾರವಾಗಿ ಜನ ನಾಯಕರು ಜಾತಿ ರಾಜಕಾರಣ ಮಾಡಬಾರದು. ಇದು ಅವರಿಗೆ ಶೋಭೆ ತರುವುದಿಲ್ಲ. ಸೇವೆಯನ್ನು ಪರಿಗಣಿಸಿ ರಸ್ತೆಗೆ ಮುಲ್ಕಿ ಅವರ ಹೆಸರನ್ನು ಇಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಶ್ರೀ ಬಾರ್ಕೂರು ಮಹಾ ಸಂಸ್ಥಾನ ಡಾ| ವಿಶ್ವಸಂತೋಷ ಭಾರತೀ ಶ್ರೀಗಳು ಹೇಳಿದರು.
ಅವರು ಬಾರ್ಕೂರು ಸಂಸ್ಥಾನದಲ್ಲಿ ಮಾತನಾಡಿ ಸೇವೆ, ವ್ಯಕ್ತಿತ್ವವನ್ನು ಗಮನಿಸಬೇಕೇ ಹೊರತು ಜಾತಿಯನ್ನು ಅಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಲ್ಕಿ ಸುಂದರರಾಮ್ ಶೆಟ್ಟಿಯವರ ಸೇವೆ ಅಪಾರವಾದುದು. ಅವರ ಹೆಸರನ್ನು ರಸ್ತೆಗಿಡುವುದು ಸೂಕ್ತವಾದ ಆಯ್ಕೆಯಾಗಿದೆ. ಅವರು ಕರಾವಳಿಗೆ ಜಾತಿ ಧರ್ಮವನ್ನು ಮೀರಿ ಸೇವೆ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಜಾತಿ ರಾಜಕಾರಣ ಮಾಡುವುದಕ್ಕೆ ಶ್ರೀ ಸಂಸ್ಥಾನ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ಮತಾಂತರ: ಖಂಡನೆ
ಕಾಪುವಿನಲ್ಲಿ ಬಂಟ ಕುಟುಂಬವೊಂದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿರುವುದನ್ನು ಬಾರ್ಕೂರು ಶ್ರೀ ಸಂಸ್ಥಾನವು ಖಂಡಿಸುತ್ತದೆ. ಆ ಕುಟುಂಬವನ್ನು ಮತ್ತೆ ಬಂಟ ಸಮುದಾಯಕ್ಕೆ ಕರೆತರುವಲ್ಲಿ ಸಂಸ್ಥಾನವು ಪ್ರಯತ್ನ ಮಾಡಲಿದೆ ಎಂದು ಡಾ| ವಿಶ್ವಸಂತೋಷ ಭಾರತೀ ಶ್ರೀಗಳು ಹೇಳಿದರು.
ಹಿಂದೂ ಸಮುದಾಯದವರ ಬಡತನದಂತಹ ಕೆಲವು ನ್ಯೂನತೆಗಳನ್ನು ಅಸ್ತ್ರವನ್ನಾಗಿಸಿಕೊಂಡು ಮತಾಂತರ ಮಾಡುವ ಜಾಲವಿದ್ದು ಇದರ ವಿರುದ್ಧ ಸಂಸ್ಥಾನವು ಧ್ವನಿ ಎತ್ತಲಿದೆ. ಕಾಪುವಿನ ಕುಟುಂಬ ಹಿಂದೂ ಸಮುದಾಯಕ್ಕೆ ಮರಳುವಲ್ಲಿ ಖುದ್ದು ಗಮನಹರಿಸುತ್ತೇನೆ. ಕೇವಲ ಬಂಟ ಸಮುದಾಯದವರಲ್ಲದೆ ಯಾವುದೇ ಹಿಂದೂ ಸಮುದಾಯದವರು ಮತಾಂತರಗೊಂಡಾಗ ಅವರನ್ನು ಮರಳಿ ಹಿಂದು ಧರ್ಮಕ್ಕೆ ಕರೆತರುವಲ್ಲಿ ಸಂಸ್ಥಾನವು ಕ್ರಮ ಕೈಗೊಳ್ಳಲಿದ್ದು, ಸಮಸ್ತ ಹಿಂದೂ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.