ಸ್ಕಿಲ್‌ಗೇಮ್ ಸೆಂಟರ್‌ಗೆ ಮೇಯರ್ ಸಿನಿಮೀಯ ದಾಳಿ
Team Udayavani, Jul 7, 2017, 3:30 AM IST
ಮಂಗಳೂರು: ನಗರದ ಜ್ಯೋತಿ ಅಂಬೇಡ್ಕರ್ ಸರ್ಕಲ್ ಸಮೀಪದಲ್ಲಿ, ಮಂಗಳೂರು ಮಹಾನಗರ ಪಾಲಿಕೆಯ ಅನುಮತಿ ಇಲ್ಲದೆ ಕಾರ್ಯಾಚರಿಸುತ್ತಿದ್ದ ಸ್ಕಿಲ್‌ಗೇಮ್ ಸೆಂಟರ್‌ಗೆ ಮಂಗಳೂರು ಮೇಯರ್ ಕವಿತಾ ಸನಿಲ್ ಅವರು ಗುರುವಾರ ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿದರು. ಮೇಯರ್ ಹಠಾತ್ ದಾಳಿಗೆ ಬೆದರಿ ಸ್ಕಿಲ್ ಗೇಮ್ ಒಳಗಿದ್ದ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 100ಕ್ಕೂ ಅಧಿಕ ಮಂದಿ ಕಾಲ್ಕಿತ್ತರು. ಬಳಿಕ ಮನಪಾ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ ಸೇರಿದಂತೆ ಮಂಗಳೂರು ಪಾಲಿಕೆ ಅಧಿಕಾರಿಗಳು ಸ್ಕಿಲ್ ಗೇಮ್ ಸೆಂಟರ್‌ಗೆ ಬೀಗ ಜಡಿದಿದ್ದಾರೆ.
ಕಟ್ಟಡವೊಂದರ ಪಾರ್ಕಿಂಗ್ ಜಾಗಕ್ಕೆ ಮೀಸಲಿಟ್ಟ ನೆಲಮಹಡಿಯಲ್ಲಿ ಸ್ಕಿಲ್‌ಗೇಮ್ ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರೊಬ್ಬರ ದೂರಿನ ಮೇರೆಗೆ ಮಧ್ಯಾಹ್ನ 4.30ರ ವೇಳೆಗೆ ಮೇಯರ್ ದಾಳಿ ನಡೆಸಿದರು. ದಾಳಿ ಮಾಡುತ್ತಿದ್ದಂತೆ ಸೆಂಟರ್‌ನ ಎರಡೂ ಭಾಗದಲ್ಲಿರುವ 6 ಬಾಗಿಲುಗಳ ಮೂಲಕ ಸ್ಕಿಲ್‌ಗೇಮ್‌ನಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳೂ ಸೇರಿದಂತೆ ಒಳಗಿದ್ದವರು ಎದ್ದು ಬಿದ್ದು ಓಡತೊಡಗಿದರು. ಸೆಂಟರ್ ಒಳಗೆ ಸುಮಾರು 10ಕ್ಕೂ ಅಧಿಕ ಬಗೆಯ ಜೂಜು ಆಟಗಳಿಗೆ ಬಳಸುವ ನಾನಾ ಉಪಕರಣಗಳಿದ್ದವು. ಏರೋ ಗೇಮ್ಸ್, ಲೂಡ, ಗುಡುಗುಡು, 5ಕ್ಕೂ ಅಧಿಕ ವೀಡಿಯೋ ಗೇಮ್, ತ್ರಿ ಕಾರ್ಡ್‌ಗೇಮ್ಸ್ ಸೇರಿದಂತೆ ಹಲವು ಬಗೆಯ ಗೇಮ್ಸ್‌ಗಳಿದ್ದವು. ಸೆಂಟರ್‌ನ ಒಳಗೆ, ಹೊರಗೆ, ರಸ್ತೆಗೆ ಸುಮಾರು 10ರಷ್ಟು ಸಿಸಿ ಕೆಮರಾ ಅಳವಡಿಸಲಾಗಿತ್ತು.
ಮೇಯರ್ ಸ್ಕಿಲ್ ಗೇಮ್ ಸೆಂಟರ್ ಒಳ ಪ್ರವೇಶಿಸಿ, ಪಾಲಿಕೆ ಅನುಮತಿ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಂಗಡಿಗೆ ಬೀಗ ಹಾಕುವಂತೆ ಅಧಿಕಾರಿಗಳಲ್ಲಿ ಸೂಚಿಸಿದರು. ಇದರಂತೆ ಅಂಗಡಿಯ ಎಲ್ಲ ಬಾಗಿಲುಗಳನ್ನು ಬಂದ್ ಮಾಡಿ, ಬೀಗ ಜಡಿಯಲಾಯಿತು.
ಪೊಲೀಸರ ನಿರ್ಲಕ್ಷ್ಯ; ಆಕ್ರೋಶ
ಮೇಯರ್ ದಾಳಿ ಮಾಡಿದ ಬಳಿಕ ಪೊಲೀಸ್ ಕಮಿಷನರ್ ಅವರಿಗೆ ಮೇಯರ್ ಕರೆ ಮಾಡಿ ತತ್‌ಕ್ಷಣ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿಕೊಡುವಂತೆ ಹೇಳಿದರೂ ಅರ್ಧ ತಾಸು ತನಕ ಪೊಲೀಸರು ಇಲ್ಲಿಗೆ ಬರಲೇ ಇಲ್ಲ. ಆ ಬಳಿಕ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಮಾತ್ರ ಬಂದರು. ಇದರಿಂದ ಕೋಪಗೊಂಡ ಮೇಯರ್ ಅವರು, ‘ಪೊಲೀಸ್ ಹಿರಿಯ ಅಧಿಕಾರಿಗಳು ಅವರೇ ಇಲ್ಲಿಗೆ ಬರಲಿ. ಇಲ್ಲದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ’ ಎಂದರು. ಬಳಿಕ ಇನ್‌ಸ್ಪೆಕ್ಟರ್ ಮಾರುತಿ ನಾಯ್ಕ ಸ್ಥಳಕ್ಕೆ ಬಂದರು.
‘ನಗರದ ಮಧ್ಯಭಾಗದಲ್ಲೇ ಈ ರೀತಿ ಸ್ಕಿಲ್ ಗೇಮ್‌ಗಳು ನಡೆಯುತ್ತಿರುವಾಗ ನಿಮಗ್ಯಾಕೆ ಗೊತ್ತಾಗುತ್ತಿಲ್ಲ? ಪಾಲಿಕೆ ಅನುಮತಿ ಇಲ್ಲದಿರುವಾಗಲೂ ನೀವು ಯಾಕೆ ಕ್ರಮ ಕೈಗೊಂಡಿಲ್ಲ?’ ಎಂದು ಪ್ರಶ್ನಿಸಿದರು. ಮಾರುತಿ ನಾಯ್ಕ ಉತ್ತರಿಸಿ, ‘ಸ್ಕಿಲ್ ಗೇಂನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ಹಿಂದೆ 5 ಬಾರಿ ದಾಳಿ ನಡೆಸಲಾಗಿದ್ದು, 5 ಪ್ರಕರಣ ದಾಖಲಿಸಲಾಗಿದೆ’ ಎಂದರು. ಮೇಯರ್ ಮಾತನಾಡಿ, ‘ಇಷ್ಟಿದ್ದರೂ ಮತ್ತೆ ಈ ಸೆಂಟರ್ ಕಾರ್ಯಾಚರಣೆ ನಡೆಸುವುದು ಹೇಗೆ’ ಎಂದು ಮೇಯರ್ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಅವರು ತಿಳಿಸಿದರು.
ಈ ಮಧ್ಯೆ ಸ್ಕಿಲ್ ಗೇಮ್‌ನ ಸಿಬಂದಿಯೊಬ್ಬರು ಮಾತನಾಡಿ, ‘ಹಲವು ಸಮಯದಿಂದ ಸ್ಕಿಲ್‌ಗೇಮ್ ಸಂಪೂರ್ಣ ಬಂದ್ ಆಗಿತ್ತು. ಆದರೆ ಹಿಂದಿನ ಪೊಲೀಸ್ ಕಮಿಷನರ್ ಚಂದ್ರಶೇಖರ್ ವರ್ಗವಾದ ಮೇಲೆ ಮತ್ತೆ ಆರಂಭಿಸಿದ್ದೇವೆ. ರೀ ಓಪನ್ ಮಾಡಿ ಕೆಲವೇ ಸಮಯ ಆದದ್ದಷ್ಟೆ’ ಎಂದು ಹೇಳಿದರು.
ತಾಯಿಯೊಬ್ಬರ ಕಣ್ಣೀರು ಸಹಿಸಲಾಗದೆ ದಾಳಿ
ದಾಳಿ ಬಗ್ಗೆ ಸುದ್ದಿಗಾರರ ಜತೆಗೆ ಮಾತನಾಡಿದ ಮೇಯರ್ ಕವಿತಾ ಸನಿಲ್ ಅವರು, ‘ಮಧ್ಯಾಹ್ನ ತಾಯಿಯೊಬ್ಬರು ನನಗೆ ಕರೆ ಮಾಡಿ, ನನ್ನ ಮಗ ಪ್ರತೀ ದಿನ ಹಣ ದುಂದುವೆಚ್ಚ ಮಾಡುತ್ತಿದ್ದಾನೆ. ಮನೆಯವರ ಯಾರ ಮಾತಿಗೂ ಕೇಳುತ್ತಿಲ್ಲ. ಪ್ರತೀ ದಿನ ಹಣ ತೆಗೆದುಕೊಂಡು ಹೋಗುತ್ತಿದ್ದ. ಈ ಬಗ್ಗೆ ನಾವು ಆತನನ್ನು ಪರಿಶೀಲಿಸಿದಾಗ ಸ್ಕಿಲ್ ಗೇಮ್‌ನಲ್ಲಿ ಹಣ ತೊಡಗಿಸುವ ಬಗ್ಗೆ ತಿಳಿದು ಬಂತು. ನನ್ನ ಮಗನ ಭವಿಷ್ಯವೇ ಹೋಯಿತು. ಆತ ನಮ್ಮನ್ನೆಲ್ಲ ತಿರಸ್ಕರಿಸುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು. ಈ ಮಾತು ಕೇಳಿ ನನಗೆ ತುಂಬಾ ನೋವಾಗಿತ್ತು. ಜತೆಗೆ ಮಂಗಳೂರು ವ್ಯಾಪ್ತಿಯಲ್ಲಿ ಸ್ಕಿಲ್ ಗೇಮ್, ಗ್ಯಾಂಬ್ಲಿಂಗ್, ಮಸಾಜ್ ಸೆಂಟರ್‌ಗೆ ಅವಕಾಶವೇ ಇಲ್ಲ. ಪೊಲೀಸರಲ್ಲಿ ಇಂತಹುದನ್ನು ತೆರವು ಮಾಡುವಂತೆ ಸೂಚನೆ ಕೂಡ ನೀಡಲಾಗಿತ್ತು. ಹೀಗಿರುವಾಗ ಅಧಿಕಾರಿಗಳ ಜತೆಗೆ ನಾನೇ ಖುದ್ದಾಗಿ ದಾಳಿ ಮಾಡಿದಾಗ, ಸೆಂಟರ್‌ನ ಒಳಗೆ ವಿದ್ಯಾರ್ಥಿಗಳು, ಹಿರಿಯರು ಇರುವುದು ಗೊತ್ತಾಗಿದೆ. ನಿಜಕ್ಕೂ ಯುವ ಸಮಾಜವನ್ನು ಈ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಹೀಗಾಗಿ ಪಾಲಿಕೆ ವತಿಯಿಂದ ಬೀಗ ಜಡಿಯಲಾಗಿದೆ. ಮಂಗಳೂರು ವ್ಯಾಪ್ತಿಯಲ್ಲಿರುವ ಉಳಿದ ಇಂತಹ ಸೆಂಟರ್‌ಗೂ ದಾಳಿ ನಡೆಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.