ಖಾಸ್ಗತ ಶ್ರೀಗಳ ಮೆರವಣಿಗೆ ಭಾವೈಕ್ಯಕ್ಕೆ ಸಾಕ್ಷಿ
Team Udayavani, Jul 7, 2017, 10:17 AM IST
ತಾಳಿಕೋಟೆ: ಶ್ರೀ ಖಾಸ್ಗತ ಮಹಾಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಗುರುವಾರ ಶ್ರೀ ಖಾಸ್ಗತ ಮಹಾಶಿವಯೋಗಿಗಳ ಗಂಗಾಸ್ಥಳ ಹಾಗೂ ಶ್ರೀಗಳ ಭವ್ಯ ಮೆರವಣಿಗೆ ಮಹಾ ಕಾರ್ಯಕ್ರಮ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ದಲಿಂಗದೇವರ
ಅಧ್ಯಕ್ಷತೆಯಲ್ಲಿ ಭಕ್ತಿಭಾವದಿಂದ ಜರುಗಿ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಬೆಳಗ್ಗೆ 8ಗಂಟೆಗೆ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಖಾಸ್ಗತರ ಬೆಳ್ಳಿಯ ಮಹಾಮೂರ್ತಿಯ ಮಹಾ ಮೆರವಣಿಗೆ,
ವಿರಕ್ತಮಹಾಸ್ವಾಮಿಗಳ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಿತು. ಅಲ್ಲದೇ ಅಶ್ವಮೇಧ ಬೆಳ್ಳಿಯ ರಥದಲ್ಲಿ ಕುಳಿತ ಶ್ರೀ ಮಠದ ನೂತನ ಪೀಠಾಧಿಪತಿ ಸಿದ್ದಲಿಂಗದೇವರು ಅಲ್ಲದೇ ಪಲ್ಲಕ್ಕಿ ಹಾಗೂ ರಥದ ಕಳಸದ ಮಹಾಮೆರವಣಿಗೆ ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಸಂಚರಿಸಿ ಪುರಾತನ ಭೀಮನಭಾವಿಯಲ್ಲಿ ಗಂಗಾಸ್ಥಳ ಮಹಾಕಾರ್ಯಕ್ರಮ ಮುಗಿಸಿಕೊಂಡು ಮಠ ತಲುಪಿತು.
ಗಂಗಾಸ್ಥಳ ಉತ್ಸವ ನಿಮಿತ್ತ ಸುಮಂಗಲಿಯರು ತಮ್ಮ ಮನೆಯ ಅಂಗಳದಲ್ಲಿ ರಂಗೋಲಿ ವಿವಿಧ ನಮೂನೆಯ ಚಿತ್ರ ಬಿಡಿಸಿದರು. ಮನೆ ಮನೆಗೆ ತಳಿರು ತೋರಣ ಕಟ್ಟಿ ಮಹಾತ್ಮರ ಭವ್ಯ ಮರವಣಿಗೆ ಸ್ವಾಗತಿಸಿದರು. ಅಂಭಾರಿಯ ಮೆರಣಿಗೆಯುದ್ದಕ್ಕೂ ವಿವಿಧ
ವಾಧ್ಯ ವೈಭವಗಳು ಅಲ್ಲದೇ ಗೊಂಬೆ ಕುಣಿತ, ಕರಡಿ ಮಜಲು, ಸನಾದಿಯ ನಾದ, ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಸ್ಥಳೀಯ ಯುವಕರ ಲೇಜಿಮ್ ಕುಣಿತ ತಾಳಿಕೋಟೆ ಪಟ್ಟಣದ ರಾಜವೈಭವ ಮರುಕಳಿಸುವಂತ್ತಿತ್ತು. ಮಹಾವೈಭವದ ಗಂಗಾಸ್ಥಳ ಕಾರ್ಯಕ್ರಮದಲ್ಲಿ ನಡೆದ ಓಂ ನಮಃ ಶಿವಾಯ ಶಿವಭಜನೆ ರಾಜವೈಭವದ ಮೆರಗು ನೀಡಿತು. ಮೆರವಣಿಗೆಯಲ್ಲಿ ರಾಜವಾಡೆ ಕಿಂಗ್ಸ್ ಗೆಳೆಯರ ಬಳಗ, ನಮ್ಮ ಗೆಳೆಯರ ಬಳಗ, ಮತ್ತು ರಾಮಸಿಂಗ್ ಗೆಳೆಯರ ಬಳಗ, ಪ್ರಶಾಂತ ಹಾವರಗಿ ಅಭಿಮಾನಿ ಬಳಗ
ಒಳಗೊಂಡು ಅನೇಕ ಯುವಕ ಸಂಘದವರು ದಾರಿಯುದ್ದಕ್ಕೂ ಪ್ರಸಾದದ ಸೇವೆ ನಡೆಸಿದರು. ಕೆಲವರು ತಂಪು ಪಾನಿಯ, ಕುಡಿಯುವ ನೀರಿನ ವ್ಯವಸ್ಥೆ ಏರ್ಪಡಿಸಿದ್ದರು.
ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮೆರವಣಿಗೆ ವಿವಿಧ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಖಾಸ್ಗತೇಶ್ವರ ಮಠಕ್ಕೆ ಮಧ್ಯಾಹ್ನ 2:30ಕ್ಕೆ ತಲುಪಿತು. ಮಹಾ ಕಾರ್ಯಕ್ರಮದಲ್ಲಿ ಮುಂಬೈ, ಪುಣೆ, ಹೈದ್ರಾಬಾದ, ಹುಬ್ಬಳ್ಳಿ, ಧಾರವಾಡ, ಬೆಂಗಳೂರ, ಕಲಬುರಗಿ ಮಹಾನಗರಗಳಿಂದಲೂ ಸಾವಿರಾರೂ ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಂಡು ಭಕ್ತಿಭಾವ ಮೆರೆದರು.
ಮೆರವಣಿಗೆಯಲ್ಲಿ ಖಾಸ್ಗತೇಶ್ವರ ಮಠದ ಉಸ್ತುವಾರಿ ಶ್ರೀ ಮುರುಘೇಶ ವಿರಕ್ತಮಠ, ಸಂಗಯ್ಯ ವಿರಕ್ತಮಠ, ವಿಶ್ವನಾಥ ವಿರಕ್ತಮಠ,
ಶರಭಯ್ಯ ಪುರಾಣಿಕಮಠ, ಹಿರೂರದ ವಿಜಯಕುಮಾರ ಹಿರೇಮಠ, ಮುರಗನವರ ಶಿರೂರ, ಶ್ರೀಧರ ಕಾಗನೂರಮಠ ಭಾಗವಹಿಸಿದ್ದರು.
ಸಂಭ್ರಮದ ಶ್ರೀ ಖಾಸ್ಗತೇಶ್ವರ ರಥೋತ್ಸವ ಸಂಭ್ರಮದ ಶ್ರೀ ಖಾಸ್ಗತೇಶ್ವರ ರಥೋತ್ಸವ
ತಾಳಿಕೋಟೆ: ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಹಾಮಠದ ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರೋತ್ಸವ ಪ್ರಯುಕ್ತ
ಗುರುವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೋತ್ಸವ ಅಂಗವಾಗಿ ದಿನನಿತ್ಯ ಖಾಸ್ಗತೇಶ್ವರ ಗದ್ದುಗೆಗೆ ಮಹಾಭಿಷೇಕ,
ಬಿಲ್ವಾರ್ಚನೆ, ಪುಷ್ಪಾರ್ಚನೆ, ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ಜರುಗಿತು. ಖಾಸ್ಗತೇಶ್ವರ ರಥೋತ್ಸವವು ಮಠದಿಂದ
ಆರಂಭಗೊಂಡು ಬಸವೇಶ್ವರ ದೇವಸ್ಥಾನದವರೆಗೆ ಜರುಗಿ ಮರಳಿ ಶ್ರೀಮಠಕ್ಕೆ ತಲುಪಿತು. ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರ
ಅಧ್ಯಕ್ಷತೆಯಲ್ಲಿ ಜರುಗಿದ ಜಾತ್ರಾ ಉತ್ಸವದಲ್ಲಿ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ, ಸಂಗಯ್ಯ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ಶರಬಯ್ಯ ಪುರಾಣಿಕಮಠ ನೇತೃತ್ವ ವಹಿಸಿದ್ದರು. ವಿಶ್ವನಾಥ ವಿರಕ್ತಮಠ ಕಾರ್ಯಕ್ರಮ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.