ನಾಟಿ ಪದ್ಧತಿ ತಂತ್ರಜ್ಞಾನದಿಂದ ತೊಗರಿ ಅಧಿಕ ಇಳುವರಿ
Team Udayavani, Jul 7, 2017, 10:26 AM IST
ವಿಜಯಪುರ: ಸಾಂಪ್ರದಾಯಿಕ ತೊಗರಿ ಬೆಳೆ ಪದ್ಧತಿಗೆ ಬದಲಾಗಿ ಇದೀಗ ತೊಗರಿ ನಾಟಿ ಪದ್ಧತಿ ಆಧರಿಸಿ ಕೃಷಿ ಇಲಾಖೆ ವಿನೂತನ
ವಿಧಾನ ಪರಿಚಯಿಸುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಗುರುವಾರ ಟಥರ್ಗಾ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿಯಲ್ಲಿ ನಾಟಿ ಪದ್ಧತಿ ಆಧರಿಸಿ ತೊಗರಿ ಬೆಳೆದ ಬೆಳೆಯುವ ವಿನೂತನ ಪ್ರಯೋಗ ಕೈ ಯಂತ್ರದಿಂದ ಅಥರ್ಗಾದ ಪೀರಪ್ಪ ಗುಳಗಿ ಅವರ ಜಮೀನಿನಲ್ಲಿ ತೊಗರಿ ನಾಟಿ ಪದ್ಧತಿಯ ವೀಕ್ಷಿಸಿ, ಸುಲಭ ನಾಟಿ ಯಂತ್ರದ ಮೂಲಕ ತೊಗರಿ ಸಸಿ ನಾಟಿ ಮಾತನಾಡಿದ ಅವರು, ನೂತನ ರೈತರ ಪಾಲಿಗೆ ವರದಾನವಾಗಿದೆ ಎಂದರು.
ಈ ತಂತ್ರಜ್ಞಾನ ಅಳವಡಿಸಿಕೊಂಡ ರೈತ ಪೀರಪ್ಪ ಗುಳಗಿ ರೈತ 5 ಎಕರೆ ಜಮೀನನಲ್ಲಿ ಟಿಎಸ್-3 ತಳಿಯ 6-3 ಅಡಿ ಅಂತರದಲ್ಲಿ
ನಾಟಿ ಮಾಡಿ ಅಧಿ ಕ ಇಳುವರಿ ಪಡೆದಿರುವುದು ಕಣ್ಣಮುಂದಿನ ಜೀವಂತ ಸಾಕ್ಷಿ. ಸದರಿ ಸುಲಭ ನಾಟಿ ಯಂತ್ರದಿಂದ ನಾಟಿ ಮಾಡುವ ಜೊತೆಗೆ ಕಡಿಮೆ ಗುಣಮಟ್ಟದ ಬೀಜಗಳಿಂದಾಗಿ ಬೆಳೆ ಅಪಾರ ಪ್ರಮಾಣ ಬೀಜಗಳೂ ನಾಶವಾಗುವುದನ್ನು ತಡೆಯಲು ನೆರವಾಗಲಿದೆ ಎಂದರು. ನಾಟಿ ಪದ್ಧತಿಯಲ್ಲಿ ನಾಟಿಕೆ ಮುನ್ನವೇ ವಿಶೇಷ ಟ್ರೇಗಳಲ್ಲಿ ಸಸಿಗಳನ್ನು ಬೆಳೆಸುವ ಕಾರಣ ಗುಣಮಟ್ಟದ ಸಸಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಕೃಷಿಯಲ್ಲಿ ಹನಿ ನೀರಾವರಿ ಮಾಡಿಕೊಂಡು ಕಡಿಮೆ ನೀರಿದ್ದರೂ ಮಿತವಾದ ನೀರಿನ ಬಳಕೆ ಮಾಡಿಕೊಂಡು ಮಾದರಿ ಕೆಲಸ ಮಾಡಿರುವುದು ರೈತರಿಗೆ ವರದಾನವಾಗಿದೆ. ಹೀಗಾಗಿ ರೈತರು ತೊಂದರೆ
ಎದುರಿಸುವ ಪ್ರಶ್ನೆಯೇ ಇಲ್ಲ ಎಂದು ವಿನೂತನ ಪದ್ಧತಿ ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಿ ಎಂದರು.
ಸಾಂಪ್ರದಾಯಿಕ ವಿಧಾನದಲ್ಲಿ ಪ್ರತಿ ಎಕರೆಗೆ 5-10 ಸಾವಿರ ಕ್ವಿಂಟಾಲ್ ಇಳುವರಿ ಬರಲಿದ್ದು, ಆಧುನಿಕ ನಾಟಿ ಪದ್ಧತಿಯಿಂದ 20-25
ಸಾವಿರ ಕ್ವಿಂಟಲ್ ಇಳುವರಿ ಬರಲಿದೆ. ಅಲ್ಲದೇ ಕಡಿಮೆ ಸಮಯ, ಸರಳ ವಿಧಾನ, ಕಡಿಮೆ ಮಾನವ ಸಂಪನ್ಮೂಲ ಬಳಕೆಯಾಗಿ ಅ ಕ
ವೆಚ್ಚಕ್ಕೂ ಕಡಿವಾಣ ಬೀಳಲಿದೆ ಎಂದು ವಿವರಿಸಿದರು.
ತೊಗರಿ ಬೆಳೆ ನಾಟಿಯ ನೂತನ ತಂತ್ರಜ್ಞಾನ ಪ್ರೋತ್ಸಾಹಿಸಲು ಸರ್ಕಾರ ಪ್ರತಿ ಹೆಕ್ಟೇರ್ 2500 ರೂ. ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ನಾಟಿಗೆ ಅಗತ್ಯವಾದ ಯಂತ್ರಗಳ ಖರೀದಿಗೂ ರಿಯಾಯ್ತಿ ನೀಡಲಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಉಪ ನಿರ್ದೇಶಕ ವಿಲಿಯಂ ರಾಜಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.