ಇನ್ನೂ ನಡುಕ ಹುಟ್ಟಿಸುತ್ತಿದೆ ದಂಡುಪಾಳ್ಯ ಗ್ಯಾಂಗ್ ಕ್ರೌರ್ಯ
Team Udayavani, Jul 7, 2017, 12:22 PM IST
ಹುಬ್ಬಳ್ಳಿ: ಹದಿನಾರು ವರ್ಷಗಳ ಹಿಂದೆ ನಗರದಲ್ಲಿ ಹಣಕ್ಕಾಗಿ ನಡೆದಿದ್ದ ವೃದ್ಧರೊಬ್ಬರ ಹತ್ಯೆ ಬೆನ್ನಲ್ಲೇ ಮೂರು – ನಾಲ್ಕು ತಿಂಗಳ ಅವಧಿಯಲ್ಲಿ ಮತ್ತೆ ಮೂರು ವೃದ್ಧರ ಹತ್ಯೆ – ದರೋಡೆ ಪ್ರಕರಣಗಳೂ ವರದಿಯಾಗಿ ಹುಬ್ಬಳ್ಳಿಯ ಜನರನ್ನು ನಡುಗಿಸಿದ್ದವು.
ಮಲ್ಲಿಕಾರ್ಜುನ ಡೇಕಣಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ದಂಡುಪಾಳ್ಯ ಗ್ಯಾಂಗಿನ ಮೂವರು ಸದಸ್ಯರು ಇದೀಗ ಹೈಕೋರ್ಟ್‌ನಿಂದ ಖುಲಾಸೆಯಾಗಿದ್ದಾರೆ. ಆದರೆ, ಆ ಅವಧಿಯಲ್ಲಿ ದಂಡುಪಾಳ್ಯ ಗ್ಯಾಂಗ್ ಹುಬ್ಬಳ್ಳಿಯಲ್ಲಿ ಸಕ್ರಿಯವಾಗಿತ್ತು.
ಅಂಗಡಿ ಹಾಗೂ ಮನೆಗಳಲ್ಲಿ ಒಬ್ಬಂಟಿಯಾಗಿ ವಾಸಿಸುವ ಶ್ರೀಮಂತ ವೃದ್ಧರನ್ನೇ ಗುರಿಯಾಗಿಸಿಕೊಂಡು ಗ್ಯಾಂಗ್ ದಾಳಿ ಮಾಡುತ್ತಿತ್ತಲ್ಲದೆ, ವೃದ್ಧರನ್ನು ಹತ್ಯೆಗೈದು ಹಣ-ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿತ್ತು. ಡೇಕಣಿ ಹತ್ಯೆ ಬಳಿಕವೂ ಹುಬ್ಬಳ್ಳಿಯಲ್ಲಿ ಇದೇ ಮಾದರಿಯ ಮೂರು ಕೊಲೆ- ದರೋಡೆಗಳು ನಡೆದಿದ್ದು, ಇವು ದಂಡುಪಾಳ್ಯ ಗ್ಯಾಂಗ್‌ನ ಕೃತ್ಯಗಳೇ ಆಗಿರಬೇಕು ಎಂಬುದು ಪೊಲೀಸ್ ಮೂಲಗಳ ಅಭಿಪ್ರಾಯ.
ಹತ್ಯೆಗಳ ಸರಣಿ: ಫೆಬ್ರವರಿ 19, 2000ರಂದು ರಾತ್ರಿ ಮಹಿಳೆಯೂ ಇದ್ದ ದಂಡು ಪಾಳ್ಯ ಗ್ಯಾಂಗ್‌ನ ನಾಲ್ವರ ತಂಡ ಕೊಯಿನ್ ರಸ್ತೆಯ ಅಂಗಡಿಯಲ್ಲಿ ಮಲಗಿದ್ದ ಮಲ್ಲಿಕಾರ್ಜುನ ಎಸ್. ಡೇಕಣಿ (75) ಅವರ ಮುಖಕ್ಕೆ ಆಯುಧದಿಂದ ಬಲವಾಗಿ ಹೊಡೆದು ಗಾಯಗೊಳಿಸಿತ್ತು. ಕಿಸೆಯಲ್ಲಿದ್ದ 400 ರೂ. ನಗದು ದೋಚಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಡೇಕಣಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪಡೆದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು ದಂಡು ಪಾಳ್ಯ ಗ್ಯಾಂಗ್‌ನ ನಾಲ್ವರ ವಿರುದ್ಧ ನಗರದ ನ್ಯಾಯಾಲಯದಲ್ಲಿ 2001ರ ಜುಲೈನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಘಟನೆ ನಡೆದ 2-3 ತಿಂಗಳ ಅವಧಿಯಲ್ಲಿ ದಂಡುಪಾಳ್ಯ ಗ್ಯಾಂಗ್‌ನ ತಂಡ ನಗರದ ದುರ್ಗದ ಬಯಲು ನಿವಾಸಿ ಡಾ| ಜೋಶಿ ಅವರ ಮನೆಗೆ ನುಗ್ಗಿ, ವೈದ್ಯ ಹಾಗೂ ಪುಣೆಯಿಂದ ಬಂದಿದ್ದ ಅವರ ಸಹೋದರಲ ಕೈ-ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟಿಕ್ ಟೇಪ್ ಸುತ್ತಿ ಕೊಲೆ ಮಾಡಿ, ಹಣ ದೋಚಿ ಪರಾರಿಯಾಗಿತ್ತು.
ವೈದ್ಯರ ಮಗ ಎರಡು-ಮೂರು ದಿನ ಕಳೆದು ಮನೆಗೆ ಬಂದಾಗಲೇ ಜೋಡಿ ಕೊಲೆ ಬೆಳಕಿಗೆ ಬಂದಿತ್ತು. ಇದಲ್ಲದೆ ಈ ಅವಧಿಯಲ್ಲಿ ನಡೆದ ಇನ್ನೂ ಒಂದು ಹತ್ಯೆಯಲ್ಲಿ ದಂಡುಪಾಳ್ಯ ಗ್ಯಾಂಗಿನ ಕೈವಾಡವಿತ್ತೆಂದು ಪೊಲೀಸರು ಶಂಕಿಸಿದ್ದರು.
ಬಾಯಿ ಬಿಟ್ಟಿದ್ದರು: ರಾಜ್ಯದ ಹಲವೆಡೆ ನಡೆದ ಕೊಲೆ-ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ದಂಡುಪಾಳ್ಯ ಗ್ಯಾಂಗಿನವರನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಹುಬ್ಬಳ್ಳಿ ಸೇರಿದಂತೆ ಇತರೆಡೆ ತಾವು ದುಷ್ಕೃತ್ಯ ನಡೆಸಿದ್ದಾಗಿ ಬಾಯಿ ಬಿಟ್ಟಿದ್ದರು. ಆಗಲೇ ಹುಬ್ಬಳ್ಳಿಯಲ್ಲಿ ನಡೆದಿದ್ದ ನಾಲ್ಕು ಕೊಲೆಗಳ ವಿಚಾರ ಬೆಳಕಿಗೆ ಬಂದಿತ್ತು. ದರೋಡೆಗೆ ಬಂದಾಗ ಮನೆಯಲ್ಲಿದ್ದವರನ್ನು ನಿಷ್ಕರುಣೆಯಿಂದ ಕೊಲೆ ಮಾಡುತ್ತಿತ್ತು ಎಂಬುದು ಪೊಲೀಸರ ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.