ಬಂಡವಾಳಶಾಹಿಗಳಿಗೆ ಸ್ವಾಭಿಮಾನ ಮಾರಿಕೊಳ್ಳಬೇಡಿ
Team Udayavani, Jul 7, 2017, 2:32 PM IST
ಹರಪನಹಳ್ಳಿ: ಬಂಡವಾಳಶಾಹಿಗಳ ಹಣಕ್ಕೆ ನಿಮ್ಮ ಸ್ವಾಭಿಮಾನ ಮಾರಾಟ ಮಾಡಿಕೊಂಡು ಮತ ಹಾಕಬಾರದು. ಸ್ಥಳೀಯ ಬಿಜೆಪಿಯಲ್ಲಿ ನಾವು ಒಬ್ಬ ವ್ಯಕ್ತಿ ಪೂಜೆ ಮಾಡಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೂ ತಾಕತ್ತು ಇದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಮಾಜಿ ಸದಸ್ಯ ಜಿ.ನಂಜನಗೌಡ ಅವರು ಕರುಣಾಕರರೆಡ್ಡಿ ಹೆಸರು ಪ್ರಸ್ತಾಪಿಸದೇ ಅವರ ವಿರುದ್ಧ ವಾಗ್ಧಾಳಿ ನಡೆಸಿದರು.
ತಾಲೂಕಿನ ದುಗ್ಗಾವತ್ತಿ, ವಟ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಸ್ಥಳೀಯ ಬಿಜೆಪಿ ಮುಖಂಡರು ಹಮ್ಮಿಕೊಂಡಿರುವ ಜನ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹರಪನಹಳ್ಳಿ ಕ್ಷೇತ್ರ ಮೀಸಲಾತಿಯಿಂದ ಸಾಮಾನ್ಯ ವರ್ಗಕ್ಕೆ ಬದಲಾದ ಸಂದರ್ಭದಲ್ಲಿ ಕರುಣಾಕರರೆಡ್ಡಿ ಒಂದು ಬಾರಿ ಸ್ಪರ್ಧೆ ಮಾಡುತ್ತಾರೆ. ನಂತರ ಸ್ಥಳೀಯ ನಾಯಕರಿಗೆ ಅವಕಾಶ ಮಾಡಿಕೊಡುತ್ತೇವೆ ಎಂಬುವುದಾಗಿ ಪಕ್ಷದ ಮುಖಂಡರು ಭರವಸೆ ನೀಡಿದ್ದರು. ಆದರೆ ನಾನೇ ಇರಬೇಕು ಎನ್ನುವ ಧೋರಣೆಯನ್ನು ಕರುಣಾಕರರೆಡ್ಡಿ ಹೊಂದಿದ್ದಾರೆ. ಇಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಬಿಜೆಪಿ ಮುಖಂಡ ಅರಸೀಕೆರೆ ಎನ್. ಕೊಟ್ರೇಶ್ ಮಾತನಾಡಿ, ದುಡ್ಡಿನಿಂದ ಚುನಾವಣೆಯಲ್ಲಿ ಗೆಲ್ಲುತ್ತೀವಿ ಎನ್ನುವ ವಲಸೆ
ನಾಯಕರಿಗೆ ಕ್ಷೇತ್ರದಿಂದ ಗೇಟ್ ಪಾಸ್ ಕೊಡಬೇಕಿದೆ. ಕಳೆದ 10 ವರ್ಷದಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ.
ಪಕ್ಷದಲ್ಲಿ ನಮ್ಮ ಹಕ್ಕು ಕೇಳಿದ್ರೆ ನಮ್ಮನ್ನು ಭಿನ್ನಮತೀಯರು, ಉಚ್ಚಾಟಿಸುತ್ತೇವೆ ಎನ್ನುತ್ತಾರೆ. ಸ್ಥಳೀಯ ನಾಯಕರ ಬೆಳವಣಿಗೆಗೆ
ಸಹಿಸದಿರುವ ವಲಸೆ ಬಂದಿರುವ ನಾಯಕರನ್ನು ಜನರು ಕ್ಷೇತ್ರದಿಂದಲೇ ಉಚ್ಚಾಟಿಸಬೇಕು. ಜನರ ಕಷ್ಟ-ಸುಖಕ್ಕೆ ಸ್ಪಂದಿಸುವ ಸ್ಥಳೀಯ ನಾಯಕರನ್ನು ಚುನಾವಣೆಯಲ್ಲಿ ಗೆಲ್ಲಿಸಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೋರಿದರು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಪಿ.ಮಹಾಬಲೇಶ್ವರಗೌಡ ಮಾತನಾಡಿ, 371ಜೆ ಕಲಂ ಸೌಲಭ್ಯದಿಂದ ತಾಲೂಕು ವಂಚಿತವಾಗಲು ಕರುಣಾಕರರೆಡ್ಡಿಯೇ ಕಾರಣವಾಗಿದ್ದಾರೆ. ಅಂದು ಕಂದಾಯ ಮಂತ್ರಿಯಾಗಿದ್ದ ರೆಡ್ಡಿ ಇದರ ಬಗ್ಗೆ ತುಟಿ ಬಿಚ್ಚಲಿಲ್ಲ. ನಿಮ್ಮ ಆಶೀರ್ವಾದ ಪಡೆದ ರೆಡ್ಡಿ ಮೈಸೂರಿನಲ್ಲಿ ಭೂಮಿ ಡಿನೋಟಿμಕೇಷನ್ ಮಾಡಿ 800 ಕೋಟಿರೂ ಅಕ್ರಮ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿದ್ದಾರೆ. ಕ್ಷೇತ್ರದ ಜನರನ್ನು ಚುನಾವಣೆ ಸಂದರ್ಭದಲ್ಲಿ ಹಣದಿಂದ ಕೊಂಡುಕೊಳ್ಳಲು ಹವಣಿಸುತ್ತಿರುವ ಇವರಿಗೆ
ಜನರು ತಕ್ಕ ಉತ್ತರ ನೀಡಬೇಕು ಎಂದರು. ದುಗ್ಗಾವತ್ತಿ, ಶಾಂತಿನಗರ, ಖಂಡಿಕೇರಿ ತಾಂಡಾ, ವಟ್ಲಹಳ್ಳಿ, ಕಡತಿ, ನಂದ್ಯಾಲ,
ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗೊಂದಿ, ಮತ್ತೂರು, ಯರಬಾಳು ಗ್ರಾಮದಲ್ಲಿ ಜನ ಸಂಪರ್ಕ ಅಭಿಯಾನ ನಡೆಯಿತು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಆರುಂಡಿ ನಾಗರಾಜ್, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಗುಂಡಗತ್ತಿ ಮಂಜುನಾಥ್,
ಮುಖಂಡರಾದ ಮೈದೂರು ರಾಮಪ್ಪ, ಶೆಟ್ಟಿನಾಯ್ಕ, ಗುಂಡಗತ್ತಿ ಕೋಟ್ರಪ್ಪ, ಕಸವನಹಳ್ಳಿ ನಾಗೇಂದ್ರಪ್ಪ, ಪರುಶುರಾಮ, ದುಗ್ಗಾವತ್ತಿ
ವಿಶ್ವನಾಥ್ ಮಾತನಾಡಿದರು.
ಮುಖಂಡರಾದ ನಾಗರಾಜ್ ಪಾಟೀಲ್, ಓಂಕಾರಗೌಡ, ಚಿಕ್ಕೇರಿ ವೆಂಕಪ್ಪ, ಕಂಚಿಕೇರಿ ಕೆಂಚಪ್ಪ, ಬೇವಿನಹಳ್ಳಿ ನಿಂಗಪ್ಪ, ತೆಲಿಗಿ
ಮಂಜುನಾಥ್, ಎಚ್.ಎಂ.ಜಗದೀಶ್, ಡಿ.ಚನ್ನನಗೌಡ, ಹಲುವಾಗಲು ಕೃಷ್ಣಪ್ಪ, ಕುಂಚೂರು ಮಹಬೂಬ್‌ಬಸಾಬ್, ತೇಜು,
ಹರ್ಷ, ಸೋಮಣ್ಣ, ವಟ್ಲಹಳ್ಳಿ ಎಂ.ಬೆಟ್ಟಪ್ಪ, ಶಿವಮೂರ್ತೆಪ್ಪ, ಮಹೇಶಪ್ಪ, ಗೌಡರ ಚಿಕ್ಕಪ್ಪ, ಎಸ್.ಗಂಗಾಧರ್, ಮಲ್ಲಿಕಾರ್ಜುನಪ್ಪ, ವಾಸಪ್ಪ, ಬಿ.ಸುರೇಶಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.