ಮಾಧ್ಯಮಗಳ ನಿರ್ಬಂಧ ಪ್ರಜಾಹಿತಾಸಕ್ತಿಗೆ ಮಾರಕ
Team Udayavani, Jul 7, 2017, 2:37 PM IST
ಚನ್ನಗಿರಿ: ಪತ್ರಿಕೆಗಳು ಸಮಾಜದ ಕಣ್ಣುಗಳಿದಂತೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಶಕ್ತಿಯಾಗಿದೆ. ಅಂತಹ ಶಕ್ತಿಯ ಮೇಲೆ ಇಂದು ಷಡ್ಯಂತ್ರಗಳು ನಡೆಸುತ್ತಿರುವುದು ನಿಜಕ್ಕೂ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಹಿರಿಯ ಪರ್ತಕರ್ತ ಬಾ.ರಾ. ಮಹೇಶ್ ವಿಷಾಧಿಸಿದರು.
ಪಟ್ಟಣದ ಬುಸ್ಸೇನಹಳ್ಳಿ ಸಮೀಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ
ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪತ್ರಿಕೆಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರಗಳು ನಡೆಯುತ್ತಿವೆ. ಇದರಿಂದ
ವಸ್ತುನಿಷ್ಠ ಸುದ್ದಿಗಳು ಕಣ್ಮರೆಯಾಗಿ ಅನ್ಯಾಯ ಭ್ರಷ್ಟಾಚಾರಗಳಿಗೆ ಕುಮ್ಮಕು ನೀಡುವಂತಹ ವಾತಾವರಣ ನಿರ್ಮಾಣವಾಗಬಹುದು. ಯಾರೇ ಮಾಧ್ಯಮಗಳಿಗೆ ಕಡಿವಾಣ ಹಾಕುವ ಮುಂಚೆ ಯೋಚಿಸಬೇಕು. ಯಾವ ಕ್ಷೇತ್ರವಾಗಲಿ ಅಲ್ಲಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವಂತಹ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರ ಕೆಲಸ ಮಾಡುತ್ತದೆ ಎಂದರು.
ಉಪನ್ಯಾಸಕ ಎಂ.ಬಿ.ನಾಗರಾಜ್ ಕಾಕನೂರು ಮಾತನಾಡಿ, ದಿನಪತ್ರಿಕೆಗಳು ಜನರ ಜೀವನಾಡಿಯಾಗಿವೆ. ಸ್ಪರ್ಧಾತ್ಮಕ
ಪತ್ರಿಕೋಧ್ಯಮದಲ್ಲಿ ಇಂದು ಸವಾಲುಗಳು ಹಲವಾರು ಇವೆ. ಕ್ಷಣಾರ್ಧದಲ್ಲಿ ಸುದ್ದಿ ಬಿತ್ತರಿಸುವ ಜವಾಬ್ದಾರಿ ಪತ್ರಕರ್ತರಿಗಿದೆ. ಪತ್ರಕರ್ತರು ತಮ್ಮ ಕುಟುಂಬದೊಂದಿಗೆ ಕಳೆಯುವ ಸಂತೋಷವನ್ನು ಬದಿಗೊತ್ತಿ ದಿನದ 24 ಗಂಟೆಗಳ ಕಾಲ ಸುದ್ದಿ ಬಿತ್ತರಿಸುವ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷ ಎಚ್.ವಿ. ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಐಟಿಐ ಕಾಲೇಜ್ ಪ್ರಾಂಶುಪಾಲ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎಂ.ಸಿ.ರವಿಕುಮಾರ್, ತಾಲೂಕು ಸಂಘದ ಕಾರ್ಯದರ್ಶಿ ಸತೀಶ್ ಎಂ. ಪವಾರ್. ಅಣೋಜಿರಾವ್ ಇತರರಿದ್ದರು. ಹಿರಿಯ ಪತ್ರಕರ್ತ ಪಾಂಡೋಮಟ್ಟಿ ಶಿವಮೂರ್ತಿ ಅವರನ್ನು
ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.