ಉಗ್ರ ಶಿಬಿರ ನಿರ್ನಾಮಕ್ಕೆ ಸಾಮೂಹಿಕ ಕಾರ್ಯಾಚರಣೆ: ಪ್ರಧಾನಿ ಮೋದಿ ಕರೆ
Team Udayavani, Jul 7, 2017, 4:08 PM IST
ಹ್ಯಾಂಬರ್ಗ್ : ಉಗ್ರರ ಶಿಬಿರಗಳ ನಿರ್ನಾಮಕ್ಕೆ ಮತ್ತು ಉಗ್ರರಿಗೆ ನೆರವು ನೀಡುವವರ ಮತ್ತು ಭಯೋತ್ಪಾದನೆಯನ್ನು ಪ್ರವರ್ತಿಸುವವರ ವಿರುದ್ಧದ ಸಾಮೂಹಿಕ ಕಾರ್ಯಾಚರಣೆಗೆ ಎಲ್ಲರೂ ಒಗ್ಗೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ ಇಲ್ಲಿ ಕರೆ ನೀಡಿದರು.
ಜರ್ಮನಿಯಲ್ಲಿನ ಜಿ-20 ಶೃಂಗದ ಪಾರ್ಶ್ವದಲ್ಲಿ ನಡೆದ ಬ್ರಿಕ್ಸ್ ನಾಯಕರ ಔಪಚಾರಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಯೋತ್ಪಾದನೆ ಹಾಗೂ ಅದರ ಪ್ರವರ್ತಕರ ವಿರುದ್ಧ ಸಾಮೂಹಿಕ ಕಾರ್ಯಾಚರಣೆ ನಡೆಸುವ ಅಗತ್ಯವಿದೆ ಎಂದು ಕಟುವಾದ ಶಬ್ದಗಳಲ್ಲಿ ಹೇಳಿದರು.
ಸಂರಕ್ಷಣಾವಾದ, ವಿಶೇಷವಾಗಿ ವೃತ್ತಿಪರ ಕುಶಲಿಗರನ್ನು ಕಾಪಿಡುವುದರ ವಿರುದ್ಧ ಸಾಮೂಹಿಕ ಧ್ವನಿಯನ್ನು ಮೋದಿ ಬ್ರಿಕ್ಸ್ ನಾಯಕರ ಸಭೆಯಲ್ಲಿ ಬೆಂಬಲಿಸಿದರು.
ಬ್ರಿಕ್ಸ್ ಧ್ವನಿಯು ಶಕ್ತಿಶಾಲಿಯಾಗಿದ್ದು ಜಾಗತಿಕ ಆರ್ಥಿಕತೆ ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುವುದಕ್ಕೆ ಬ್ರಿಕ್ಸ್ ನಾಯಕತ್ವವನ್ನು ನೀಡಬೇಕಾಗಿದೆ ಎಂದು ಮೋದಿ ಹೇಳಿದರು.
ಭಾರತದಲ್ಲಿ ಈ ತಿಂಗಳ 1ರಿಂದ ಜಾರಿಗೆ ತರಲಾಗಿರುವ ಐತಿಹಾಸಿಕ ಜಿಎಸ್‌ಟಿ, ದೇಶದಲ್ಲಿ ಕಳೆದ 70 ವರ್ಷಗಳಲ್ಲೇ ಜಾರಿಗೆ ತರಲಾಗಿರುವ ಅತೀ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ ಎಂದು ಮೋದಿ ಹೇಳಿದರು.
ಬ್ರಿಕ್ಸ್ ಔಪಚಾರಿಕ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟಿನ ನಡುವೆಯೇ ಮುಖಾಮುಖೀಯಾದರು. ಈ ವರ್ಷಾಂತ್ಯ ಚೀನದಲ್ಲಿ ನಡೆಯಲಿರುವ ಐದು ದೇಶಗಳ (ಬ್ರಝಿಲ್, ರಶ್ಯ, ಭಾರತ, ಚೀನ ಮತ್ತು ದಕ್ಷಿಣ ಆಫ್ರಿಕ) ಬ್ರಿಕ್ಸ್ ಶೃಂಗವನ್ನು ಯಶಸ್ವಿಗೊಳಿಸುವುದಕ್ಕೆ ಪೂರ್ಣ ಸಹಕಾರ ನೀಡಲು ಬ್ರಿಕ್ಸ್ ನಾಯಕರು ಒಪ್ಪಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.