![Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ](https://www.udayavani.com/wp-content/uploads/2025/02/kadukona-415x278.jpg)
![Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ](https://www.udayavani.com/wp-content/uploads/2025/02/kadukona-415x278.jpg)
Team Udayavani, Jul 8, 2017, 3:45 AM IST
ಜೋಹಾನ್ಸ್‌ಬರ್ಗ್: ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಮಹಿಳಾ ಹಾಕಿ ಪಂದ್ಯದ ಗುಂಪು “ಬಿ’ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ವಾತಾವರಣಕ್ಕೆ ಹೊಂದಿಕೊಳ್ಳಲು ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ ಭಾರತೀಯರಿಗೆ ಕೆಲವು ತರಬೇತಿ ನೀಡಿದ್ದೇವೆ. ನಾವು ತಯಾರಿದ್ದೇವೆ ಎಂದು ಮುಖ್ಯ ಕೋಚ್ ಸಜೊಯೆರ್ಡ್ ಮರ್ಜಿನ್ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಚಿಲಿ ಗುಂಪಿನಲ್ಲಿ ಭಾರತಕ್ಕಿಂತ ಕೆಳ ರ್‍ಯಾಂಕಿಂಗ್‌ನಲ್ಲಿವೆ.
6ನೇ ಶ್ರೇಯಾಂಕದಲ್ಲಿರುವ ಅಮೆರಿಕ ಮತ್ತು 3ನೇ ಶ್ರೇಯಾಂಕದಲ್ಲಿರುವ ಅರ್ಜೆಂಟೀನಾ ತಂಡಗಳಿಂದ ಭಾರತ ಕಠಿಣ ಸವಾಲು ಎದುರಿಸಲಿದೆ. ಬಲಿಷ್ಠ ತಂಡಗಳನ್ನು ಕಟ್ಟಿ ಹಾಕಲು ತಂತ್ರ ಮಾಡಿದ್ದೇವೆ. ಕಠಿಣ ಅಭ್ಯಾಸ ನಡೆಸಿರುವುದು ಸಹಾಯಕ್ಕೆ ಬರಲಿದೆ ಎಂದು ಭಾರತ ನಾಯಕಿ ರಾಣಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.