ಮದ್ಯದಂಗಡಿಗಳ ಬಳಿ ಟ್ರಾಫಿಕ್ ಜಾಂ: ದೂರು
Team Udayavani, Jul 8, 2017, 2:45 AM IST
ಪೊಲೀಸ್ ಫೋನ್ ಇನ್ ಕಾರ್ಯಕ್ರಮ
ಪಾಂಡೇಶ್ವರ: ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಬಾರ್ ಮತ್ತು ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ಜನರು ಮದ್ಯ ಸೇವನೆಗೆ ನಗರಕ್ಕೆ ಬರುತ್ತಿದ್ದಾರೆ. ಇದರಿಂದ ಕೆಲವು ಮದ್ಯದಂಗಡಿ/ ಬಾರ್‌ಗಳ ಆವರಣದಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ತಡೆ ಉಂಟಾಗುತ್ತಿದೆ. ಅಲ್ಲದೆ ನಗರದ ಕೆಲವು ವೈನ್ ಶಾಪ್‌ಗ್ಳಲ್ಲಿ ಬೆಳಗ್ಗೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಶುಕ್ರವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿಬಂದವು. ಈ ವಿಷಯದ ಕುರಿತು ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಕರೆಗಳನ್ನು ಸ್ವೀಕರಿಸಿದ ಎಸಿಪಿ ತಿಲಕ್‌ಚಂದ್ರ ತಿಳಿಸಿದರು.
ಪಬ್‌ಗಳಲ್ಲಿ ಶಾಲಾ ಮಕ್ಕಳಿಗೂ ಡ್ರಿಂಕ್ಸ್ ವಿತರಿಸಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದಾಗ ಮಕ್ಕಳ ಕೈಗೆ ಯಾವುದೇ ಬಾರ್/ ಪಬ್‌ಗಳಲ್ಲಿ ಮದ್ಯ ನೀಡುವಂತಿಲ್ಲ ಎಂದು ಎಸಿಪಿ ತಿಳಿಸಿದರು. ಹೆಲ್ಮೆಟ್ ಧರಿಸದೆ, ಲೈಸನ್ಸ್ ಇಲ್ಲದೆ ಹಾಗೂ ಚಿಕ್ಕ ಮಕ್ಕಳು ಬೈಕ್ ಓಡಿಸ್ತಾರೆ ಹಾಗೂ ವೀಲಿಂಗ್ ಮಾಡುತ್ತಾರೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ವಾಟ್ಸಪ್ ಮೂಲಕ ಚಿತ್ರ ಸಮೇತ ಕುಡ್ಲ ವಾಟ್ಸಪ್ ಗ್ರೂಪ್‌ಗೆ (9480802312) ಕಳುಹಿಸುವಂತೆ ಎಸಿಪಿ ವಿನಂತಿಸಿದರು.
ಬಿಜೈನ ಮೆಸ್ಕಾಂ ಕಚೇರಿ ಎದುರು ರಸ್ತೆ ಬದಿ ಫುಟ್‌ಪಾತ್ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಊಟ, ತಿಂಡಿ ವ್ಯವಹಾರ ನಡೆಯುತ್ತಿದ್ದು, ಪಾದಚಾರಿಗಳಿಗೆ ಮತ್ತು ವಾಹನ ನಿಲುಗಡೆಗೆ ಕಷ್ಟವಾಗಿದೆ. ಸಮೀಪದ ಕೆಎಸ್‌ಆರ್‌ಟಿಸಿ ಎದುರು ಫುಟ್‌ಪಾತ್ ವ್ಯವಸ್ಥೆ ಇರುವುದಿಲ್ಲ ಎಂದು ಸಾರ್ವಜನಿಕರು ದೂರಿದರು. ಈ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಎಸಿಪಿ ತಿಲಕ್ ಚಂದ್ರ ತಿಳಿಸಿದರು. ಕೋಟೆಕಾರ್ ಬೀರಿ ಜಂಕ್ಷನ್ ಬಳಿ ಮಾಡೂರು ರಸ್ತೆಯ ಬದಿ ನಡೆದಾಡಲು ಸೂಕ್ತ ಫುಟ್‌ಪಾತ್ ವ್ಯವಸ್ಥೆ ಮಾಡಬೇಕು ಎಂದು ದೂರು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದು ಎಸಿಪಿ ತಿಳಿಸಿದರು. ಪಡೀಲ್ ಓವರ್ ಬ್ರಿಜ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಈಗಲೂ ಮುಂದುವರಿದಿದೆ ಎಂಬ ಅಹವಾಲಿಗೆ ಉತ್ತರಿಸಿದ ಎಸಿಪಿ ಅವರು ಈಗಾಗಲೇ ಅಲ್ಲಿ ಡಾಂಬರು ಹಾಕಿ ರಸ್ತೆ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಮಾದಕ ಪದಾರ್ಥಗಳ ಮಾರಾಟ
ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ, ಮೋರ್ಗನ್ಸ್ ಗೇಟ್‌ನಲ್ಲಿ ಬಾರ್ ಒಂದರ ಮೇಲೆ ರಿಕ್ರಿಯೇಶನ್ ಕ್ಲಬ್ ಆರಂಭವಾಗುವ ಸಾಧ್ಯತೆ ಕುರಿತು, ಕೃಷ್ಣಾಪುರದಲ್ಲಿ ಸಣ್ಣ ಮಕ್ಕಳು ಬೈಕ್ ರೈಡ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಡುವುದಿಲ್ಲ. ಅಂತಹ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ತಮಗೆ ದೂರು ಸಲ್ಲಿಸಬಹುದು ಎಂದು ಎಸಿಪಿ ವಿವರಿಸಿದರು.
ಬೀದಿ ನಾಯಿಗಳ ಹಾವಳಿ
ಬಿಜೈನಲ್ಲಿ ಬೆಳಗ್ಗಿನ ಹೊತ್ತು ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ. ವಾಕಿಂಗ್ ಹೋಗುವಾಗ ನಾಯಿಗಳ ಹಿಂಡು ಅಟ್ಟಿಸಿಕೊಂಡು ಬರುತ್ತದೆ ಎಂಬ ದೂರು ಬಂತು. ಈ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಸಿಪಿ ತಿಲಕ್‌ಚಂದ್ರ ತಿಳಿಸಿದರು. ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಬಳಿ ಹಾಪ್‌ಕಾಮ್ಸ್ ಮಳಿಗೆ ಎದುರಿನ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಿದರೆ ಬಂಟ್ಸ್ ಹಾಸ್ಟೆಲ್- ಪಿವಿಎಸ್ ರಸ್ತೆಯಲ್ಲಿ ಆಗಿಂದಾಗ್ಗೆ ಸಂಚಾರ ಅಸ್ತವ್ಯಸ್ತಗೊಳ್ಳುವುದನ್ನು ತಡೆಯಬಹುದು ಎಂಬ ಸಲಹೆಯನ್ನು ಸಾರ್ವಜನಿಕರೊಬ್ಬರು ಮುಂದಿಟ್ಟರು.
ಪಿಕ್ ಪಾಕೆಟ್ ಹೆಚ್ಚಳ
ರೂಟ್ ನಂಬ್ರ 15 ಬಸ್‌ನಲ್ಲಿ ಲಾಲ್‌ಬಾಗ್- ನಂತೂರು ಮಧ್ಯೆ ಪಿಕ್ ಪಾಕೆಟ್ ಪ್ರಕರಣಗಳು ಹೆಚ್ಚು ಸಂಭವಿಸುತ್ತವೆ ಎಂಬ ದೂರಿಗೆ ಸ್ಪಂದಿಸಿದ ಎಸಿಪಿ ಈ ಕುರಿತು ಬಸ್‌ಗಳ ಚಾಲಕ, ನಿರ್ವಾಹಕರಿಗೆ ನಿಗಾವಹಿಸುವಂತೆ ಸೂಚಿಸಲಾಗುವುದು ಎಂದರು. ನಂಬರ್ ಪ್ಲೇಟ್ ಇಲ್ಲದ ವಾಹನಗಳಿದ್ದರೆ ದೂರು ಕೊಡಿ ಎಂದು ತಿಳಿಸಿದರು. ಸಿಸಿಬಿ ವಿಭಾಗದ ಎಸಿಪಿ ವೆಲೆಂಟೈನ್ ಡಿ’ಸೋಜಾ, ಇನ್‌ಸ್ಪೆಕ್ಟರ್ ಸವಿತ್ರತೇಜ, ಎಎಸ್‌ಐ ಯೂಸುಫ್, ಹೆಡ್‌ಕಾನ್‌ಸ್ಟೇಬಲ್ ಪುರುಷೋತ್ತಮ ಅವರು ಉಪಸ್ಥಿತರಿದ್ದರು.
ಬಸ್ ಮಾಲಕರ ಸಂಘದ ಪ್ರತಿನಿಧಿ ಉಪಸ್ಥಿತಿ
ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಬಸ್ ಮಾಲಕರ ಸಂಘದ (ಸಿಟಿ ಬಸ್) ಪ್ರಧಾನ ಕಾರ್ಯದರ್ಶಿ ಸುಚೇತನ್ ಅವರೂ ಉಪಸ್ಥಿತರಿದ್ದು, ಬಸ್ ಸಂಚಾರಕ್ಕೆ ಸಂಬಂಧಿಸಿದ ಸಾರ್ವನಿಕರ ಸಮಸ್ಯೆಗಳನ್ನು ಆಲಿಸಿದರು. ಇತ್ತೀಚೆಗೆ ನಡೆದ ಪೊಲೀಸ್ – ಬಸ್ ಮಾಲಕರ ಸೌಹಾರ್ದ ಸಭೆಯಲ್ಲಿ ಮುಂದಿನ ಫೋನ್ ಇನ್ ಕಾರ್ಯಕ್ರಮಗಳಿಗೆ ಬಸ್ ಮಾಲಕರ ಸಂಘದ ಪ್ರತಿನಿಧಿಯೊಬ್ಬರು ಹಾಜರಿರುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದರು.
ಸಾರ್ವಜನಿಕರಿಂದ ಬಂದ ದೂರು/ ಸಮಸ್ಯೆಗಳು
– ತೊಕ್ಕೋಟು ಜಂಕ್ಷನ್‌ನಲ್ಲಿ ಎಲ್ಲೆಂದರಲ್ಲಿ ಜನರು ರಸ್ತೆ ದಾಟುತ್ತಿದ್ದು, ಇದನ್ನು ತಡೆಯಲು ಕ್ರಮ ಜರಗಿಸಬೇಕು. ಪಿ.ಎ. ಕಾಲೇಜು ಕ್ರಾಸ್ ಬಳಿ ಹಂಪ್ ಹಾಕಬೇಕು.
– ಕೆ.ಎಸ್. ರಾವ್ ರಸ್ತೆಯಲ್ಲಿ ಬಸ್ ಬೇ ಬೇಕು.
– ಪಡೀಲ್- ಬಜಾಲ್ ರಸ್ತೆಯಲ್ಲಿ ಬಸ್ಸುಗಳನ್ನು ಚಾಲಕರು ಮಾರ್ಗ ಮಧ್ಯೆ ನಿಲ್ಲಿಸುತ್ತಾರೆ.
– ಕೆಎಸ್‌ಆರ್‌ಟಿಸಿ ರೂಟ್ ನಂಬ್ರ 17ರ ಬಸ್ಸನ್ನು ಕುಂಜತ್ತಬೈಲ್‌ನಿಂದ ನಿಗದಿತ ಸಮಯಕ್ಕೆ ಮೊದಲೇ ಬಿಡುತ್ತಾರೆ.
– ಉರ್ವ ಮಾರಿಗುಡಿ ಬಳಿ ರಾತ್ರಿ 7 ಗಂಟೆ ಬಳಿಕ ರಸ್ತೆಯ ಎರಡೂ ಬದಿ ವಾಹನ ಗಳನ್ನು ನಿಲ್ಲಿಸಿ ಸಂಚಾರಕ್ಕೆ ತಡೆ ಉಂಟು ಮಾಡಲಾಗುತಿದ್ದು ನಡೆದಾಡಲೂ ಕಷ್ಟವಾಗುತ್ತದೆ.
– ಕೆಲವು ಸಿಟಿ ಬಸ್‌ಗಳಲ್ಲಿ ಜಾಸ್ತಿ ಟಿಕೆಟ್ ದರ ಪಡೆಯುತ್ತಿದ್ದಾರೆ.
– ಮಂಗಳಾದೇವಿಯಲ್ಲಿ ‘ಮಂಗಳೂರು ವನ್’ ಸೇವೆಯನ್ನು ಆರಂಭಿಸಬೇಕು.
ಜಲ್ಲಿಗುಡ್ಡೆ- ಮಂಗಳಾದೇವಿ ಮಾರ್ಗದಲ್ಲಿ ಓಡಾಡುವ 11ಸಿ ಬಸ್ಸು ಸಮರ್ಪಕವಾಗಿ ಕಾರ್ಯಾಚರಿಸುವುದಿಲ್ಲ.
– ಫಳ್ನೀರ್ ರಸ್ತೆಯಲ್ಲಿ ಶಾಲಾ ಕಾಲೇಜು ಬಿಡುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
– ಸ್ಟರಕ್ ರಸ್ತೆಯಲ್ಲಿ ಸಂಜೆ 5.30 ರ ಬಳಿಕ ರಸ್ತೆಯ ಎರಡೂ ಕಡೆ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.