ಗೋಮಾಂಸ ಪತ್ತೆಹಚ್ಚುವ ಕಿಟ್!
Team Udayavani, Jul 8, 2017, 8:25 AM IST
ಮುಂಬಯಿ: ಈಗಾಗಲೇ ಗೋಮಾಂಸ ಮಾರಾಟ ನಿಷೇಧಿಸಿರುವ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ, ಇದೀಗ ಗೋಮಾಂಸ ಪತ್ತೆ ಮಾಡು ವಂತಹ ವಿಶೇಷ ಕಿಟ್‌ಗಳನ್ನು ಪೊಲೀಸರ ಕೈಗೆ ನೀಡಿದೆ!
ಗರ್ಭಧಾರಣೆ ಖಾತ್ರಿಪಡಿಸುವ ಯಂತ್ರದಷ್ಟೇ ಚಿಕ್ಕದಾಗಿರುವ ಯಂತ್ರ ಈ ಕಿಟ್‌ನಲ್ಲಿದ್ದು, ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿರುವ ಗೋಮಾಂಸವನ್ನು ಕೇವಲ 30 ನಿಮಿಷದಲ್ಲಿ ಪತ್ತೆ ಮಾಡುತ್ತದೆ. ಪ್ರಸ್ತುತ ಈ ರೀತಿಯ 45 ಗೋಮಾಂಸ ಪತ್ತೆ ಕಿಟ್‌ಗಳ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರ ಪೊಲೀಸರು, ಮೊಬೈಲ್ ವ್ಯಾನ್‌ಗಳಲ್ಲಿ ಈ ಕಿಟ್‌ಗಳನ್ನು ಇರಿಸಿಕೊಂಡು ಗೋ ಮಾಂಸ ಪತ್ತೆ ಮಾಡುವುದಾಗಿ ತಿಳಿಸಿದ್ದಾರೆ.
ಪತ್ತೆ ಹೇಗೆ?: “ಮಾಂಸದಲ್ಲಿನ ಪ್ರೊಟೀನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಈ ಸಾಧನಕ್ಕಿದೆ. ಹೀಗಾಗಿ, ಮಾಂಸವು ಗೋವಿನದ್ದೇ ಎಂಬುದನ್ನು ಈ ಕಿಟ್ ಪತ್ತೆ ಹಚ್ಚುತ್ತದೆ. ಒಂದೊಮ್ಮೆ
ಪತ್ತೆ ಯಂತ್ರದಲ್ಲಿನ ಲೈಟ್‌ನ ಬಣ್ಣ ಬದಲಾದರೆ, ಅದು ಗೋಮಾಂಸ ಎಂಬುದು ಖಾತ್ರಿಯಾಗುತ್ತದೆ. ಇದರ ಆಧಾರದಲ್ಲಿ ಪೊಲೀಸರು ಆರೋಪಿ ಗಳ ವಿರುದ್ಧ ಎಫ್ಐಆರ್ ದಾಖಲಿಸಬಹು ದಾಗಿದೆ,’ ಎಂದು ಮಹಾರಾಷ್ಟ್ರ ವಿಧಿವಿಜ್ಞಾನ ಪ್ರಯೋಗಾ
ಲಯದ ನಿರ್ದೇಶಕ ಕೃಷ್ಣ ಕುಲಕರ್ಣಿ ಹೇಳಿದ್ದಾರೆ.
“ಈ ಸಂಬಂಧ “ಗೋ ಮಾಂಸ ವಿರೋಧಿ ಘಟಕ’ ಸ್ಥಾಪಿಸಲಿದ್ದು, ಕಿಟ್ ಬಳಸುವುದು ಹೇಗೆ ಎಂಬ ಕುರಿತು 100 ಪೊಲೀಸರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಈ ಪೈಕಿ ಈಗಾಗಲೆ 25 ಸಿಬಂದಿ ತರಬೇತಿ ಪಡೆ
ಯುತ್ತಿದ್ದಾರೆ. ಸಿಬಂದಿಯ ಶೈಕ್ಷಣಿಕ ಅರ್ಹತೆಯನ್ನು ಧರಿಸಿ ಅವರನ್ನು ಘಟಕಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ಕುಲಕರ್ಣಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.