ಮಲಬಾರ್ ನೌಕಾ ತಾಲೀಮಿಗೆ ಚೀನ ಗರಂ
Team Udayavani, Jul 8, 2017, 9:54 AM IST
ಹೊಸದಿಲ್ಲಿ: ಸಿಕ್ಕಿಂ ಗಡಿಯಲ್ಲಿನ ಉದ್ವಿಗ್ನತೆಯ ನಡುವೆಯೇ ರವಿವಾರದಿಂದ ಬಂಗಾಲಕೊಲ್ಲಿ ಸಾಗರದಲ್ಲಿ ಆರಂಭಗೊಳ್ಳಲಿರುವ ಮಲಬಾರ್ ನೌಕಾ ತಾಲೀಮಿಗೆ ಭಾರತ ತನ್ನ ಅತಿ ದೊಡ್ಡ ನೌಕಾ ಪಡೆ ಹಡಗು, ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯವನ್ನು ಕಳುಹಿಸಿದೆ.
ಅಮೆರಿಕ, ಜಪಾನ್, ಭಾರತದ ಜಂಟಿ ಸಮರಾಭ್ಯಾಸ ಇದಾಗಿದ್ದು, ಸಹಜವಾಗಿಯೇ ಚೀನಕ್ಕೆ ಇದು ತೀವ್ರ ಇರುಸುಮುರಸು ತಂದೊಡ್ಡಿದೆ. ಈ ಬಗ್ಗೆ ಪ್ರತಿಕ್ರಿಯೆಯನ್ನೂ ಚೀನ ನೀಡಿದ್ದು, ಈ ನೌಕಾ ಸಮರಾಭ್ಯಾಸ ಮೂರನೇ ರಾಷ್ಟ್ರವೊಂದರ ವಿರುದ್ಧವಲ್ಲ ಎಂದು ಭಾವಿಸುತ್ತೇವೆ ಎಂದು ಹೇಳಿದೆ.
ಚೀನ ಸರಕಾರದ ವಕ್ತಾರರು ಮಾತನಾಡಿ, ಇಂತಹ ಸಹಕಾರ, ನೌಕಾ ಸಮರಾಭ್ಯಾಸ ಮೂರನೇ ರಾಷ್ಟ್ರದ ವಿರುದ್ಧ ಅಲ್ಲ ಎಂದು ಭಾವಿಸುತ್ತೇವೆ. ಒಂದು ವೇಳೆ ಇದರಲ್ಲಿ ಬೇರೆ ಕಾರಣಗಳಿದ್ದರೆ, ಅದು ಪ್ರಾದೇಶಿಕ ಭದ್ರತೆ ಮತ್ತು ಶಾಂತಿಗೆ ಸಮಸ್ಯೆ ತಂದೊಡ್ಡುತ್ತದೆ’ ಎಂದು ಹೇಳಿದ್ದಾರೆ. ಈ ಮೂಲಕ ಸಿಕ್ಕಿಂನಲ್ಲಿ ಪಟ್ಟು ಬಿಡದೆ ಸೇನೆ ನಿಲ್ಲಿಸಿದ ಭಾರತಕ್ಕೆ, ದಕ್ಷಿಣ ಚೀನ ಸಮುದ್ರದಲ್ಲಿ ಚೀನ ವಿರುದ್ಧ ಹಲ್ಲು ಕಡಿಯುತ್ತಿರುವ ಜಪಾನ್, ಅಮೆರಿಕಕ್ಕೆ ಪರೋಕ್ಷ ಸಂದೇಶವನ್ನು ಚೀನ ಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.