ಯಡಿಯೂರಪ್ಪ-ಶೋಭಾ ಕ್ಷಮೆ ಕೇಳದಿದ್ದರೆ ಹೋರಾಟ
Team Udayavani, Jul 8, 2017, 12:09 PM IST
ಸಿಂಧನೂರು: ಬಿಜೆಪಿ ನಾಯಕರು ಎಐಸಿಸಿ ಉಪಾಧ್ಯಕ್ಷ ಮತ್ತು ಸಂಸದ ರಾಹುಲ ಗಾಂಧಿ ಅವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ರಾಹುಲ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಂಸದರಾದ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೆ ಜಿಲ್ಲಾ ಪ್ರವಾಸದಲ್ಲಿ ಯುವ ಕಾಂಗ್ರೆಸ್‌ನಿಂದ ರಾಜ್ಯಾದ್ಯಂತ ಮುತ್ತಿಗೆ ಹಾಗೂ ಹೋರಾಟ ಮಾಡಲಾಗುವುದು ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬಾದರ್ಲಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ ಗಾಂಧಿ ಅವರ ಬಗ್ಗೆ
ಮಾತನಾಡುವ ಹಕ್ಕು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಇಲ್ಲ. ರಾಹುಲ ಗಾಂಧಿ ಅವರ ಬಗ್ಗೆ ಮಾತನಾಡುವ
ಮುಂಚೆ ಯಾರ್ಯಾರೂ ಎಷ್ಟೆಷ್ಟೂ ಮ್ಯಾಚುರಿಟಿಗೆ ಬಂದಿದ್ದಾರೆ ತಿಳಿದುಕೊಳ್ಳಬೇಕಿದೆ. ಕುಮಾರಿ ಎಂದು ಕರೆಯಿಸಿಕೊಳ್ಳುವ ಶೋಭಾ ಕರಂದ್ಲಾಜೆ ಅವರ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಇನ್ನೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಷ್ಟು ಮೆಚೂರಿಟಿ ಇದೆ ಎಂಬುವುದು ಅವರು ಜೈಲಿಗೆ ಹೋಗಿದ್ದೆ ಸಾಕ್ಷಿಕರಿಸುತ್ತದೆ ಎಂದು ತಿಳಿಸಿದರು.
ಯುವ ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯಲ್ಲಿ ಭಿನ್ನಾಭಿಪ್ರಾಯವಿಲ್ಲ. ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ ದಕ್ಷ ಹಾಗೂ ಪ್ರಾಮಾಣಿಕರಿಗೆ ಬೆಲೆ ಕೊಡುತ್ತಾರೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮ ನಡೆದಿಲ್ಲ. ಕೆಂಪುರಾಜು ಸೇರಿದಂತೆ ಇನ್ನಿತರರು ಯುವ ಕಾಂಗ್ರೆಸ್ ನಲ್ಲಿದ್ದಾರೆ. ರಾಜೀನಾಮೆ ಮಾತೇ ಇಲ್ಲ ಎಂದರು. ಕೇಂದ್ರದ ಮೂರು ವರ್ಷಗಳ ಆಡಳಿತಕ್ಕೆ ಜನರು ಬೇಸತ್ತಿದ್ದಾರೆ. ಮೋದಿ ಅವರ ಆಡಳಿತ ಬಡವರ ಪರ ಇಲ್ಲ. ಕೇವಲ ಬಂಡವಾಳ ಶಾಹಿಗಳ ಪರ ಎಂಬುದು ಸಾಕಷ್ಟು ಭಾರಿ ಸಾಬೀತಾಗುತ್ತಿದೆ. ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್‌ನಿಂದ ರಾಷ್ಟ್ರಾದ್ಯಂತ ಕೇಂದ್ರ
ಸರ್ಕಾರ ಜನ ವಿರೋಧಿ ನೀತಿ ವಿರೋಧಿಸಿ ಹೋರಾಟ ಮಾಡಲಾಗುವುದು. ನಮಗೆ ಹೋರಾಟವೇ ಅಸ್ತ್ರವಾಗಿದೆ. ಜನರಿಗೆ ಗೊತ್ತಾಗಿದೆ. ಬಿಜೆಪಿಯವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಜೆಡಿಎಸ್ ವರಿಷ್ಠ ಹಾಗೂ ದೇಶದ ಮಾಜಿ ಪ್ರಧಾನಿ ಮೊಮ್ಮಗ ಎಚ್.ಡಿ. ಪ್ರಜ್ವಲ್ ಅವರು ತಮ್ಮ ಪಕ್ಷದ ಕುರಿತಾಗೇ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸಿ.ಎಂ. ಸಿದ್ಧರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್ ಹಿರಿಯ ನಾಯಕರಿಗಿಲ್ಲ. ಮೊದಲು ತಮ್ಮ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಜನಪಯೋಗಿ ಯೋಜನೆಗಳು ನಮಗೆ ಶ್ರೀರಕ್ಷೆಯಾಗಲಿವೆ. ರಾಹುಲ ಗಾಂಧಿ
ಅವರ ಆದೇಶದಂತೆ ಸಿ.ಎಂ. ಸಿದ್ದರಾಮಯ್ಯ ಪ್ರತಿ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರೈತಪರ ಕೆಲಸ ಮಾಡುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಗೆ ರಾಜ್ಯದ ಜನತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸಿಂಧನೂರು ತಾಲೂಕಿನ ಅಭಿವೃದ್ಧಿಯಲ್ಲಿ ಲೂಟಿ ನಡೆದಿದೆ ಎನ್ನುವ ಮಾಜಿ ಶಾಸಕ ನಾಡಗೌಡರು ಕಳೆದ 4 ನಾಲ್ಕು ವರ್ಷವಿಡೀ ಏನು ಮಾಡುತ್ತಿದ್ದರು? ಸುಳ್ಳು ಆರೋಪ ಮಾಡುವುದು ನಾಡಗೌಡರ ಜಾಯಮಾನ. ಶಾಸಕ ಹಂಪನಗೌಡರ ಅಭಿವೃದ್ಧಿ ಜನರ ಮನಸ್ಸಿನಲ್ಲಿದೆ. ಇದನ್ನು ಅವರು ಮನಗಾಣಬೇಕಿದೆ. ಅಭಿವೃದ್ಧಿ ಕುರಿತು ಮಾತನಾಡುವ ನಾಡಗೌಡರು ಬೇಕಾದರೆ
ಬಹಿರಂಗ ಚರ್ಚೆ ಬರಲಿ. ನಾವು ನಮ್ಮ ಶಾಸಕರಿಗೆ ಕರೆಯಿಸಿಕೊಳ್ಳುತ್ತೇವೆ ಎಂದು ಮಾಜಿ ಶಾಸಕರಿಗೆ ಬಹಿರಂಗ ಚರ್ಚೆ ಆಹ್ವಾನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.