ಟೆಂಪಲ್‌ ಗೂಗಲ್‌


Team Udayavani, Jul 8, 2017, 4:48 PM IST

09.jpg

   ಕರ್ನಾಟಕದಲ್ಲಿ ನಾವು ನೀವು ನೋಡಿದ, ನೋಡದೇ ಇರುವ ಅದೆಷ್ಟೋ ದೇವಾಲಯಗಳ ಇತಿಹಾಸ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರಗಳ ಮಾಹಿತಿ ಇವರ ತಲೆಯಲ್ಲಿ ಇದೆ.  ದೇವಾಲಯದ ಹೆಸರು ಹೇಳಿದರೆ ಸಾಕು, ಊರು, ಶಾಸನ, ಯಾರ ಕಾಲದ್ದು, ಯಾವ ಶೈಲಿಯ ಶಿಲ್ಪ ಕಲೆ ಎಲ್ಲವನ್ನು ಒಂದೇ ಬೀಸಿಗೆ ಹೇಳಿ ಮುಗಿಸುತ್ತಾರೆ.  ಇಂದಿಗೂ ಬಿಡುವು ಸಿಕ್ಕಾಗೆಲ್ಲ ದೇವಾಲಯಗಳನ್ನು ಎಡತಾಕದೇ ಇರಲಾರರು. ಅಂದಹಾಗೇ, ಇವರು ಹೆಸರು ಚಕ್ರಪಾಣಿ.  ಹೆಸರಲ್ಲೇ ಚಕ್ರವಿದೆ.  ಇವರ ಮಾತು ಕೇಳಿದವರಿಗೆ ಇವರ ಕಾಲಲ್ಲೂ ಚಕ್ರ ಇದೆಯಾ ಅನ್ನೋ ಅನುಮಾನ ಬರದೇ ಇರದು.  ಏಕೆಂದರೆ ಎರಡು ದಶಕಗಳಿಂದ ಇವರು ಲಕ್ಷಾಂತರ ಕಿ.ಮೀ ಸುತ್ತು ಹಾಕಿದ್ದಾರೆ.  ಹಾಕುತ್ತಲೇ ಇದ್ದಾರೆ. 

                                                                                                 
“ಇಲ್ಲಿ ನೋಡಿ, ಇದು ಹಾವೇರಿ ಜಿಲ್ಲೆಯಲ್ಲಿರುವ ಗಳಗನಾಥ ದೇವಾಲಯ. ಇದು ವರದಾ ನದಿ ಪಕ್ಕದಲ್ಲಿದೆ. ಇಡೀ ದೇವಾಲಯ ಬಳಪದ ಕಲ್ಲಿನದು.  ನಾವು ಈಗ ಸುನಾಮಿ, ಪ್ರವಾಹ ಅಂತ ಭಯ ಬೀಳುತ್ತೇವೆ. ಆದರೆ ಆಕಾಲದಲ್ಲೇ ಪ್ರವಾಹದಿಂದ ದೇವಾಲಯವನ್ನು ತಪ್ಪಿಸಲು ಗೋಪುರದ ಪಕ್ಕ ಇನ್ನೊಂದು ಗೋಪುರದ ರೀತಿಯನ್ನು ನಿರ್ಮಾಣ ಮಾಡಿದ್ದಾರೆ. ಸ್ಲೋಪಾಗಿದೆ. ಎಷ್ಟೇ ನೀರು ಬಂದರೂ  ದೇವಾಲಯದ ಒಳಗೆ ನುಗ್ಗೊàಲ್ಲ’  ಕೆಂಗೇರಿ ಚಕ್ರಪಾಣಿ ಫೋಟೋ ಮುಂದಿಟ್ಟು ವಿವರಿಸಿದರು. 

 “ನಿಮಗೆ ಶಿಲಾಬಾಲಿಕೆಯರು ಅಂದರೆ ಯಾರು ಜ್ಞಾಪಕಕ್ಕೆ ಬರುತ್ತಾರೆ ಹೇಳಿ?'” ಹೊಯ್ಸಳರು’ “ನಿಜ, ಎಲ್ಲರೂ ನಂಬಿಕೊಂಡಿರುವುದು ಹೀಗೆ. ಆದರೆ ಕಲ್ಯಾಣದ ಚಾಲುಕ್ಯರು ಮೊದಲು ಶಿಲಾಬಾಲಿಕೆಯರ ಕೆತ್ತನೆ ಶುರು ಮಾಡಿದ್ದು.  ಹೂವಿನ ಹಡಗಲಿಯಲ್ಲಿರುವ ಕುರುವತ್ತಿಯಲ್ಲಿ ಇದನ್ನು ಕಾಣಬಹುದು’ ಎಂದರು ಚಕ್ರಪಾಣಿ.  ತಮ್ಮ ಮಾತಿಗೆ ಸಾಕ್ಷಿ ಎಂಬಂತೆ ದೇವಾಲಯದ ದೊಡ್ಡ ಫೋಟೋ ತೆಗೆದಿಟ್ಟರು.  

 ಇವಿಷ್ಟೇ ಅಲ್ಲ, “ನಮ್ಮ ರಾಜ್ಯದಲ್ಲಿರೋ ಪ್ರಾಚೀನ ಗಣಪ ಯಾವುದು?’ ಇಡಗುಂಜಿ, ಗೋಕರ್ಣ “ಪ್ರಾಚೀನ ನರಸಿಂಹ ಎಲ್ಲಿದೆ?’ ಹಲಸಿಯಲ್ಲಿದೆ.  “ಶಿವಲಿಂಗ ಎಲ್ಲಿದೆ’ ತಾಳಗುಪ್ಪದ ಪ್ರಣವೇಶ್ವರ. ಇದು ಶಾತಕರ್ಣಿಗಳಿಂದ ಪೂಜಿಸಲ್ಪಟ್ಟಿದೆ. “ಔತ್ತರೇಯ ಶೈಲಿಯ ವಿಗ್ರಹಗಳು ಎಲ್ಲೆಲ್ಲಿವೆ?’ಹಾನಗಲ್‌ನ ಗಣೇಶ್‌ ದೇವಾಲಯ,  ಚನ್ನರಾಯಪ್ಪಟ್ಟಣ ತಾಲೂಕು ನುಗ್ಗೇನಹಳ್ಳಿಯ ಸದಾಶಿವ, ತುರವೇಕೆರೆಯ ಮೂಲೇ ಶಂಕರ..

 ಇವಿಷ್ಟು ಹೇಳಿ ಸುಮ್ಮನೆ ಕೂರಲಿಲ್ಲ ಚಕ್ರಪಾಣಿ.  “ಬೆಂಗಳೂರಿನ ಬಳೇಪೇಟೆ, ಅವೆನ್ಯೂ ರಸ್ತೆಯಲ್ಲಿ ಎಂತೆಂಥ ದೇವಾಲಯಗಳು ಇವೆ ಗೊತ್ತಾ? ‘ ಹೀಗೆನ್ನುತ್ತಾ  ಬೀರುವಿನಲ್ಲಿ ಸಪಾಟಾಗಿ ಮಲಗಿದ್ದ ಒಂದಷ್ಟು ಫೋಟೋಗಳನ್ನು ತೆಗೆದು ಮುಂದಿಟ್ಟರು.  ಅವುಗಳನ್ನು ಕಂಡು   ಮನಸ್ಸು ಅಬ್ಬಬ್ಟಾ ಅಂದಿತು. 

 ಕೆಂಗೇರಿ ಚಕ್ರಪಾಣಿ  ಇಡೀ ರಾಜ್ಯದ ದೇಗುಲಗಳ ಜಾತಕ, ಕುಂಡಲಿ ಹಾಕಿ ಇಟ್ಟಿದ್ದಾರೆ.  ಹೆಸರಲ್ಲಿ ಮಾತ್ರವಲ್ಲ ಅವರಿಗೆ ಕಾಲಲ್ಲೂ ಚಕ್ರವಿದೆ. ಸುಮಾರು ಎರಡು, ಮೂರು ದಶಕಗಳಿಂದ ಸಾವಿರಾರು ಕಿ.ಮೀ ಪಯಣಿಸಿ, ಕರ್ನಾಟಕದ ದೇವಾಲಯಗಳ ಫೋಟೋ ತೆಗೆಯುವುದು, ಅದರ ಇತಿಹಾಸ ತಿಳಿಯುವುದು, ಅಲ್ಲಿರುವ ಶಾಸನಗಳನ್ನು ಓದುವುದು ಮಾಡುತ್ತಲೇ ಬಂದಿದ್ದಾರೆ. ಇಷ್ಟೇ ಅಲ್ಲ, ಚಕ್ರಪಾಣಿಯವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ- ಶಿಲ್ಪ ಶಾಸ್ತ್ರಗಳ ಅಧ್ಯಯನ ಮಾಡಿದ್ದಾರೆ.  ಈ ಮೂಲಕ ಪ್ರತಿ ದೇವಾಲಯ, ಮೂರ್ತಿಗಳು ಯಾವ ಕಾಲದಲ್ಲಿ ಶಿಲ್ಪಿತವಾಗಿದೆ, ಯಾವ ಶೈಲಿಯಲ್ಲಿದೆ? ಹೀಗೆ ಎಲ್ಲವನ್ನೂ ವೈಜ್ಞಾನಿಕವಾಗಿ ಆಳವಾಗಿ ತಿಳಿದಿದ್ದಾರೆ. 

 ಕರ್ನಾಟಕದ ಬಹುತೇಕ ದೇವಾಲಯಗಳು ಇವರ ತಲೆಯಲ್ಲಿವೆ.  ಇವರ ಕಣ್ಣು ತಪ್ಪಿಸಿದ ದೇವಾಲಯಗಳು ಇಲ್ಲ ಎನ್ನಿಸುತ್ತದೆ.  ನೀವು  ಮಂಡ್ಯದ ಬೂದನೂರು ಅನ್ನಿ..

 “ಅಲ್ಲಿರುವುದು ಕಾಶಿ ವಿಶ್ವೇಶ್ವರ ಅನಂತ ಪದ್ಮನಾಭನ ದೇವಾಲಯ.   ಹೊಯ್ಸಳರ ಕಾಲದ್ದು. ಮೂರನೇ ನರಸಿಂಹ ಕಟ್ಟಿಸಿದ್ದು. ಅಲ್ಲಿಗೆ ಹೋದರೆ ದೇವಾಲಯದ ಪ್ರಾಂಗಣದಲ್ಲೇ ಇರುವ ಮುದ್ದಾದ ನಂದಿ ನೋಡೋಕೆ ಮರೆಯಬೇಡಿ’ ಅನ್ನದೇ ಇದ್ದರೆ ಕೇಳಿ.

ಹೀಗೆ ಚಕ್ರಪಾಣಿ ನೀರು ಕುಡಿದಂತೆ ದೇವಾಲಯಗಳ ಹಿನ್ನೆಲೆ, ಮೂರ್ತಿಗಳ ಶಿಲ್ಪಶಾಸ್ತ್ರಗಳನ್ನು ವಿವರಿಸುತ್ತಾ ಹೋಗುತ್ತಾರೆ. ಇವರೊಂಥರಾ ಟೆಂಪಲ್‌ ಗೂಗಲ್‌ ಇದ್ದಾಗೆ. ಚಕ್ರಪಾಣಿ ಅವರಿಗೆ ಫೋಟೋಗ್ರಫಿ ಹಸ್ತಗತ.   ಫೋಟೋಗ್ರಫಿ ಅಂದರೆ ನೇಚರ್‌, ಕ್ಯಾಂಡಿಡ್‌, ವೈಲ್ಡ್‌ ಲೈಫ್  ಮಾತ್ರವಲ್ಲ.   ದೇವಾಲಯ, ಮೂರ್ತಿ ಶಿಲ್ಪಗಳ ಫೋಟೋಗ್ರಫಿಯೂ ಉಂಟು ಅಂತ ಎಲ್ಲರಿಗೂ ತೋರಿಸಿದವರು ಇವರು. 

ಈ ದೇವರ ಹಿಂದೆ ಬೀಳ್ಳೋ ಹವ್ಯಾಸ ಚಕ್ರಪಾಣಿಯವರಿಗೆ ಶುರುವಾಗಿದ್ದೇ ವಿಚಿತ್ರ.   ಇವರು ಪ್ರಾಚೀನ ಶಾಸನಗಳ ಅಧ್ಯಯನ ಡಿಪ್ಲೊಮೊವನ್ನು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪೂರೈಸಿದ್ದಾರೆ.  ಅದರಲ್ಲಿ ರ್‍ಯಾಂಕ್‌ ಕೂಡ ಪಡೆದಿದ್ದಾರೆ. ಈ ಸಂದರ್ಭದಲ್ಲಿ ನಾಡಿನ ಹಲವು ದೇವಾಲಯಗಳಿಗೆ ಭೇಟಿ ಕೊಡುವ, ಶಾಸನ ಓದುವ ಕೆಲಸ ಮಾಡಬೇಕಾಯಿತು.  ಅಧ್ಯಯನ ಮುಗಿದ ನಂತರವೂ ಚಕ್ರಪಾಣಿ  ಇದನ್ನು ಹವ್ಯಾಸವಾಗಿ ಮಾಡಿಕೊಂಡರು.  

 ಅಷ್ಟರಲ್ಲಿ ಕೆಂಗೇರಿಯ ರಾಜು ಸ್ಟುಡಿಯೋ ಮಾಲೀಕ ಮುನಿ ಆಂಜನಪ್ಪರ ಸಹವಾಸದಿಂದ ಕೆಮರಾ ಹುಚ್ಚು ಅಂಟಿತು. ಮುಂದೇನು? ಕೆಮರಾ ಹಿಡಿದು ದೇವಾಲಯಗಳನ್ನು ಸುತ್ತಲು ಆರಂಭಿಸಿದರು. ಈಗ ಹೆಚ್ಚು ಕಮ್ಮಿ ಈ ಹವ್ಯಾಸಕ್ಕೆ ಎರಡು ದಶಕ ದಾಟಿದೆ; ಸಾವಿರಾರು ದೇವಾಲಯಗಳನ್ನು ಸುತ್ತಿದ ಅನುಭವ ಇವರ ಕಾಲಿಗಿದೆ. 

 ಚಕ್ರಪಾಣಿಯವರು ವೃತ್ತಿಯಲ್ಲಿ ಬೆಂಗಳೂರಿನ ವಿಜಯನಗರದ ಬಿಎಸ್‌ಎನ್‌ಎಲ್‌ನಲ್ಲಿ ಅಸಿಸ್ಟೆಂಟ್‌ ಎಂಜಿನಿಯರ್‌.  ಸಂಬಳದ ಒಂದಷ್ಟು “ಕರೆನ್ಸಿ ‘ಯನ್ನು ದೇವಾಲಯ ಸುತ್ತುವುದಕ್ಕೆ ಎಂದೇ ಎತ್ತಿಡುತ್ತಾರೆ. 

 “ಕೆಲಸಕ್ಕೆ ಸೇರಿದ ಆರಂಭದಲ್ಲಿ ಮನೆಗೆ ಸಂಬಳ ಕೊಡುತ್ತಿರಲಿಲ್ಲ. ನಮ್ಮ ಅಪ್ಪ-ಅಮ್ಮ ಅದು ಹೇಗೋ ಮನೆ ತೂಗಿಸಿಕೊಂಡು ಹೋಗುತ್ತಿದ್ದರು. ಮದುವೆ ಆಗಿ ಅದೆಷ್ಟೋ ವರ್ಷಗಳ ನಂತರ- ಮನೆ ಕಡೆ ಸ್ವಲ್ಪ ನೋಡಪ್ಪಾ ಅಂದರು-‘ ಚಕ್ರಪಾಣಿ ಈಗಲೂ ತಮ್ಮ ಹುಚ್ಚಿನ ಬಗ್ಗೆ ಹಿಗ್ಗಿನಿಂದ ಹೇಳಿಕೊಳ್ಳುತ್ತಾರೆ.  ಚಕ್ರಪಾಣಿಯವರ ಹವ್ಯಾಸ ಕೆಲಸಕ್ಕೆ ಅಡ್ಡಿಯಾಗಿಲ್ಲ. ಇವರು ದೇಗುಲಗಳ ದಾರಿ ಹಿಡಿಯುವುದು  ಶನಿವಾರ-ಭಾನುವಾರ ಅಥವಾ ಸರ್ಕಾರಿ ರಜಾ ದಿನಗಳಂದು. ಈ ಕಾರಣಕ್ಕೆ ರಜಾದಿನಗಳಂದು ಚಕ್ರಪಾಣಿ ಮನೆಯಲ್ಲಿ ಇರುವುದಿಲ್ಲ.  ಯಾವುದೋ ದೇವಾಲಯದಲ್ಲಿ ಕೂತು ಇತಿಹಾಸವನ್ನು ಕೆದಕುತ್ತಿರುತ್ತಾರೆ. 

ಎರಡು ಸಾವಿರಕ್ಕೂ ಹೆಚ್ಚು ಫೋಟೋ
ಕರ್ನಾಟಕದಲ್ಲಿ ದೇವಾಲಯಗಳು ಎಲ್ಲೇ ಅಡಗಿಕೊಂಡರಲಿ, ಅಲ್ಲಿಗೆ ಚಕ್ರಪಾಣಿ ಹಾಜರ್‌.  ದೇವರು ಪಾತಾಳದಲ್ಲಿ ಅಡಗಿದ್ದರೂ ಈತ ಅವನನ್ನು ಬಿಡಲೊಲ್ಲರು ಎನಿಸುತ್ತದೆ.  ಇವರ ಬಳಿ ಇರುವ ಎರಡು ಸಾವಿರಕ್ಕೂ ಹೆಚ್ಚು ದೇವಾಲಯ, ದೇವರ ಫೋಟೋಗಳನ್ನು ನೋಡಿದರೆ ಈ ಅನುಮಾನ ಮೂಡದೇ ಇರದು. ಮನೆಯ ತುಂಬ ಬರೀ ದೇವಾಲಯದ ಫೋಟೊಗಳೇ. ಇದಕ್ಕಾಗಿ ಪ್ರತ್ಯೇಕ ರೂಮು ಕೂಡ ಇದೆ. 

 ಚಕ್ರಪಾಣಿ ಕೆಮರಾ ಹಿಡಿದು ನೇರ ದೇವಾಲಯಕ್ಕೆ ನುಗ್ಗಲೊಲ್ಲರು. ಬದಲಿಗೆ ಶಾಸ್ತ್ರಗ್ರಂಥಗಳ, ಶಿಲ್ಪಶಾಸ್ತ್ರಗಳ ಅಧ್ಯಯನ ಮಾಡಿಕೊಂಡೇ ಹೊರಡುವುದು.  ಇದಕ್ಕಾಗಿ ಮನೆಯ ಮಹಡಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಭಂಡಾರವನ್ನೇ ಇಟ್ಟುಕೊಂಡಿದ್ದಾರೆ. ಇವರು ತೆಗೆದಿರುವ  ಛಾಯಾಚಿತ್ರಗಳ ಅಡಿಟಿಪ್ಪಣಿಯಲ್ಲಿ ದೇವರ ಹೆಸರು, ಯಾವ ಕಾಲದ್ದು, ಯಾವ ಶೈಲಿಯ ಶಿಲ್ಪ ಇವಿಷ್ಟನ್ನೂ ನಮೂದು ಮಾಡಿದ್ದಾರೆ. ಅದಕ್ಕೂ ಮೊದಲು ಇತಿಹಾಸದ ಪುಸ್ತಕಗಳನ್ನು ತೆರೆದು, ಅಧ್ಯಯನ ನಡೆಸಿ ಈಗಿರುವ ದೇಗುಲಕ್ಕೂ, ಪುಸ್ತಕದಲ್ಲಿ ನಮೂದಾಗಿರುವುದಕ್ಕೂ ತಾಳೆ ಹಾಕುತ್ತಾರೆ. 

 “ನನ್ನ ಉದ್ದೇಶ ಪ್ರವಾಸ ಮಾಡಿ, ಮಜಾ ಮಾಡಬೇಕು ಅಂತಲ್ಲ. ನಮ್ಮಲ್ಲಿರುವ ಎಷ್ಟೋ ದೇವಾಲಯಗಳ ಬಗ್ಗೆ ಜನಕ್ಕೆ ಗೊತ್ತಿಲ್ಲ. ಅದನ್ನು ತಿಳಿಸುವುದು ನನ್ನ ಪ್ರವಾಸದ ಮೂಲ ಉದ್ದೇಶ’ ಎನ್ನುತ್ತಾರೆ ಚಕ್ರಪಾಣಿ.  ಈ ಕಾರಣಕ್ಕಾಗಿ ದೇಗುಲಗಳ ದಾರಿ ಅಂತ ಮೂರು ಸರಣಿಯಲ್ಲಿ ಪುಸ್ತಕ ಮಾಡಿದ್ದಾರೆ.  ಇದರಲ್ಲಿ ಕರ್ನಾಟಕದ ದೇವಾಲಯಗಳ ಪರಿಚಯ, ಅಲ್ಲಿಗೆ ತಲುಪುವ ಬಗೆ, ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು- ಇವಿಷ್ಟೂ ಮಾಹಿತಿಗಳು ಸಿಗುವುದರಿಂದ ಈ ಪುಸ್ತಕಗಳು ಒಂದರ್ಥದಲ್ಲಿ ಪ್ರವಾಸಿಗರ ಕೈಪಿಡಿಯೇ ಆಗಿದೆ. 

“ಸಂಗೀತ ವಾದ್ಯಗಳಿಗೆ ಒಂದು ಸಾವಿರ ವರ್ಷದ ಇತಿಹಾಸವಿದೆ. ಇದು ತಿಳಿದದ್ದು ಕೂಡ ಶಿಲ್ಪಗಳಿಂದಲೇ. ಆ ಕಾಲದಲ್ಲಿ ರುದ್ರವೀಣೆ, ಮೃದಂಗವಿತ್ತು. ಆಗಿನ ವಾದ್ಯಗಳಿಗೂ, ಈಗಿನ ವಾದ್ಯಗಳಿಗೂ ಅಂತ ವ್ಯತ್ಯಾಸವೇನೂ ಇಲ್ಲ ನೋಡಿ’ ಅಂತ ಚಾಮರಾಜನಗರದ ಹೊಳೆಆಲೂರಿನ ಅರಕೇಶ್ವರ ದೇವಾಲಯದ ಕಂಬದ ಮೇಲೆ ವಾದ್ಯ ನುಡಿಸುತ್ತಿರುವವರ ಗುಂಪನ್ನು ತೋರಿಸಿದರು.

 ” ಗುಲ್ಪರ್ಗದ ಸನ್ನತಿಯ ಕಣಿಗನಹಳ್ಳಿಯಲ್ಲಿ ಅಶೋಕ ಚಕ್ರವರ್ತಿಯ ವಿಗ್ರಹ ಉತVನನವಾಗಿದೆ. ಅದರ ಫೋಟೋ ತೆಗೆಯಲು ಮಾತ್ರ ಆಗಲಿಲ್ಲ’ ಚಕ್ರಪಾಣಿ ಅದೇನೋ ಅಮೂಲ್ಯ ಆಸ್ತಿ ಕಳೆದುಕೊಂಡವರಂತೆ ಪೇಚಾಡಿದರು. 

 ಎದುರಿಗೆ ಫೋಟೋದಲ್ಲಿ ಇವರಿಗೆ ಸನ್ಮಾನ ಮಾಡುತ್ತಿದ್ದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಇವರ ಪೇಚಾಟ ಕಂಡು ನಗುತ್ತಿದ್ದಂತೆ ಭಾಸವಾಯಿತು.  

ಬದಲಾದ ಶೈಲಿ ಮತ್ತು ದೇವರು
 ಕರ್ನಾಟಕದ ಶಿಲ್ಪಗಳಲ್ಲಿ 3 ಶೈಲಿಗಳಿವೆ. ದ್ರಾವಿಡ, ವೇಸರ, ನಾಗರ ಶೈಲಿ ಅಂತ. ನಾಗರ ಶೈಲಿಯಲ್ಲಿ ಕದಂಬನಾಗರ, ರೇಖಾನಗರ ಅನ್ನೋ ಎರಡು ವಿಧ ಇದೆ.   ನಮ್ಮಲ್ಲಿ ಹೆಚ್ಚಾಗಿರುವುದು ವೇಸರ ಶೈಲಿ.  ಇದನ್ನು ಕಲ್ಯಾಣದ ಚಾಲುಕ್ಯರು ಮತ್ತು  ಹೊಯ್ಸಳರು ಬಳಸುತ್ತಿದ್ದರು.  ನಮ್ಮ ದೇವಾಲಯಗಳಲ್ಲಿರುವ ಮೂರ್ತಿಗಳನ್ನು ಗಮನಿಸಿದರೆ ಬದಲಾದ ದೇವರ ಅಭಿವ್ಯಕ್ತಿ ಕಾಣುತ್ತದೆ. ಇದರಲ್ಲೇ ಕಾಲಘಟ್ಟಗಳನ್ನು ಹುಡುಕಬಹುದಂತೆ. ಪ್ರಮುಖವಾಗಿ ಕದಂಬರು, ಚಾಲುಕ್ಯರು, ರಾಷ್ಟ್ರಕೂಟ-ಗಂಗರು ನಳಂಬರು,  ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಒಡೆಯರ್‌ ಕಾಲ… ಹೀಗೆ ವಿಭಾಗಿಸಿಕೊಳ್ಳಬಹುದು. 4-5ನೇ ಶತಮಾನದ ದೇವರುಗಳು ಅಂದರೆ ಅದು ಕದಂಬರ ಕಾಲ. ಉದಾಹರಣೆಗೆ ನಮ್ಮ ಗೋಕರ್ಣದ ಮಹಾಬಲೇಶ್ವರ, ಇಡಗುಂಜಿ ಗಣಪ, ಆನೆಗುಂದಿ ಇವು. ಈ ಮೂರ್ತಿಗಳು ಆಡಂಬರವಾಗಿಲ್ಲ. ಸ್ವಲ್ಪ ಕುಬjವಾಗಿವೆ. ನೋಡುವುದಕ್ಕೆ ಬಹಳ ಲಕ್ಷಣವಾಗಿವೆ.  ಮೂರ್ತಿಗಳಿಗೆ ಅಲಂಕಾರದ ಕೆತ್ತನೆ ಶುರುಮಾಡಿದ್ದು ಕಲ್ಯಾಣದ ಚಾಲುಕ್ಯರು.  ಹೊಯ್ಸಳರು ಇದನ್ನು ವೈಭವೀಕರಿಸಿದರು. ವಿಜಯನಗರ ಅರಸರ ಕಾಲದಲ್ಲಿ ದೇವರ ಮೂರ್ತಿಗಳ ಗಾತ್ರ ದೊಡ್ಡದಾಗುತ್ತಾ ಹೋಯಿತು. ಜೊತೆಗೆ ಮುಖಮಂಟಪ, ಕಲ್ಯಾಣ ಮಂಟಪ, ರಂಗ ಮಂಟಪ ಕಟ್ಟುವ ಮೂಲಕ ದೇವಾಲಯ ವಿಸ್ತರಣೆ ಮಾಡಿದರು. 

 ” ಕದಂಬರು, ಚಾಲುಕ್ಯರು ಹಾಗೂ ವಿಜಯನಗರ ಸಾಮ್ರಾಜ್ಯದವರು ಗ್ರಾನೈಟ್‌ (ಕಡುಶಿಲೆ)ಅನ್ನು ಶಿಲ್ಪಗಳಿಗೆ ಬಳಸುತ್ತಿದ್ದರು.  ಹೊಯ್ಸಳರು, ಚಾಲುಕ್ಯರು ಹಾಗೂ ಮೈಸೂರು ಒಡೆಯರ ಕಾಲದಲ್ಲಿ ಬಳಪದ ಕಲ್ಲು (ಮೆದುಶಿಲೆ)ಯನ್ನು ಬಳಸುತ್ತಿದ್ದರು. ಮೈಸೂರು ಒಡೆಯರ್‌ ಕಾಲದಲ್ಲೇ ಗಾರೆ ಶಿಲ್ಪಗಳು ಶುರುವಾದದ್ದು. ಇವನ್ನೆಲ್ಲಾ ಬಹಳ ಸೂಕ್ಷ್ಮವಾಗಿ ನಾವು ಗಮನಿಸಬೇಕು’ ಎಂದು ವಿವರಿಸುತ್ತಾರೆ ಚಕ್ರಪಾಣಿ. 

ಜೈನ ಮೂರ್ತಿಗಳು ಇವೆ 

 ಚಕ್ರಪಾಣಿ ಕೇವಲ ಹಿಂದೂ ದೇವಾಲಯಗಳಲ್ಲದೇ ಜೈನ ಬಸದಿಯ ಮಾಹಿತಿ, ಛಾಯಾಚಿತ್ರಗಳನ್ನೂ ತೆಗೆದಿದ್ದಾರೆ. ಅವರ ಬಳಿ 300ಕ್ಕೂ ಹೆಚ್ಚು ಜಿನ ಮೂರ್ತಿಗಳ ಚಿತ್ರಗಳಿವೆ.  ಕರ್ನಾಟಕದಲ್ಲಿರುವ ಬಾಹುಬಲಿ, ಬೆಳಗಾವಿ, ಬೀದರ್‌, ಹಾಸನದ ಜೈನ ಶಿಲ್ಪಗಳ ಅಪರೂಪದ ಛಾಯಾಚಿತ್ರಗಳಿವೆ.  2006ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಅಷ್ಟೂ ಛಾಯಾಚಿತ್ರಗಳನ್ನು ತೆಗೆಯುವ ಅವಕಾಶ ಇವರ ಪಾಲಿಗೆ ದೊರೆತಿತ್ತು.  ತಾಳಗುಪ್ಪದ ಪ್ರಣವೇಶ್ವರ ಅತಿ ಪ್ರಾಚೀನ ಶಿವಲಿಂಗ, ಶ್ರೀರಂಗಪಟ್ಟಣದ ನೆಲಮನೆಯ ಧಾರಾಲಿಂಗ 16ನೇ ಶತಮಾನದ್ದು, ಅನುಗೊಂಡನಹಳ್ಳಿಯಲ್ಲಿರುವ 9 ಅಡಿ ಎತ್ತರದ ಲಿಂಗ, ದೇವನಹಳ್ಳಿಯ ಬೊಮ್ಮವಾರದ 9 ಅಡಿ ಅಗಲದ್ದು.   ಚಾಮರಾಜನಗರ ಉಮ್ಮತ್ತೂರಿನಲ್ಲಿ ಗಂಗೆಯನ್ನು ಹೊಂದಿರುವ ಶಿವನಿದ್ದಾನೆ. ಹೀಗೆ ಸುಮಾರು 250 ಶಿವನ, 300 ಗಣಪತಿಯ, ವೈವಿಧ್ಯಮಯ ನರಸಿಂಹ ದೇವರ ಐತಿಹಾಸಿಕ ಛಾಯಚಿತ್ರಗಳು ಇವರ ತಿಜೋರಿಯಲ್ಲಿವೆ.  

 ಕಾಯಲೇ ಬೇಕು
 ಚಕ್ರಪಾಣಿ ದೇವಾಲಯಕ್ಕೆ ಹೋಗುವವು ಮೊದಲು ಅದರ ಇತಿಹಾಸ ತಿಳಿದುಕೊಳ್ಳುತ್ತಾರೆ. ಅದರ ಆಧಾರದ ಮೇಲೆ ಫೋಟೋ ತೆಗೆಯುವುದರಿಂದ ಛಾಯಾಚಿತ್ರದಲ್ಲಿ ಡಿಟೇಲಿಂಗ್‌ ಇರುತ್ತದೆ.  ಹಾಗಂತ,  ಹೋದಾಕ್ಷಣ ಫೋಟೋ ತೆಗೆಯೋಕೆ ಆಗೋಲ್ಲ. ಲೈಟಿಂಗ್‌ ಪೂರಕವಾಗಿರಬೇಕು.  ಪೂರಕವಾಗಿಲ್ಲ ಎಂದರೆ ಎರಡು, ಮೂರು ದಿನ ಕಾಯುವುದೂ ಉಂಟಂತೆ. ಚಕ್ರಪಾಣಿ ದೇವಾಲಯದ ಹೆಸರಿನ ಜಾಡು ಹಿಡಿದು, ಆ ಸ್ಥಳಕ್ಕೆ ಹೋಗಿ ಐತಿಹ್ಯ ತಿಳಿಯುತ್ತಾರೆ. ಮನೆಗೆ ಬಂದು ಅದರ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆ, ಶಾಸನಗಳು ಏನು ಹೇಳುತ್ತವೆ, ಯಾವ ಶೈಲಿಯ ಕೆತ್ತನೆಗಳಿವೆ ಇವನ್ನೆಲ್ಲ ಅಧ್ಯಯನ ಮಾಡಿ ದಾಖಲಿಸುತ್ತಾರೆ. 

 ಇವರದು ಮಾದರಿ ಪ್ರವಾಸ 
ಪ್ರವಾಸ ಅನ್ನೋದು ದುಬಾರಿ ಬಾಬ್ತು. ಹಣ ಮಾಡುವ ಬ್ಯುಸಿನೆಸ್‌ ಕೂಡ ಆಗಿರುವ ಈ ಕಾಲದಲ್ಲಿ ಚಕ್ರಪಾಣಿ ಪ್ರವಾಸವನ್ನು ಅಧ್ಯಯನದ ರೀತಿ ಮಾಡುತ್ತಿದ್ದಾರೆ. ಹಣಕ್ಕಾಗಿ ಅಲ್ಲ. ಜ್ಞಾನಕ್ಕಾಗಿ. ಇದಕ್ಕಾಗಿಯೇ ಗಣಪತಿ ಮ. ಭಟ್‌ ಅವ ಅಧ್ಯಕ್ಷತೆಯಲ್ಲಿ ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗ ಕಟ್ಟಿಕೊಂಡಿದ್ದಾರೆ.  ಈ ಮೂಲಕ ವರ್ಷಕ್ಕೆ 25-30 ಪ್ರವಾಸಗಳನ್ನು ಏರ್ಪಡಿಸುತ್ತಾರೆ. ಎಲ್ಲ ಖರ್ಚನ್ನು ಸದಸ್ಯರಿಗೆ ತಲಾ ಇಷ್ಟು ಅಂತ ಹಂಚಿಕೊಂಡು ಪ್ರವಾಸ ಕೈ ಗೊಳ್ಳುತ್ತಾರೆ. ಸುಮಾರು ಒಂದೂವರೆ ದಶಕಗಳಿಂದ ಈ ರೀತಿ ಪ್ರವಾಸ ಏರ್ಪಡಿಸುತ್ತಿದ್ದಾರೆ. ವಿಶೇಷ ಎಂದರೆ ಪ್ರವಾಸಕ್ಕೆ ಮೊದಲು ವೀಕ್ಷಿಸುವ ದೇವಾಲಯದ ಮಾಹಿತಿ, ಇತಿಹಾಸ ಜೊತೆಗೆ ಪ್ರವಾಸಕ್ಕೆ ಬರುವವರು ಏನೇನು ತೆಗೆದು ಕೊಂಡು ಬರಬೇಕು, ಎಂಥ ಶಿಸ್ತನ್ನು ಪಾಲಿಸಬೇಕು, ಪಾಲಿಸಬಾರದು ಇವುಗಳನ್ನು ಒಳಗೊಂಡ ಪಾಂಪ್ಲೆಟ್‌ ಅನ್ನು ಪ್ರವಾಸಿಗರ ಕೈಗೆ ಇಡುತ್ತಾರೆ. ಇದು ಚಕ್ರಪಾಣಿಯವರ ಕಾಳಜಿಯ ಸಂಕೇತ ಕೂಡ ಆಗಿದೆ. 

ಮಾಹಿತಿಗೆ-9448386886

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

7-bus

Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.