2 ದ್ವಿಶತಕದ ಜತೆಯಾಟ: ಡಿಕ್ವೆಲ್ಲ-ಗುಣತಿಲಕ ವಿಶ್ವದಾಖಲೆ
Team Udayavani, Jul 9, 2017, 3:45 AM IST
ಹಂಬಂತೋಟ: ಸತತ ಎರಡು ಏಕದಿನ ಪಂದ್ಯದಲ್ಲಿ ಮೊದಲನೇ ವಿಕೆಟ್‌ಗೆ ಶ್ರೀಲಂಕಾದ ನಿರೋಶನ್ ಡಿಕ್ವೆಲ್ಲ ಮತ್ತು ಧನುಷ್ಕ ಗುಣತಿಲಕ ದ್ವಿಶತಕದ ಜತೆಯಾಟ ನಡೆಸಿದ್ದಾರೆ. ಇದು ವಿಶ್ವದಾಖಲೆಯಾಗಿದೆ. ಜಿಂಬಾಬ್ವೆ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಈ ಜೋಡಿ 209 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದೆ. ಇದಕ್ಕೂ ಮುನ್ನ ಮೂರನೇ ಏಕದಿನ ಪಂದ್ಯದಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 229 ರನ್ ಬಾರಿಸಿತ್ತು.
ಸರಣಿ ಸಮಗೊಳಿಸಿದ ಜಿಂಬಾಬ್ವೆ!: ನಾಲ್ಕನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ 4 ವಿಕೆಟ್ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿ 2-2ರಿಂದ ಸಮಬಲವಾಗಿದೆ. ಇನ್ನೊಂದು ಏಕದಿನ ಪಂದ್ಯ ಮಾತ್ರ ಬಾಕಿ ಇದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು 300 ರನ್ ಬಾರಿಸಿತ್ತು. ಲಂಕಾ ಪರ ನಿರೋಶನ್ ಡಿಕ್ವೆಲ್ಲ (116), ಧನುಷ್ಕ ಗುಣತಿಲಕ (87) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ನಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಜಿಂಬಾಬ್ವೆಗೆ 31 ಓವರ್‌ನಲ್ಲಿ 219 ರನ್ ಟಾರ್ಗೆಟ್ ನೀಡಲಾಗಿತ್ತು. ಜಿಂಬಾಬ್ವೆ 29.2 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಜಿಂಬಾಬ್ವೆ ಪರ ಕ್ರೆಜ್ ಏರ್ವಿನ್ (ಅಜೇಯ 69) ಅತಿ ಹೆಚ್ಚು ರನ್ ಬಾರಿಸಿದರು.
ಸ್ಕೋರ್: ಲಂಕಾ 50 ಓವರ್‌ಗೆ 300/6 (ನಿರೋಶನ್ ಡಿಕ್ವೆಲ್ಲ 116, ಧನುಷ್ಕ ಗುಣತಿಲಕ 87, ಮಾಲ್ಕಮ್ ವ್ಯಾಲರ್ 44ಕ್ಕೆ 2), ಜಿಂಬಾಬ್ವೆ 29.1 ಓವರ್‌ಗೆ 219 (ಕ್ರೆಜ್ ಎರ್ವಿನ್ 69, ಹಸರಂಗ 40ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.