ಸಿಸ್ಟರ್ ಆಫ್ ಚ್ಯಾರಿಟಿಯ ಧರ್ಮಭಗಿನಿ ಸಿ| ಬಾರ್ತಲೋಮಿಯಾ ಜನ್ಮಶತಾಬ್ದ
Team Udayavani, Jul 9, 2017, 1:50 AM IST
ಮಂಗಳೂರು: ಸಿಸ್ಟರ್ ಆಫ್ ಚ್ಯಾರಿಟಿಯ ಧರ್ಮಭಗಿನಿ ದಿ| ಸಿ| ಬಾರ್ತಲೋಮಿಯಾ ಅವರ ಜನ್ಮ ಶತಾಬ್ದವನ್ನು ನಗರದ ಕುಲಶೇಖರ ಸಮೀಪದ ಸರಿಪಲ್ಲ ಕಮ್ಯೂನಿಟಿ ಸೆಂಟರ್‌ನಲ್ಲಿ ಆಚರಿಸಲಾಯಿತು.
ಸರಿಪಲ್ಲ ಎ.ಬಿ.ನಗರದ “ಸಿಸ್ಟರ್ ಬಾರ್ತಲೋಮಿಯಾ ಜನ್ಮಶತಾಬ್ದಿ ಸಮಿತಿ’ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಜಪ್ಪು ಇನೆ#ಂಟ್ ಮೇರಿ ಕಾನ್ವೆಂಟ್‌ನ ಮುಖ್ಯಸ್ಥರಾದ ಸಿ| ಸಿಲ್ವಿಯಾ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ಕುಲಶೇಖರ ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರು ಫಾ| ವಿಕ್ಟರ್ ಮಚಾದೊ ಮುಖ್ಯ ಅತಿಥಿಯಾಗಿದ್ದರು. ಸಿ | ಬಾರ್ತಲೋಮಿಯಾ ಅವರು “ಪರರ ಸೇವೆಯೇ ಪರಮಾತ್ಮನ ಸೇವೆ’ಯನ್ನು ಧ್ಯೇಯವಾಗಿಸಿ ಕೊಂಡು ಬದುಕಿ ಆರ್ಥಿಕವಾಗಿ ಹಿಂದುಳಿದ ಒಂದು ಸಾವಿರಕ್ಕೂ ಮಿಕ್ಕಿ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನು ಕಟ್ಟಿಸಿಕೊಟ್ಟು ಮಾಡಿರುವ ಸಾಧನೆ ಇತರರಿಗೆ ಮಾದರಿಯಾಗಿದೆ. ಸರಿಪಲ್ಲವನ್ನು ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಗೌರವ ಅತಿಥಿಯಾಗಿದ್ದ ಸಿ| ಇವಾಂಜಿಲಿನ್ ಮಿನೇಜಸ್ ಅವರು ತನಗೆ ಸಿ| ಬಾರ್ತಲೋಮಿಯಾ ಅವರ ಜತೆ ಕೆಲಸ ಮಾಡಲು ಅವಕಾಶ ಲಭಿಸಿದ್ದನ್ನು ಸ್ಮರಿಸಿದರು. ದೇವರ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ, ಬಡವರ ಬಗ್ಗೆ ಪ್ರೀತಿ ಅವರಲ್ಲಿತ್ತು ಎಂದು ಹೇಳಿದರು.
ಇನ್ನೋರ್ವ ಗೌರವ ಅತಿಥಿ ವಿಕ್ಟರ್ ವಾಸ್ ಮಾತನಾಡಿ ಸಿ| ಬಾರ್ತ ಲೋಮಿಯಾ ಅವರು ಹಲ ವಾರು ಮಂದಿ ಜನರ ಜೀವನ ಪರಿವರ್ತ ನೆಗೆ ಕಾರಣರಾಗಿದ್ದಾರೆ ಎಂದರು.
ಸಮಿತಿ ಅಧ್ಯಕ್ಷ ಲುವಿಸ್ ರೊಸಾರಿಯೊ, ಇ. ಫೆರ್ನಾಂಡಿಸ್ ಉಪಸಿœತರಿದ್ದರು. ಮಹೇಶ್ ಚೌಟ ಸ್ವಾಗತಿಸಿದರು. ಐರಿನ್ ಡಿ’ಕುನ್ಹಾ ಅವರು ಸಿ| ಬಾರ್ತಲೋಮಿಯಾ ಅವರ ಜೀವನವನ್ನು ಪರಿಚಯಿಸಿದರು. ಸುನಿಲ್ ಜಯರಾಂ ವಂದಿಸಿದರು. ಗಂಗಾಧರ ಅವರು ಕಾರ್ಯಕ್ರಮು ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.