ನಾಸಾ ಟ್ವೀಟ್‌ನಲ್ಲಿ ಗುರುಪೂರ್ಣಿಮೆ
Team Udayavani, Jul 9, 2017, 2:50 AM IST
ಹೊಸದಿಲ್ಲಿ: ಪೂರ್ಣ ಚಂದ್ರನ ದರ್ಶನವಾಗುವ ಗುರು ಪೂರ್ಣಿಮೆಗೆ ಹಿಂದೂ ಪಂಚಾಂಗದಲ್ಲಿ ಮಹತ್ವದ ಸ್ಥಾನವಿದೆ. ಆಷಾಢ ಮಾಸದಲ್ಲಿ ಬರುವ ಈ ಗುರು ಪೂರ್ಣಿಮೆಯನ್ನು ಹಿಂದೂಗಳು ಹಬ್ಬದಂತೆ ಆಚರಿಸುತ್ತಾರೆ. ವಿಶೇಷವೆಂದರೆ ನಮ್ಮ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಗುರುಪೂರ್ಣಿಮೆ ಈಗ ಜಗತ್ಪÅಸಿದ್ಧವಾಗಿದೆ! ಇದಕ್ಕೆ ಕಾರಣ ನಾಸಾ ಎಂದರೆ ನೀವು ನಂಬಲೇಬೇಕು.
ಹೌದು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ತನ್ನ “ನಾಸಾ ಮೂನ್’ ಎಂಬ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೂರ್ಣ ಚಂದ್ರ ದರ್ಶನ ಮತ್ತದರ ಆಚರಣೆಗಳ ಕುರಿತು ಕುರಿತು ಒಂದು ಟ್ವೀಟ್ ಮಾಡಿದ್ದು, ಅದರಲ್ಲಿ “ಗುರು ಪೂರ್ಣಿಮೆ’ಗೆ ಮೊದಲ ಸ್ಥಾನ ನೀಡಿದೆ ಎಂಬುದು ವಿಶೇಷ. ಈ ವಾರಾಂತ್ಯ ಪೂರ್ಣ ಚಂದ್ರ ಕಾಣಿಸಿಕೊಳ್ಳಲಿದ್ದು ಆ ದಿನವನ್ನು ಜಗತ್ತಿನಾದ್ಯಂತ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. “ಈ ವಾರಾಂತ್ಯ ಪೂರ್ಣ ಚಂದಿರ ಕಾಣುವ ದಿನವನ್ನು ಗುರು ಪೂರ್ಣಿಮೆ, ಹಾಯ್ ಮೂನ್, ಮೀಡ್ ಮೂನ್, ರೈಪ್ ಕಾರ್ನ್ ಮೂನ್, ಬಕ್ ಮೂನ್ ಮತ್ತು ಥಂಡರ್ ಮೂನ್ ಎಂದು ಕರೆಯಲಾಗುತ್ತದೆ,’ ಎಂದು ನಾಸಾ ಮೂನ್ ಟ್ವೀಟ್ ಮಾಡಿದೆ. ಈ ಟ್ವೀಟನ್ನು 2 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದು, ಹಲವು ಭಾರತೀಯರು ಟ್ವೀಟ್‌ಗೆ ಪ್ರತಿಕ್ರಿಯಿಸಿ, ಗುರು ಪೂರ್ಣಿಮೆ ಹೆಸರು ನಮೂದಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಸಾಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.