ವಿದೇಶಿ ವಕೀಲರ ಬಗ್ಗೆ ಭಯ ಬೇಕಿಲ್ಲ: ಸಿಜೆಐ ಖೇಹರ್
Team Udayavani, Jul 9, 2017, 4:00 AM IST
ಹೊಸದಿಲ್ಲಿ: ವಿದೇಶಿ ವಕೀಲರಿಗೆ ಭಾರತದ ಕಾನೂನು ಕ್ಷೇತ್ರದಲ್ಲಿ ಅವಕಾಶ ನೀಡಬೇಕು. ಆಗ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ ಆಗುತ್ತದೆ. ವಿದೇಶಿ ವಕೀಲರ ಬಗ್ಗೆ ಭಾರತೀಯ ನ್ಯಾಯವಾದಿಗಳು ಭಯ ಪಡಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹೇಳಿದ್ದಾರೆ. ವಿದೇಶಿ ವಕೀಲರು ಭಾರತಕ್ಕೆ ಬಂದು ಅಭ್ಯಾಸ ಮಾಡುವುದನ್ನು ದೇಶದ ಬಹುತೇಕ ವಕೀಲರು ವಿರೋಧಿಸುತ್ತಿರುವ ಕಾರಣ, ಸುಮಾರು 20 ವರ್ಷಗಳಿಂದ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿಲ್ಲ. ಆದರೆ, ನಮ್ಮ ವಕೀಲರು ಜಗತ್ತಿನ ಯಾರಿಗೂ ಕಮ್ಮಿಯಿಲ್ಲ.
ಹಾಗಾಗಿ, ಯಾರೋ ಬಂದು ನಮ್ಮ ಉದ್ಯೋಗ ಕಸಿಯು ತ್ತಾರೆ ಎಂಬ ಭಯ ಬೇಕಾಗಿಲ್ಲ ಎಂದೂ ಹೇಳಿದ್ದಾರೆ ಸಿಜೆಐ. ವಿದೇಶಿ ವಕೀಲರಿಗೆ ಭಾರತದಲ್ಲಿ ಅವಕಾಶ ನೀಡಲೇ ಬಾರದು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ಮೊದಲು ಸುಪ್ರೀಂಕೋರ್ಟ್ನಲ್ಲಿ ವಾದಿಸಿತ್ತು. ಬಳಿಕ ತನ್ನ ನಿಲುವನ್ನು ಬದಲಿಸಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.