ಪಾಕ್ ಗುಂಡಿನ ದಾಳಿ: ಯೋಧ, ಪತ್ನಿ ಸಾವು
Team Udayavani, Jul 9, 2017, 3:50 AM IST
ಜಮ್ಮು/ಇಸ್ಲಾಮಾಬಾದ್: ಕೆಲವು ದಿನಗಳ ಕಾಲ ಸುಮ್ಮನಾಗಿದ್ದ ಪಾಕಿಸ್ಥಾನ ಶನಿವಾರ ಮತ್ತೆ ಕದನ ವಿರಾಮ ಉಲ್ಲಂ ಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಛ… ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಶನಿವಾರ ಪಾಕ್ ಪಡೆಯು ಸೈನಿಕರ ಮನೆಯ ಮೇಲೆಯೇ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಯೋಧ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ. ದಂಪತಿಯ ಮೂವರು ಮಕ್ಕಳು ಗಾಯಗೊಂಡಿದ್ದಾರೆ.
ಬೆಳಗ್ಗೆ 6.30ರಿಂದಲೇ ಪಾಕ್ ಸೇನೆಯು ನಿರಂತರವಾಗಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಸಿಡಿಸಿದ ಮೋರ್ಟಾರ್ ಶೆಲ್‌ವೊಂದು ಕರ್ಮಾರಾ ಪ್ರದೇಶದಲ್ಲಿರುವ ಯೋಧನ ಮನೆಯ ಮೇಲೆ ಬಿದ್ದಿದ್ದು, ರಜೆಯಲ್ಲಿದ್ದ ಯೋಧ ಮೊಹಮ್ಮದ್ ಶೌಕತ್, ಅವರ ಪತ್ನಿ ಸಫಿಯಾ ಬೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಹೆಣ್ಣು ಮಕ್ಕಳಾದ ಜೈದಾ ಕೌಸರ್(6), ರೊಬಿನಾ ಕೌಸರ್(12) ಮತ್ತು ನಾಜಿಯಾ ಬಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕ್ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ.
8 ಕಡೆಗಳಿಂದ ದಾಳಿ: ಪಾಕಿಸ್ಥಾನಿ ಪಡೆಯು ಎಲ್‌ಒಸಿಯುದ್ದಕ್ಕೂ 8 ಕಡೆಗಳಿಂದ ಸೇನಾ ಮುಂಚೂಣಿ ನೆಲೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಖಾಡಿ, ಕರ್ಮಾರಾ ಮತ್ತು ಗುಪೂÉರ್‌ನಲ್ಲೂ ಭಾರೀ ಶೆಲ್ ದಾಳಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಜೂನ್‌ನಿಂದೀಚೆಗೆ ಪಾಕಿಸ್ಥಾನವು 23 ಬಾರಿ ಕದನ ವಿರಾಮ ಉಲ್ಲಂ ಸಿದೆ. ಒಂದು ಬಾರಿ ಅಲ್ಲಿನ ಬ್ಯಾಟ್ ತಂಡ (ಗಡಿ ಕ್ರಿಯಾ ತಂಡ)ದಿಂದ ದಾಳಿ, ಎರಡು ಒಳನುಸುಳುವಿಕೆ ಯತ್ನಗಳು ನಡೆದಿವೆ. ಈ ವೇಳೆ ಮೂವರು ಯೋಧರ ಸಹಿತ ನಾಲ್ವರು ಮೃತಪಟ್ಟಿದ್ದರೆ, 12 ಮಂದಿ ಗಾಯಗೊಂಡಿದ್ದಾರೆ.
ಭಾರತ-ಪಾಕ್ ಪರಸ್ಪರ ಪ್ರತಿಭಟನೆ ಸಲ್ಲಿಕೆ
ಶನಿವಾರದ ಕದನ ವಿರಾಮ ಉಲ್ಲಂಘನೆ ಬಳಿಕ ಎಂದಿನಂತೆ ಭಾರತದತ್ತ ಬೊಟ್ಟು ಮಾಡಿರುವ ಪಾಕಿಸ್ಥಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಡೆಪ್ಯುಟಿ ಹೈಕಮಿಷನರ್ ಜೆ.ಪಿ. ಸಿಂಗ್ ಅವರನ್ನು ಕರೆಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದೆ. ಜತೆಗೆ, ಭಾರತ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವುದು ನಾವಲ್ಲ. ಪಾಕಿಸ್ಥಾನಿ ಪಡೆಗಳ ಗುಂಡಿನ ದಾಳಿಗೆ ಶನಿವಾರ ಇಬ್ಬರು ಮೃತಪಟ್ಟಿದ್ದಾರೆ. ಪ್ರಸಕ್ತ ವರ್ಷ ಪಾಕ್‌ನಿಂದ 223 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದ್ದು, 50 ನುಸುಳುವಿಕೆ ಯತ್ನ ನಡೆದಿದೆ ಎಂದು ಹೇಳುವ ಮೂಲಕ ಜೆ.ಪಿ. ಸಿಂಗ್ ಪಾಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ
Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.