ಶೈಕ್ಷಣಿಕ ನಗರಿಯಾಗಿ ಬ್ರಹ್ಮಾವರ..!

Team Udayavani, Jul 10, 2017, 3:55 AM IST

brahmavara.jpg

ಬ್ರಹ್ಮಾವರ: ಹಲವು ವಿಚಾರಗಳಿಂದ ಬ್ರಹ್ಮಾವರವು ಪ್ರಚಲಿತದಲ್ಲಿದ್ದರೂ ಇತ್ತೀಚಿನ ವರ್ಷಗಳಿಂದ ಶೈಕ್ಷಣಿಕ ನಗರಿಯಾಗಿ ಸದ್ದಿಲ್ಲದೆ ಮಾರ್ಪಾಡಾಗುತ್ತಿದೆ. ಕಾರಣ ಇಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು.

ಹೌದು..ಬ್ರಹ್ಮಾವರವನ್ನು ಶೈಕ್ಷಣಿಕ ಕಾಶಿ ಎಂದು ಕರೆದರೂ ತಪ್ಪಾಗದು. ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳು ಸೇರಿ ಸಹಸ್ರಾರು ಮಂದಿ ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಬ್ರಹ್ಮಾವರ ಹೋಬಳಿಯನ್ನು ಆಧರಿಸಿ ಅಂಕಿ ಅಂಶಗಳನ್ನು ನೋಡುವುದಾದರೆ ಇಲ್ಲಿರುವಷ್ಟು ಸಿಬಿಎಸ್‌ಇ ಶಾಲೆಗಳು, ಪದವಿ, ಪದವಿ ಪೂರ್ವ ಕಾಲೇಜುಗಳು, ತರಬೇತಿ ಸಂಸ್ಥೆಗಳು ಬೇರೆಲ್ಲೂ ಕಾಣಸಿಗದು.

ಸಿಬಿಎಸ್‌ಇ ಸ್ಕೂಲ್‌ಗ‌ಳು
ಕೇಂದ್ರೀಯ ಪಠ್ಯ ಕ್ರಮ(ಸಿಬಿಎಸ್‌ಇ) ಅನುಸರಿಸುತ್ತಿರುವ ಶಾಲೆಗಳತ್ತ ಮೊದಲು ಗಮನ ಹರಿಸಿದರೆ ಬ್ರಹ್ಮಾವರದ ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌, ಜಿ.ಎಂ. ವಿದ್ಯಾನಿಕೇತನ್‌, ಎಸ್‌.ಎಂ.ಎಸ್‌. ಆಂಗ್ಲ ಮಾಧ್ಯಮ ಶಾಲೆಗಳು ಮುಂಚೂಣಿಯಲ್ಲಿವೆ. ಲಿಟ್ಲರಾಕ್‌ ಸ್ಕೂಲ್‌ನಲ್ಲಿ ಸುಮಾರು 3,400 ವಿದ್ಯಾರ್ಥಿಗಳು, ಜಿ.ಎಂ. ವಿದ್ಯಾನಿಕೇತನ್‌ನಲ್ಲಿ 3,000 ವಿದ್ಯಾರ್ಥಿಗಳು, ಎಸ್‌.ಎಂ.ಎಸ್‌.ನಲ್ಲಿ 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಹಾಗೆಯೇ ರಾಜ್ಯಪಠ್ಯ ಕ್ರಮವನ್ನು ಅನುಸರಿಸುತ್ತಿರುವ ಬ್ರಹ್ಮಾವರದ ಎಸ್‌.ಎಂ.ಎಸ್‌. ಆಂಗ್ಲ ಮಾಧ್ಯಮ ಶಾಲೆ, ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆ, ಬಾರಕೂರು ಎಸ್‌.ವಿ.ವಿ.ಎನ್‌. ಸ್ಕೂಲ್‌, ಬ್ರಹ್ಮಾವರ ಸರಕಾರಿ ಪ್ರೌಢ ಶಾಲೆಗಳಲ್ಲಿ ಸಹಸ್ರಾರು ಮಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹೊಸ ಶಾಲೆಗಳು
ಬ್ರಹ್ಮಾವರದ ಗ್ರಾಮಾಂತರ ಭಾಗದಲ್ಲಿ ಹಲವಾರು ಆಂಗ್ಲಮಾಧ್ಯಮ ಶಾಲೆಗಳು ಹೊಸದಾಗಿ ಪ್ರಾರಂಭಗೊಂಡಿವೆ. ಕೊಕ್ಕರ್ಣೆಯ ಶ್ರೀ ದುರ್ಗಾ ಆಂಗ್ಲ ಮಾಧ್ಯಮ ಶಾಲೆ, ನಾಲ್ಕೂರು ಮುದ್ದೂರಿನ ವಿ.ಎಸ್‌.ಎಸ್‌. ನೇಶನಲ್‌ ಪಬ್ಲಿಕ್‌ ಸ್ಕೂಲ್‌, ಚೇರ್ಕಾಡಿಯ ಶಾರದಾ ಆಂಗ್ಲ ಮಾಧ್ಯಮ ಶಾಲೆ ಇತ್ತೀಚೆಗೆ ಪ್ರಾರಂಭಗೊಂಡಿವೆ.

ಪ.ಪೂ. ಕಾಲೇಜುಗಳು
ಮುಖ್ಯವಾಗಿ ಬ್ರಹ್ಮಾವರದ ಎಸ್‌.ಎಂ.ಎಸ್‌. ಪ.ಪೂ. ಕಾಲೇಜು, ಸರಕಾರಿ ಪ.ಪೂ. ಕಾಲೇಜು, ನಿರ್ಮಲಾ ಪ.ಪೂ. ಕಾಲೇಜು, ಕ್ರಾಸ್‌ಲ್ಯಾಂಡ್‌ ಪಪೂ ಕಾಲೇಜ್‌ ಬ್ರಹ್ಮಾವರ, ಬಾರಕೂರು ನೇಶನಲ್‌ ಪ.ಪೂ. ಕಾಲೇಜು, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಟೆಂಪಲ್‌ ಪ.ಪೂ. ಕಾಲೇಜು, ಕೊಕ್ಕರ್ಣೆ ಹಾಗೂ ಕರ್ಜೆಯಲ್ಲಿ ಸರಕಾರಿ ಪ.ಪೂ. ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳ ಆಶಾ ಕಿರಣವಾಗಿವೆ.

ಪದವಿ, ಸ್ನಾತಕೋತ್ತರ ಕಾಲೇಜುಗಳು
ಕ್ರಾಸ್‌ಲ್ಯಾಂಡ್‌ ಪಪೂ ಕಾಲೇಜ್‌ ಬ್ರಹ್ಮಾವರ, ಎಸ್‌.ಎಂ.ಎಸ್‌. ಕಾಲೇಜು ಮತ್ತು ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಕಾಲೇಜುಗಳು ಬ್ರಹ್ಮಾವರ ಹೋಬಳಿಯ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಾಗಿವೆ.

ತುಂಬಿ ತುಳುಕುತ್ತಿರುವ ಸರಕಾರಿ ಶಾಲೆಗಳು..!
ಪ್ರಸ್ತುತ ಎಲ್ಲೆಡೆ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಇಲ್ಲದೆ ಪರದಾಡುತ್ತಿವೆ. ಆದರೆ ಬ್ರಹ್ಮಾವರ ಬೋರ್ಡ್‌ ಶಾಲೆ ಮತ್ತು ಬಾರಕೂರಿನ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದಾರೆ. ಬ್ರಹ್ಮಾವರದ ಬೋರ್ಡ್‌ ಹೈಸ್ಕೂಲ್‌ ಮತ್ತು ಪ.ಪೂ. ಕಾಲೇಜಿನಲ್ಲಿ ಒಟ್ಟು 1,300 ವಿದ್ಯಾರ್ಥಿಗಳು ಮತ್ತು ಬಾರಕೂರು ಸರಕಾರಿ ಪದವಿ ಕಾಲೇಜಿನಲ್ಲಿ 1,600 ವಿದ್ಯಾರ್ಥಿಗಳಿದ್ದಾರೆ ಎಂದರೆ ನೀವು ನಂಬಲೇಬೇಕು..!

ಕೃಷಿ ಕಾಲೇಜು
ಶಿವಮೊಗ್ಗ ವಿ.ವಿ. ಅಧೀನದ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಶೈಕ್ಷಣಿಕ ನಗರಿಯ ಇನ್ನೊಂದು ಗರಿಮೆಯಾಗಿದೆ. ಈಗಾಗಲೇ ಡಿಪ್ಲೊಮಾ ತರಗತಿಗಳು ನಡೆಯುತ್ತಿದ್ದು, ಕೃಷಿ ಕಾಲೇಜು ಪ್ರಾರಂಭದ ನಿರೀಕ್ಷೆಯಲ್ಲಿದೆ.

ಆಶಾಕಿರಣವಾಗಿ ರುಡ್‌ಸೆಟ್‌
ನಿರುದ್ಯೋಗಿ ಯುವಕ ಯುವತಿಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ರುಡ್‌ಸೆಟ್‌ ಕೊಡುಗೆ ಅಪಾರ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್‌ ಟ್ರಸ್ಟ್‌, ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ 2001ರಲ್ಲಿ ಹೇರೂರಿನಲ್ಲಿ ಪ್ರಾರಂಭಗೊಂಡ ರುಡ್‌ಸೆಟ್‌ ಸಂಸ್ಥೆ ವಿಭಿನ್ನ ಕ್ಷೇತ್ರಗಳ ತರಬೇತಿ ನೀಡುತ್ತಿದೆ. ಇದುವರೆಗೆ ಸುಮಾರು 22,500 ಶಿಬಿರಾರ್ಥಿಗಳು ತರಬೇತಿ ಪಡೆದಿದ್ದಾರೆ.

ತಾಂತ್ರಿಕ ಶಿಕ್ಷಣ
ವಿದ್ಯಾರ್ಥಿಗಳಿಗೆ ಖಚಿತ ಉದ್ಯೋಗವನ್ನು ಕಲ್ಪಿಸುವ ತಾಂತ್ರಿಕ ಶಿಕ್ಷಣವೂ ಬ್ರಹ್ಮಾವರದಲ್ಲಿ ದೊರೆಯಲಿದೆ. ಉಪ್ಪೂರಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ನಿರ್ಮಾಣವು ಪ್ರಗತಿಯಲ್ಲಿದೆ.

ಇನ್ನು ಬ್ರಹ್ಮಾವರ ಶೈಕ್ಷಣಿಕ ವಲಯದಲ್ಲಿ ಒಟ್ಟು 185 ಪ್ರಾಥಮಿಕ ಶಾಲೆಗಳು, 63 ಪ್ರೌಢ ಶಾಲೆಗಳು ಕಾರ್ಯಾಚರಿಸುತ್ತಿವೆ.

ವಲಯದ ಹಲವಾರು ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಸಾಧನೆಗೈದಿದ್ದಾರೆ.
ಶೈಕ್ಷಣಿಕ ನಗರಿಯಾಗಿ ಬೆಳೆಯುತ್ತಿರುವ ಬ್ರಹ್ಮಾವರದಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ದೊರೆಯಲಿ. ಶಾಲೆಗಳು ಕನ್ನಡ ಮಾಧ್ಯಮವಾಗಲಿ, ಇಂಗ್ಲಿಷ್‌ ಮಾಧ್ಯಮವಾಗಲಿ, ಅನುಸರಿಸುತ್ತಿರುವ ಪಠ್ಯಕ್ರಮ ಕೇಂದ್ರೀಯವಾಗಲಿ ಅಥವಾ ರಾಜ್ಯ ಕ್ರಮವೇ ಆಗಿರಲಿ ಮಕ್ಕಳಿಗೆ ಮೌಲ್ಯಯುತ, ಗುಣಮಟ್ಟದ ಶಿಕ್ಷಣ ದೊರೆಯಲಿ ಎನ್ನುವುದು ನಮ್ಮ ಆಶಯ.

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.