ಗಾಯಕ ಶಶಾಂಕ್‌ ಶೇಷಗಿರಿ ಈಗ ಸಂಗೀತ ನಿರ್ದೇಶಕ

Team Udayavani, Jul 10, 2017, 10:50 AM IST

shashank_singer.jpg

ಚಿತ್ರರಂಗಕ್ಕೆ ಧುಮುಕಿದವರು ಯಾವಾಗ, ಏನಾಗ್ತಾರೆ ಅಂತ ಹೇಳುವುದು ಕಷ್ಟ. ಇಲ್ಲಿ ನಿರ್ದೇಶಕರು ಹೀರೋ ಆಗಿದ್ದಾರೆ. ನಿರ್ಮಾಪಕರು ನಿರ್ದೇಶಕರಾಗಿದ್ದೂ ಉಂಟು, ಹೀರೋಗಳು ನಿರ್ದೇಶನದ ಜತೆಗೆ ನಿರ್ಮಾಪಕರಾಗಿದ್ದೂ ಹೌದು. ಗಾಯಕರು ತೆರೆಮೇಲೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ ಕೂಡ.

ಈಗ ಗಾಯಕ ಶಶಾಂಕ್‌ ಶೇಷಗಿರಿ ಸರದಿ. ಹಾಗಂತ, ಇವರು ಹೀರೋ ಆಗುತ್ತಿಲ್ಲ. ಬದಲಾಗಿ ಅವರೀಗ ಸಂಗೀತ ನಿರ್ದೇಶಕರಾಗಿದ್ದಾರೆ. ಹೌದು, ಕನ್ನಡದ ಅಪ್ಪಟ ಗಾಯಕ ಶಶಾಂಕ್‌ ಶೇಷಗಿರಿ, ಇದೀಗ ಸಂಗೀತ ನಿರ್ದೇಶಕರಾಗಿದ್ದಾರೆ. “ಎಂಸಿಬಿ’ (ಮಿಡಲ್‌ ಕ್ಲಾಸ್‌ ಬಾಯ್ಸ) ಎಂಬ ವಿಡಿಯೋ ಆಲ್ಬಂಗೆ ಸಂಗೀತ ನೀಡುವ ಮೂಲಕ ಸಂಗೀತ ಸಂಯೋಜಕರಾಗಿದ್ದಾರೆ. ಅಷ್ಟೇ ಅಲ್ಲ, ಅವರ ಕೈಯಲ್ಲೀಗ ಕನ್ನಡದ ನಾಲ್ಕು ಚಿತ್ರಗಳಿವೆ.

ಆ ಪೈಕಿ ಭುವನ್‌ ಪೊನ್ನಣ್ಣ ಅಭಿನಯದ “ರಾಂಧವ’ ಎಂಬ ಹೊಸಬರ ಸಿನಿಮಾಗೆ ಮೊದಲ ಸಲ ಸಂಗೀತ ನೀಡುತ್ತಿದ್ದಾರೆ ಶಶಾಂಕ್‌ ಶೇಷಗಿರಿ. ಸುನೀಲ್‌ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಶಶಾಂಕ್‌ ಐದು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಈಗಾಗಲೇ ಹಾಡುಗಳು ರೆಡಿಯಾಗಿದ್ದು, ಸಿನಿಮಾ ಮುಹೂರ್ತಕ್ಕೂ ಮುನ್ನವೇ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ಹೊಸ ತಂಡದ್ದು.

ಅಂದಹಾಗೆ, ಶಶಾಂಕ್‌ ಶೇಷಗಿರಿ ಇದುವರೆಗೆ 350 ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡಿದ್ದಾರೆ. 2007 ರಲ್ಲಿ “ಹಾಡಿನ ಬಂಡಿ’ ಮೂಲಕ ಗಾಯನ ಜರ್ನಿ ಶುರುಮಾಡಿದ ಶಶಾಂಕ್‌ ಹಾಡಿದ ಮೊದಲ ಚಿತ್ರ ನಾಗೇಂದ್ರ ಪ್ರಸಾದ್‌ ನಿರ್ದೇಶನದ “ಮೇಘವೇ ಮೇಘವೇ’. ಅಲ್ಲಿಂದ ಕನ್ನಡದ ಸ್ಟಾರ್‌ ನಟರಾದ ಶಿವರಾಜಕುಮಾರ್‌, ಸುದೀಪ್‌, ಪುನೀತ್‌, ದರ್ಶನ್‌, ಯಶ್‌ ಸೇರಿದಂತೆ ಅನೇಕ ಹೀರೋಗಳ ಚಿತ್ರಗಳಿಗೆ ಹಾಡಿದ್ದಾರೆ. ವಿಶೇಷವೆಂದರೆ, ಹೀರೋ ಇಂಟ್ರಡಕ್ಷನ್‌ ಸಾಂಗ್‌ ಹಾಡಿರುವುದು ಇವರ ಹೆಗ್ಗಳಿಕೆ.

365 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಶಶಾಂಕ್‌ ಶೇಷಗಿರಿ ಅವರಿಗೆ “ಬೆಳ್ಳಿ’ ಚಿತ್ರದ “ಡೂನ ಡೂನ..’ ಹಾಡಿಗೆ ಮಿರ್ಚಿ ಅವಾರ್ಡ್‌ ಸಿಕ್ಕಿದೆ. “ದೇವದಾಸ್‌’ ಚಿತ್ರದ “ನಿಮ್ಮಪ್ಪನ ಗಂಟು ಎಲ್ಲೂ ಹೋಗಲ್ವ..’ ಹಾಡಿಗೆ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ. ದುನಿಯಾ ವಿಜಯ್‌ ಅಭಿನಯದ “ಜರಾಸಂಧ’ ಚಿತ್ರದಲ್ಲಿ ಹಾಡಿದ “ಯಾರಾದ್ರೂ ಹಾಳಾಗೋಗ್ಲಿ..’ ಹಾಡು ಇವರಿಗೆ ಹೆಸರು ತಂದುಕೊಟ್ಟಿತು.

ಅಲ್ಲಿಂದ ಸಾಕಷ್ಟು ಹಾಡುಗಳನ್ನು ಹಾಡಿರುವ ಶಶಾಂಕ್‌, ಗುರುಕಿರಣ್‌ ಒಬ್ಬರನ್ನು ಹೊರತುಪಡಿಸಿ, ಕನ್ನಡದ ಬಹಳಷ್ಟು ಸಂಗೀತ ನಿರ್ದೇಶಕರಿಗೆ ಹಾಡಿದ್ದಾರೆ. “ರಾಜಕುಮಾರ’ ಚಿತ್ರದ “ಯಾರಿವನು ಕನ್ನಡದವನು…’ ಹಾಡಿಗೆ ದನಿಯಾಗಿರುವ ಶಶಾಂಕ್‌ ಶೇಷಗಿರಿ, ತಮಿಳು, ತುಳು, ಹಿಂದಿಯಲ್ಲೂ ಹಾಡಿದ್ದಾರೆ.

ಅಕ್ಷಯ್‌ಕುಮಾರ್‌, ಕತ್ರಿನಾಕೈಫ್ ಅಭಿನಯದ “ಜಾಸ್ಮಿನ್‌’ ಚಿತ್ರಕ್ಕೆ ಶಶಾಂಕ್‌ ಹಾಡಿದ್ದರು. ಆದರೆ, ಆ ಸಿನಿಮಾ ಕಾರಣಾಂತರದಿಂದ ನಿಂತುಹೋಗಿದೆ. ಮಾಸ್‌ ಹೀರೋಗಳ ಇಂಟ್ರಡಕ್ಷನ್‌ ಸಾಂಗ್‌ಗೆ ಬ್ರಾಂಡ್‌ ಆಗಿದ್ದ ಶಶಾಂಕ್‌ ಶೇಷಗಿರಿ, ಅಜನೀಶ್‌ ಲೋಕನಾಥ್‌ “ಶ್ರೀಕಂಠ’ದಲ್ಲಿ ಕೊಟ್ಟ “ಅಂತರಂಗದೂರಿಗೆ..’ ಎಂಬ ಮೆಲೋಡಿ ಹಾಡನ್ನೂ ಹಾಡಿದ್ದಾರೆ.

ಟಾಪ್ ನ್ಯೂಸ್

 MUDAದಲ್ಲಿ ಯಾವ ಹಗರಣವೂ ನಡೆದಿಲ್ಲ: ಸಚಿವ ಭೈರತಿ ಸುರೇಶ್‌

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

DK-Shivakumar

H.D.Kumaraswamyಗೆ ನನ್ನ ನೆನಪಿಸಿಕೊಳ್ಳದಿದ್ದರೆ ತಲೆ ಓಡಲ್ಲ: ಡಿಕೆಶಿ ಕಿಡಿ

1-ewqwewqewq

Olympics; ಯಾವುದೇ ಒತ್ತಡಕ್ಕೊಳಗಾಗದಿರಿ:ಕ್ರೀಡಾಪಟುಗಳಿಗೆ ಮೋದಿ ಕಿವಿಮಾತು

Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ

Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Mangaluru ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

 MUDAದಲ್ಲಿ ಯಾವ ಹಗರಣವೂ ನಡೆದಿಲ್ಲ: ಸಚಿವ ಭೈರತಿ ಸುರೇಶ್‌

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Malpe ಸಕಾಲದಲ್ಲಿ ಬಾರದ 108 ಆ್ಯಂಬುಲೆನ್ಸ್‌; ಪ್ರಾಣ ಉಳಿಸಿದ ಈಶ್ವರ್‌ ಮಲ್ಪೆ ತಂಡ

Malpe ಸಕಾಲದಲ್ಲಿ ಬಾರದ 108 ಆ್ಯಂಬುಲೆನ್ಸ್‌; ಪ್ರಾಣ ಉಳಿಸಿದ ಈಶ್ವರ್‌ ಮಲ್ಪೆ ತಂಡ

DK-Shivakumar

H.D.Kumaraswamyಗೆ ನನ್ನ ನೆನಪಿಸಿಕೊಳ್ಳದಿದ್ದರೆ ತಲೆ ಓಡಲ್ಲ: ಡಿಕೆಶಿ ಕಿಡಿ

1-ewqwewqewq

Olympics; ಯಾವುದೇ ಒತ್ತಡಕ್ಕೊಳಗಾಗದಿರಿ:ಕ್ರೀಡಾಪಟುಗಳಿಗೆ ಮೋದಿ ಕಿವಿಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.