![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jul 10, 2017, 11:35 AM IST
ಬೆಂಗಳೂರು: ಕಳೆದ ವರ್ಷ ಗೋ ಚಾತುರ್ಮಾಸ್ಯದ ಮೂಲಕ ಗೋಸಂರಕ್ಷಣೆ ಸಂದೇಶ ಸಾರಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಈ ಬಾರಿ ಅಭಯ ಚಾತುರ್ಮಾಸ್ಯವನ್ನು ಆರಂಭಿಸುವ ಮೂಲಕ ಗೋವುಗಳಿಗೆ ಅಭಯ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಭಾನುವಾರ ನಗರದ ಗಿರಿನಗರ ರಾಮಾಶ್ರಮದಲ್ಲಿ ರಾಘವೇಶ್ವರ ಶ್ರೀಗಳು, ಗೋ ಕಲಾಕೃತಿಗೆ ಹಸ್ತಾಕ್ಷರ ನೀಡುವ ಮೂಲಕ ಅಭಯ ಚಾತುರ್ಮಾಸ್ಯಕ್ಕೆ ಚಾಲನೆ ನೀಡಿದರು. ಇದೇ ವೇಳೆ ಅಭ್ಯಾಕ್ಷರ ಆಂದೋಲನದ ಬಗ್ಗೆಯೂ ಘೋಷಿಸಿದ ಅವರು, “ಗೋವು ಕತ್ತರಿಸುವ ಕತ್ತಿಗೆ ಲೇಖನಿಯಿಂದ ಉತ್ತರ ನೀಡುವ, ರಕ್ತಕ್ಕೆ ಶಾಯಿಯಿಂದ ಪ್ರತಿಕ್ರಿಯಿಸಲು” ಈ ಆಂದೋಲನ ಮೀಸಲಾಗಿದೆ ಎಂದು ಹೇಳಿದರು.
ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಉದ್ಯಮಿ ಪವನ್ ಶೇಟ್, ಪಶುವೈದ್ಯ ಡಾ.ಬಸವರಾಜ ಬಿರಾದಾರ್, ಹವ್ಯಕ ಸಭಾ ಅಧ್ಯಕ್ಷ ಡಾ.ಗಿರಿಧರ್ ಕಜೆ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಗೋವಿಜಾnನಿ ಡಾ.ಕೆ.ಪಿ.ರಮೇಶ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷೆ ವಿಜಯಲಕ್ಷಿ ದೇಶಮಾನೆ, ಜೆಡಿಎಸ್ ಮುಖಂಡ ಲಕ್ಷಿನಾರಾಯಣ ಉಪಸ್ಥಿತರಿದ್ದರು.
ರಾಜ್ಯಾದ್ಯಂತ 5 ಕೋಟಿ ಅಭಯಾಕ್ಷರ ಸಂಗ್ರಹ: ಅಭಯ ಚಾತುರ್ಮಾಸ್ಯ ಹಾಗೂ ಹಾಲು ಹಬ್ಬ ಕಾರ್ಯಕ್ರಮ ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಇದರ ಜತೆಗೆ ರಾಜ್ಯದ್ಯಾಂತ ಸಂಚರಿಸಲಿರುವ ಗೋ ಅಭಯಾಕ್ಷರ ಯಾತ್ರೆ 5 ಕೋಟಿ ಜನರ ಸಹಿ ಸಂಗ್ರಹಿಸುವ ಗುರಿ ಹೊಂದಿದೆ.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.