ರಾಜಧಾನಿ ರಸ್ತೆಗೆ ಟ್ರಿಣ್ ಟ್ರಿಣ್ ಸೈಕಲ್!
Team Udayavani, Jul 10, 2017, 11:35 AM IST
ಬೆಂಗಳೂರು: ನಗರದಲ್ಲಿ ಮಾಲಿನ್ಯ ಪ್ರಮಾಣ ನಿಯಂತ್ರಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಬೈಸಿಕಲ್ ಸೇವೆ “ಟ್ರಿಣ್ ಟ್ರಿಣ್’ ಯೋಜನೆ ಆರಂಭಿಸಲು ಬಿಬಿಎಂಪಿ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಯೋಜನೆ ರೂಪಿಸಿವೆ.
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ಮೈಸೂರು ಮಾದರಿಯಲ್ಲಿ ಬಾಡಿಗೆ ಸೈಕಲ್ ಯೋಜನೆ ಜಾರಿಗೆ ಡಲ್ಟ್ ಯೋಜನೆ ರೂಪಿಸಿದ್ದು, ಅದರ ಅನುಷ್ಠಾನಕ್ಕೆ ಬಿಬಿಎಂಪಿಯ ಸಹಕಾರ ಕೋರಿದೆ. ಅದರಂತೆ ಯೋಜನೆ ಜಾರಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಟ್ರಿಣ್ ಟ್ರಿಣ್ ಯೋಜನೆ ಜಾರಿಗೊಳಿಸಲು ಪಾಲಿಕೆ ಹಾಗೂ ಡಲ್ಟ್ ಒಂದಾಗಿವೆ. ಅದರಂತೆ ಪ್ರತಿ 250 ರಿಂದ 350 ಮೀ. ದೂರದಲ್ಲಿ ಒಂದು ಸೈಕಲ್ ನಿಲುಗಡೆ ತಾಣ ನಿರ್ಮಿಸುವ ಉದ್ದೇಶವಿದ್ದು, ಒಟ್ಟಾರೆ 25 ಕಿ.ಮೀ. ವ್ಯಾಪ್ತಿಯಲ್ಲಿ 350 ಸೈಕಲ್ ನಿಲುಗಡೆ ತಾಣ ನಿರ್ಮಿಸಲು ನಿರ್ಧರಿಸಲಾಗಿದೆ.
ಸೇವೆ ಆರಂಭಿಸಿದ ನಂತರದಲ್ಲಿ ಜನರಿಗೆ ಬೈಸಿಕಲ್‌ಗಳ ಕೊರತೆ ಉಂಟಾಗದಂತೆ ಪ್ರಾರಂಭಿಕ ಹಂತದಲ್ಲಿ 5 ಸಾವಿರ ಬೈಸಿಕಲ್‌ಗಳನ್ನು ಬಾಡಿಗೆಗೆ ದೊರೆಯುವಂತೆ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಪ್ರತಿ ನಿಲುಗಡೆ ತಾಣದಲ್ಲಿ 14-15 ಬೈಸಿಕಲ್‌ಗಳು ಇರಲಿವೆ.
ಸಾರ್ವಜನಿಕರು ಸ್ವೆ„ಪಿಂಗ್ ಕಾರ್ಡ್ (ಸ್ಮಾರ್ಟ್ ಕಾರ್ಡ್) ಬಳಸಿ ಸೈಕಲ್‌ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಅದಕ್ಕೂ ಮೊದಲು ತಮ್ಮ ದಾಖಲೆಗಳನ್ನು ಸಲ್ಲಿಸಿ, ಸ್ವೆ„ಪಿಂಗ್ ಕಾರ್ಡ್ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಸೈಕಲ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಸಾರ್ವಜನಿಕ ಬೈಸಿಕಲ್ ಶೇರಿಂಗ್ ವ್ಯವಸ್ಥೆ ಮೂಲಕ 48 ಸೈಕಲ್ ನಿಲುಗಡೆ ತಾಣಗಳಲ್ಲಿ 450 ಸೈಕಲ್‌ಗಳು ಬಾಡಿಗೆಗೆ ದೊರೆಯಲಿವೆ. ಸೈಕಲ್ ಬಾಡಿಗೆಗೆ ಪಡೆಯುವವರಿಗೆ ಸದಸ್ಯತ್ವ ಕಾರ್ಡ್ ನೀಡಲಾಗುತ್ತಿದ್ದು, ಕಾರ್ಡ್‌ಗೆ ವಾರದಿಂದ ವರ್ಷದವರೆಗೆ ಬಳಸಿಕೊಳ್ಳುವಷ್ಟು ಹಣವನ್ನು (ರೀಚಾರ್ಜ್) ತುಂಬಬಹುದಾಗಿದೆ. ಮೈಸೂರಿನಲ್ಲಿ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಅದೇ ಮಾದರಿಯಲ್ಲಿ ಯೋಜನೆ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನಗರದ ಕೇಂದ್ರ ವ್ಯಾಪಾರಿ ವಲಯದಲ್ಲಿ ಸೈಕಲ್ ಬಾಡಿಗೆ ನೀಡುವ ಯೋಜನೆ ಜಾರಿ ಕುರಿತಂತೆ ಡಲ್ಟ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸೈಕಲ್‌ಗಳನ್ನು ಬಾಡಿಗೆ ನೀಡುವ ಸ್ಥಳಗಳನ್ನು ಗುರುತಿಸಿದ ನಂತರ ಸೈಕಲ್ ಸವಾರರ ಅನುಕೂಲಕ್ಕಾಗಿ ಪಾಲಿಕೆಯಿಂದ ಸೈಕಲ್ ಪಥವನ್ನು ನಿರ್ಮಿಸಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.