ಜಲ ಸಂರಕ್ಷಣೆ: ಮಾದರಿಗಳೇ ಮಾತಾಗಬೇಕು


Team Udayavani, Jul 10, 2017, 1:06 PM IST

10-ISIRI-3.jpg

ಜಲ ಸಂರಕ್ಷಣೆಯ ಸಂಗತಿಯನ್ನು ನಾವು ಜಗತ್ತಿಗೆ ದೊಡ್ಡದಾಗಿ ಯಾವತ್ತೂ ಹೇಳಬೇಕಾಗಿಲ್ಲ, ಅದರ ಅಗತ್ಯವಿಲ್ಲ. ನಮ್ಮ ನೀರಿನ ಕಾಳಜಿಯನ್ನು ಊರಿನ ಜನಕ್ಕೆ ಮೊದಲು ಹೇಳಬೇಕು, ಸಾಬೀತುಪಡಿಸಬೇಕು. ಜಲಕಾಯಕ ಹೇಗೆ ಮಾಡಬೇಕೆಂದು ಜೊತೆ ನಿಂತು ನಾವು ಶ್ರಮಿಸಿದರೆ ಬದಲಾವಣೆ ಮೂಡಿಸಬಹುದು.  ಜಲ ಆಂದೋಲನ ಆಳಕ್ಕಿಳಿಯಲು ನೆಲಮೂಲದ ಅನುಭವಗಳ ಮೂಲಕ ಮಾತಾಡುವ ಅಗತ್ಯವಿದೆ.

ಜಲ ಜಾಗೃತಿಯ ಮಾತಾಡುವಾಗೆಲ್ಲ ಒಂದಿಷ್ಟು ರಚನಾತ್ಮಕ ಉದಾಹರಣೆ ಎದುರಿಡುತ್ತೇವೆ. ಕದಂಬ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರ ಕಾಲಗಳಲ್ಲಿ ಕೆರೆ ನಿರ್ಮಾಣಗಳ ಚಾರಿತ್ರಿಕ ದಾಖಲೆ ಹೇಳುತ್ತೇವೆ. ಈಗ ಕೆರೆ ಕಟ್ಟಿದವರು, ಕೃಷಿ ಹೊಂಡದಿಂದ ಗೆದ್ದವರು, ಛಾವಣಿ ನೀರಿನ ಕೊಯ್ಲು ಮಾಡಿದವರು, ಕಾಡುಗುಡ್ಡಗಳಲ್ಲಿ ನೀರಿಂಗಿಸಿದವರ ಸಚಿತ್ರ ದಾಖಲೆ ಹಿಡಿದು ವಿವರಿಸುತ್ತೇವೆ. ಶಾಲೆಗಳು, ಆಸ್ಪತ್ರೆ, ಉದ್ದಿಮೆಗಳು ನೀರಿನ ಸಂರಕ್ಷಣೆಗೆ ಇಟ್ಟ ಹೆಜ್ಜೆ ಪರಿಚಯಿಸುವುದು ಮುಖ್ಯ ಉದ್ದೇಶ.  ಇವುಗಳ ಪ್ರೇರಣೆಯಿಂದ ಇನ್ನಷ್ಟು ಕೆಲಸಗಳು ನಡೆಯಬೇಕೆಂಬ ಆಶಯವಿದೆ. ಜಲ ಕಾಯಕದ ಅನುಭವದಲ್ಲಿ ಹೇಳುವುದಾದರೆ ಉದಾಹರಣೆಗಳು ನೇರ ಉತ್ತರವಾಗುವುದಿಲ್ಲ. ನಿಶ್ಚಿತವಾಗಿ ಯಾರು ಏನು ಮಾಡಬೇಕು? ಹೇಗೆ ಮಾಡಬೇಕೆಂದು ತೋರಿಸದಿದ್ದರೆ ಕಾಯಕ ಮುಂದಕ್ಕೆ ಹೋಗುವುದಿಲ್ಲ. 

ಜಲ ಸಂರಕ್ಷಣೆಯ ಪರಿಚಯಗಳು ಒಂದು ಹಂತದಲ್ಲಿ ನಮ್ಮ ಕೃಷಿ ವಿಜಾnನಿಗಳು ಬರೆಯುತ್ತಿದ್ದ ಫಾರ್ಮುಲಾ ಬರಹಗಳಂತೆ ನಿಗದಿತ ಸಿದ್ಧ ಮಾದರಿಗೆ ಅಂಟಿಕೊಳ್ಳುತ್ತವೆ. ಓದುಗರನ್ನು ಸೆಳೆಯುವಂತೆ, ಅರ್ಥವಾಗುವಂತೆ ಭಾಷೆ ಬಳಕೆಯಲ್ಲಿ ಹೊಸತನ ಬೆಳೆಸುವುದು ಸವಾಲಿನ ಕೆಲಸ. ಕಡಿಮೆ ಮಳೆ ಸುರಿಯಿತು, ನೀರಿಗೆ ಬಹಳ ಕಷ್ಟವಿತ್ತು, ನೀರು ಹಿಡಿದು  ಇವರು ಗೆದ್ದರು, ಇಷ್ಟು ಹಣ ಖರ್ಚಾಯಿತು. ಇಂಥ ಮಾದರಿ ಪ್ರಯೋಜನವಾಯೆ¤ಂದು ಮಾಮೂಲಿಯಾಗಿ ಹೇಳುತ್ತೇವೆ. ನೀರು ಹಿಡಿದವರ ಹೆಸರು, ಸ್ಥಳ ಬದಲಿಸಿದರೆ ಬಹುತೇಕ ಒಂದೇ ರೀತಿಯಲ್ಲಿದೆಯೆಂದು ಓದುಗರು ತಿಳಿಯುತ್ತಾರೆ. ನೀರಿಲ್ಲದವರು ನೀರಿಂಗಿಸಿ ಗೆದ್ದರೆಂದು ಮಾಹಿತಿ ಸಂಗ್ರಸಿ ಹೇಳುವುದು ಬಹಳ ಸುಲಭ. ತಾಂತ್ರಿಕ ಮಾಹಿತಿ, ಸಾಧಕರ ಹೇಳಿಕೆ, ಇತಿಹಾಸದ ದಾಖಲೆ ಪೋಣಿಸಿ ಬರಹ ಬರೆಯಬಹುದು. ಈಗಂತೂ ಜಾಲತಾಣಗಳಿಂದ ವೇಗದಲ್ಲಿ ಮಾಹಿತಿ  ಪಡೆಯಬಹುದು. ಆದರೆ ಜಲ ಸಂರಕ್ಷಣೆಯ ಸತ್ಯಗಳು, ಮಾರ್ಗಗಳು ಯಾವತ್ತೂ ಬರಹದಷ್ಟು ಸರಳವೂ ಅಲ್ಲ, ಸುಲಭವೂ ಅಲ್ಲ. ಹೀಗಾಗಿ ನಮ್ಮ ಉದಾಹರಣೆಗಳು ಕೆಲವೊಮ್ಮೆ ಸಮಸ್ಯೆ ಪರಿಹಾರದ ಹತ್ತಿರವೂ ಸುಳಿಯುವುದಿಲ್ಲ.  

ಒಂದು ಮಾದರಿ ಪರಿಸರಕ್ಕೆ ಯೋಗ್ಯವಾಗುವುದು, ಜನ ಅಳವಡಿಸಿಕೊಳ್ಳುವುದು, ಅನುಭವದ ಪಾಠದಲ್ಲಿ ಪರಿವರ್ತನೆ ನಡೆಯುವುದು ನಿರಂತರ ಕ್ರಿಯೆಯಾಗಿರುತ್ತದೆ. ಪ್ರತಿ ಹಂತದಲ್ಲಿ ಕೆಲಸಗಾರರ ಕಲಿಕೆ ನಡೆಯುತ್ತದೆ. ನಮ್ಮ ನೋಟಕ್ಕೆ ದೊರೆಯುವ ಮಾದರಿ, ಚಿತ್ರ, ಮಾತುಗಳ ಹೊರತಾದ ಬಹುದೊಡ್ಡ ಅಂಶಗಳು ಅರ್ಥವಾಗಲು ಸ್ವಲ್ಪವಾದರೂ ನೀರಿಗಿಳಿಯಬೇಕಾಗುತ್ತದೆ. ಕೆಲಸಕ್ಕೆ ದುಮುಕಬೇಕಾಗುತ್ತದೆ. ಸಮಯ ಕೊಡುವುದು ಹೇಗೆ? ಅವರೇನು ಹೇಳುತ್ತಾರೆ? ಇವರೇನು ಟೀಕಿಸುತ್ತಾರೆ? ತಪ್ಪಾದರೆ ಕಷ್ಟವೆಂದು ಹಿಂಜರಿಕೆಯಲ್ಲಿದ್ದರೆ ಕಲಿಕೆ ಯಾವತ್ತೂ ಸಾಧ್ಯವಾಗುವುದಿಲ್ಲ. ಉದಾಹರಣೆ ಉಲ್ಲೇಖದ ಘಟ್ಟದಿಂದ ನಾವು ಉತ್ತರ ಹೇಳುವ ಹಂತಕ್ಕೆ ಬಂದು ಮಾಡಿ ಹೇಳಬೇಕಾಗುತ್ತದೆ.  

ಜನರ ಜೊತೆ ಮಾತಾಡುವುದು. ವಿವಿಧ ಜಾತಿ, ಪಂಗಡಗಳ ಮನವೊಲಿಸುವುದು, ಹಣಕಾಸಿನ ವ್ಯವಸ್ಥೆ ಹೊಂದಿಸುವುದು, ಸಹಾಯ ನೀಡಿದವರನ್ನು ಗೌರವಿಸುವುದನ್ನು ಕಾಯಕ ಕಲಿಸುತ್ತದೆ. ಇದನ್ನು ಪದಗಳಲ್ಲಿ ಹೇಳಲಾಗುವುದಿಲ್ಲ.  ಕೆಲಸ ನಡೆಯುವಾಗ ಬರುವ ಸಲಹೆಗಳಲ್ಲಿ ಯೋಗ್ಯವಾದುದನ್ನು ಸ್ವೀಕರಿಸುವುದು ಮುಖ್ಯವಿದೆ. ಜಲ ಸಂರಕ್ಷಣೆ, ಜನ ಸಂಘಟನೆಯ ಕನಿಷ್ಟ ಜಾnನವಿಲ್ಲದವರೂ ದೊಡ್ಡ ದೊಡ್ಡ ಸಲಹೆ ನೀಡುವಾಗ ನಯವಾಗಿ ನಿರಾಕರಿಸಿ ಮುಖ್ಯ ಕೆಲಸ ಮುಂದುವರಿಸಲು ಸಂಯಮ, ಜಾಣ್ಮೆಗಳು ಬೇಕು. ಸಮಾಜಕಾರ್ಯದ ನೋವು ನುಂಗಿ ಮುನ್ನೆಡೆಯಲು “ಹುಂಬು ಧೈರ್ಯ, ಹುಚ್ಚು ಸಾಹಸ’  ಬೇಕಾಗುತ್ತದೆ.  ವಿಶೇಷವೆಂದರೆ ಯಾವುದೇ ಹಳ್ಳಿ, ವ್ಯಕ್ತಿ ಒಮ್ಮೆ ನೀರಿಂಗಿಸಿ ಗೆದ್ದ ಬಳಿಕ ಸಕಾರಾತ್ಮ ಅಂಶಗಳಷ್ಟೇ ಜೋರಾಗಿ ಹೊರಬೀಳುತ್ತವೆ. ಸಿನಿಮೀಯವಾಗಿ ಜಲಕಾಯಕ ಬಹಳ ಸರಳ ಕೆಲಸವೆಂಬಂತೆ ಕಾಣಿಸುತ್ತದೆ. ಹತ್ತು ದಿನ ಕಾದಂಬರಿ ಓದಿದವರಲ್ಲಿ ಐದು ನಿಮಿಷದಲ್ಲಿ ಕತೆ ಕೇಳಿದಂತೆ ಶ್ರಮದ ಕೆಲಸವನ್ನು ಸರಳಕ್ಕೆ ಯಾವತ್ತೂ ಸೆರೆಹಿಡಿಲಾಗುವುದಿಲ್ಲ. ವರ್ಣನೆಗಳು ಸೋಲುತ್ತವೆ, ಕೆಲಸಗಳು ಕತೆಯ ಹಂತದಲ್ಲಿ ಕಾಣಿಸುತ್ತವೆ. 

ಒಮ್ಮೆ  ಕಾರ್ಯಕ್ರಮದಲ್ಲಿ ಮಾತಾಡಿದ ಅಧಿಕಾರಿಯೊಬ್ಬರು  ಶ್ರಮದಾನದ ಮೂಲಕ ಕೆರೆ ಕೆಲಸ ಮಾಡಬಹುದೆಂದು ಉಪದೇಶಿಸಿದರು. ಮನೆಗೆಲಸಕ್ಕೆ ಯಂತ್ರ ಹುಡುಕುವಷ್ಟು ಜನ ಶ್ರಮ ದುಡಿಮೆಯಿಂದ ದೂರ ಸರಿದಿದ್ದಾರೆ. ಕೆಲಸ ಮಾಡಲು ಬರುತ್ತಾರೆಯೇ? ಮಾರ್ಮಿಕವಾಗಿ ಜನ ಪ್ರಶ್ನಿಸಿದರು. ಜನರನ್ನು ಶ್ರಮಕ್ಕೆ ಅಣಿಗೊಳಿಸಲು ವಿಶ್ವಾಸವೃದ್ಧಿಯ ಕಾರ್ಯ ಮಹತ್ವದ್ದಾಗಿದೆ. ಧಾರವಾಡದಲ್ಲಿ ಸ್ವಯಂ ಸೇವಾ ಸಂಸ್ಥೆಯ ಇಬ್ಬರು ಯುವಕರು ಜನರನ್ನು ಸಂಘಟಿಸಿ ಕಳೆದ ವರ್ಷ ತೆರೆದ ಬಾವಿ ಸ್ವತ್ಛಗೊಳಿಸಿದರು. ತಮ್ಮ ದೈನಂದಿನ ಕೆಲಸ ಬಿಟ್ಟು ಬಾವಿ ಸ್ವತ್ಛತೆಯ ಕಾರ್ಯಕ್ಕೆ ದುಡಿಯಲು ಯುವಕರಿಬ್ಬರು ಸಮುದಾಯದ ಜೊತೆ ಬಹಳ ಶ್ರಮಿಸಿದ್ದರು, ಜಾಗೃತಿ ಮೂಡಿಸಿ ಮನವೊಲಿಸಿದ್ದರು. ಹಾಳಾದ ಬಾವಿ ಸರಿಪಡಿಸಿದ್ದಕ್ಕೆ  ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ಇತ್ತೀಚೆಗೆ ಹೊರಬಿದ್ದ ದಾಖಲೆ ಕಾರ್ಯಕರ್ತರನ್ನು ದಂಗು ಬಡಿಸಿದೆ. ಸ್ಥಳೀಯ ಗ್ರಾಮ ಪಂಚಾಯತ್‌ದವರು  ತಾವು ಈ ಬಾವಿ ಸ್ವತ್ಛಗೊಳಿಸಿದ್ದಾಗಿ ಹಣ ಖರ್ಚು ಹಾಕಿದ್ದಾರಂತೆ.  ಜಲ ಸಂರಕ್ಷಣೆ ಜನಾಂದೋಲನವಾಗಲು ಶ್ರಮಿಸಿದವರಿಗೆ ಇಡೀ ಪ್ರಕರಣ ಆತಂಕ ಹುಟ್ಟಿಸಿದೆ. ವ್ಯವಸ್ಥೆ ಹಾಳಾಗಿದೆ ಒಪ್ಪೋಣ. ಆದರೆ ಜನ ಖುಷಿಯಿಂದ ಮಾಡಿದ ಜಲಕಾಯಕದಲ್ಲಿ ಹಣ ಹೊಡೆಯುವಷ್ಟು ಹೀನಾವಸ್ಥೆಗೆ ತಲುಪಿದರೆ ಏನು ಮಾಡೋಣ? ಇಂಥ ಸಂಕಟ, ಸವಾಲುಗಳ ಮಧ್ಯೆ ಕಾಯಕ ಮುಂದುವರಿಸುವುದು ಹೇಗೆ? ಉತ್ತರ ಸರಳವಲ್ಲ. 

ಮಾಧ್ಯಮಗಳ ಪರಿಣಾಮದಿಂದ ಇಂದು ಬಹುತೇಕ ಜನಕ್ಕೆ ನೀರಿನ ಮಹತ್ವದ ಅರಿವಾಗಿದೆ. ನೀರಿಂಗಿಸಿದರೆ ಪ್ರಯೋಜನವೆಂದು ಹೇಳುತ್ತಾರೆ. ಆದರೆ ಮಾದರಿ ಅಳವಡಿಸಲು ಸಮಸ್ಯೆಇದೆ. ಮುಖ್ಯ ಸಮಸ್ಯೆ ಮನೆ ಮನೆಗೆ ಹೋಗಿ ನೀರಿಂಗಿಸುವ ತಂತ್ರ ಪರಿಚಯಿಸಿ ಸ್ಥಳೀಯ ಪರಿಸರದಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸುವವರು ಬೇಕು. ನೆಲಮೂಲದಲ್ಲಿ ಕೆಲಸ ಮಾಡಲು ಕಾರ್ಯಕರ್ತರ ಕೊರತೆ ಇದೆ. ಜಲ ಸಂರಕ್ಷಣೆಯ ದೊಡ್ಡ ಪರಿಣಿತರು ಕಾರ್ಪೂರೇಟ್‌ ವಲಯದಲ್ಲಿ ಸಿಲುಕಿದ್ದಾರೆ. ಲಕ್ಷ ಲಕ್ಷ ಬೇಡುವ ತಂತ್ರಕ್ಕಿಂತ ಬಡವರಿಗೆ ಯೋಗ್ಯವಾದ ಕಡಿಮೆ ವೆಚ್ಚದ ಜನತಾ ತಂತ್ರ ಪರಿಚಯಿಸುವವರು ಈಗ ಬೇಕು.  ಭಾಷಣ, ಬರಹ ಓದಿ ಅರಿವು ಪಡೆಯುವುದಕ್ಕೂ, ಸ್ವತಃ ಮಾಡಲು ಹೋಗುವುದಕ್ಕೂ ಅಂತರವಿದೆ. ಕೆಲಸ ಮಾಡಲು ನಿಂತವರ ಎದುರು ಪ್ರಶ್ನೆಗಳು ಕಾಡುತ್ತವೆ. 20 ವರ್ಷಗಳ ಜಲ ಕಾಯಕದ ಅನುಭವದಲ್ಲಿ ಹೇಳುವುದಾರೆ ಸಿದ್ಧ ಮಾದರಿಗಳಿಗೆ ಪ್ರತಿ ಮನೆಯಲ್ಲೂ ಸಣ್ಣಪುಟ್ಟ ಮಾರ್ಪಾಟು ಬೇಕಾಗುತ್ತದೆ. ಬೆಂಗಳೂರಿಗೆ ಯೋಗ್ಯವಾಗಿದ್ದು ತುಮಕೂರಿಗೆ ಸಲ್ಲುವುದಿಲ್ಲ. ಅಬ್ಬರದ ಮಳೆ ಸುರಿಯುವ ಉಡುಪಿಯ ಕಾಗದಾಳಿ ಮಣ್ಣಿಗೆ ಅರಣ್ಯ ನೀರುಳಿಸುವಷ್ಟು ಪರಿಣಾಮಕಾರಿಯಾಗಿ ಇಂಗುಗುಂಡಿ ಉತ್ತರವಾಗುವುದಿಲ್ಲ. ಪರಿಸರದ ನಡುವಿಂದ ಹುಟ್ಟುವ ಮಾದರಿ ಗೆಲ್ಲುವಷ್ಟು ಎರವಲು ತಂತ್ರ ಫ‌ಲ ನೀಡುವುದಿಲ್ಲ. ಎರೆ ಹೊಲದ ಜಲತಜ್ಞತೆ ಮಸಾರಿ ಮಣ್ಣಿಗೆ ಒಗ್ಗುವುದಿಲ್ಲ. 

ನೆಲದ ಮಳೆ ಅರಿತು, ಮಣ್ಣು ಗಮನಿಸಿ ಸುತ್ತಲಿನ ಪರಿಸರ, ಕೃಷಿ ಅರ್ಥಮಾಡಿಕೊಂಡು ಕಲಿಯುವ ಕಾರ್ಯಕರ್ತರು ನೀರಿನ ಕೆಲಸಕ್ಕೆ ಬೇಕು. ಉಪನ್ಯಾಸದ ತಾಂತ್ರಿಕ ಮಾಹಿತಿ, ಪುಸ್ತಕದ ಜಾnನ, ಅವರಿವರ ಹೇಳಿಕೆ ಅನುಸರಣೆಗಿಂತ  ನೆಲದಲ್ಲಿ ಬೇರಿಳಿಸಿದರೆ ನೀರಿಗೆ 
ಲಾಭವಾಗುತ್ತದೆ. ರಾಜ್ಯದಲ್ಲಿ ಕೊಳವೆ ಬಾವಿಗಳಿಗೆ ನೀರಿಂಗಿಸುವುದು ಸರಕಾರೀ ಕೆಲಸವಾಗಿದೆ. ಇಂಗುಗುಂಡಿಯ ಸುತ್ತ ಕಟ್ಟೆಕಟ್ಟಿ ಮಳೆ ನೀರು ಇಂಗುಗುಂಡಿಗೆ ಬರುತ್ತಿಲ್ಲ. ನಾಳೆ ಯಾರಾದರೂ ಅಧ್ಯಯನ ಮಾಡಿದರೆ “ಕೊಳವೆ ಬಾವಿಗೆ ನೀರಿಂಗಿಸಿದರೆ ಪ್ರಯೋಜನವಿಲ್ಲ’ ಮಾತು ಕೇಳಬಹುದು. ಮಾಡುವ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಆಸಕ್ತಿವಹಿಸುವವರಿಲ್ಲದಿದ್ದರೆ ಕಾಯಕ ನಿಶøಯೋಜನ. ಸರಕಾರಿ ಅಂಕಿಸಂಖ್ಯೆ ಎದುರಿಟ್ಟುಕೊಂಡು ನಾವು ಕುಳಿತಲ್ಲಿಯೇ ಇಷ್ಟು ಕೋಟಿ ಲೀಟರ್‌ ನೀರು ಕೊಳವೆ ಬಾವಿಗೆ ಇಂಗಿತೆಂದು ಬರೆಯಲಾಗುವುದಿಲ್ಲ. ನದಿ, ಕೆರೆ ತುಂಬಿದಾಗ ನೀರಿನ ನೋಟ ಇಮೇಲ್‌, ವಾಟ್ಸ್‌ಪ್‌ , ಫೇಸ್‌ಬುಕ್‌ಗಳಲ್ಲಿ ಬಹಳ ಸೊಗಸಾಗಿಯೇ ಕಾಣಿಸುತ್ತದೆ. ಹತ್ತು ಜನರನ್ನು ಸೇರಿಸಿಕೊಂಡು ಬುಟ್ಟಿ ಮಣ್ಣು ಹೊತ್ತರಷ್ಟೇ ಬೆರಗಿನ ಬಿಸಿ ತಿಳಿಯುತ್ತದೆ. ಜಲ ಸಂರಕ್ಷಣೆಯ ಸಂಗತಿಯನ್ನು ನಾವು ಜಗತ್ತಿಗೆ ದೊಡ್ಡದಾಗಿ ಯಾವತ್ತೂ ಹೇಳಬೇಕಾಗಿಲ್ಲ, ಅದರ ಅಗತ್ಯವಿಲ್ಲ. ನಮ್ಮ ನೀರಿನ ಕಾಳಜಿಯನ್ನು ಊರಿನ ಜನಕ್ಕೆ ಮೊದಲು ಹೇಳಬೇಕು. ಹೇಗೆ ಮಾಡಬೇಕೆಂದು ಜೊತೆ ನಿಂತು ನಾವು ಶ್ರಮಿಸಿದರೆ ಬದಲಾವಣೆ ಮೂಡಿಸಬಹುದು.  

ಶಿವಾನಂದ ಕಳವೆ

ಟಾಪ್ ನ್ಯೂಸ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

6

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

5

Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.